ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ತೆಲುಗಿಗೆ ಬೊಮನ್ ಇರಾನಿ

Last Updated 18 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಬಾಲಿವುಡ್‌ನ ಬಹುಮುಖ ಪ್ರತಿಭೆ ಬೊಮನ್‌ ಇರಾನಿ, ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅವರ ಮುಂದಿನ ಚಿತ್ರ ‘ನಾ ಪೇರು ಸೂರ್ಯ’ ಚಿತ್ರದಲ್ಲಿ ಖಳನಾಯಕ ಪಾತ್ರದಲ್ಲಿ ಮಿಂಚಲಿದ್ದಾರೆ.

ಡಿಜೆ ಚಿತ್ರದ ಚಿತ್ರೀಕರಣ ಈಗತಾನೆ ಮುಗಿಸಿರುವ ಅಲ್ಲು ಅರ್ಜುನ್, ವಕ್ಕಂತಮ್ ವಂಶಿ ನಿರ್ದೇಶಿಸುತ್ತಿರುವ ‘ನಾ ಪೇರು...’ ಚಿತ್ರಕ್ಕೆ ತಯಾರಾಗುತ್ತಿದ್ದಾರೆ.

ತೆಲುಗಿನ ‘ಅತ್ತಾರಿಂಟಿಕಿ ದಾರೇದಿ’ ಮತ್ತು ‘ಬೆಂಗಾಲ್ ಟೈಗರ್’ ಚಿತ್ರದಲ್ಲಿ ನಟಿಸಿ ತೆಲುಗು ಚಿತ್ರಸಿಕರ ಮನಗೆದ್ದಿರುವ ಬೊಮನ್‌ ಈಗ ಅಲ್ಲು ಅವರೊಂದಿಗೆ ನಟಿಸುತ್ತಿರುವುದು ಸಹಜವಾಗಿಯೇ  ಕುತೂಹಲ ಕೆರಳಿಸಿದೆ. ಈ ಚಿತ್ರದಲ್ಲಿ ಕಿರಿಕ್ ಪಾರ್ಟಿ ಚಿತ್ರದ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿ ಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT