ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂಗಿಸುವುದು ಬೇಡ

Last Updated 18 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಆಹಾರ ಪದ್ಧತಿ ಕುರಿತು ಕ್ಯಾಪ್ಟನ್‌ ಜಿ.ಆರ್‌. ಗೋಪಿನಾಥ್‌ ಅವರು ಬರೆದಿರುವ ಲೇಖನಕ್ಕೆ (ಸಂಗತ, ಏ. 17) ಪ್ರತಿಕ್ರಿಯೆ. ಯಾರು ಏನನ್ನಾದರೂ ತಿನ್ನಲಿ ಅದಕ್ಕೆ ನನ್ನ ಅಭ್ಯಂತರವಿಲ್ಲ. ಮನುಷ್ಯನಾದಿಯಾಗಿ ಎಲ್ಲ ಪ್ರಾಣಿಗಳು ಬದುಕಲಿ ಎನ್ನುವುದು ಭಾರತೀಯ ದಾರ್ಶನಿಕರ ವಿಚಾರಧಾರೆ. ಅದನ್ನು ಮರೆಯಬಾರದು ಎಂಬುದು ಮನವಿ.

ಎಲ್ಲ ಪ್ರಾಣಿಗಳಿಗಿಂತ ಬುದ್ಧಿಜೀವಿ ಎನಿಸಿಕೊಂಡಿರುವ ಮನುಷ್ಯ, ಹಿಂಸೆಯಿಂದ  ಅಹಿಂಸೆಯ ಕಡೆಗೆ ಸಾಗಲು ಪ್ರಯತ್ನಿಸುತ್ತಾನೆ. ಈ  ಪಯಣದಲ್ಲಿ ಶಕ್ತಿಗೆ ಅನುಗುಣವಾಗಿ ಆತ ತನ್ನ ಆಹಾರ ಪದ್ಧತಿಯನ್ನು ರೂಪಿಸಿಕೊಂಡಿದ್ದಾನೆ. ‘ನಾನೊಬ್ಬನೇ ಬದುಕಬೇಕು’ ಎನ್ನುವವರೂ ಇದ್ದಾರೆ. ಅವರ ಇಷ್ಟದಂತೆ ಅವರೂ ಬದುಕಲಿ. ಆದರೆ ಯಾರೂ ಯಾರನ್ನೂ ಹಂಗಿಸಬೇಕಿಲ್ಲ. ಅಲ್ಲವೇ?
-ಪ್ರೊ. ಜೀವಂಧರಕುಮಾರ ಕೆ. ಹೋತಪೇಟಿ ಶ್ರವಣಬೆಳಗೊಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT