ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುಧವಾರ, 19–4–1967

Last Updated 18 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ನಗರದಲ್ಲಿ ಮಹಾಜನ್‌
ಬೆಂಗಳೂರು, ಏ. 18–
ಏಕಸದಸ್ಯ ಗಡಿ ಆಯೋಗದ ಸದಸ್ಯ ಮಹಾಜನ್‌ ಅವರು ವಿಮಾನದಲ್ಲಿ ನಗರಕ್ಕೆ ಆಗಮಿಸಿದರು.

ಮಹಾರಾಷ್ಟ್ರ–ಮೈಸೂರು ಹಾಗೂ ಕೇರಳ– ಮೈಸೂರು ರಾಜ್ಯಗಳ ನಡುವಿನ ಗಡಿ ವಿವಾದಗಳ ಬಗ್ಗೆ ನಾಳೆಯಿಂದ 3 ದಿನಗಳ ಕಾಲ ನಗರದಲ್ಲಿ ಸಾಕ್ಷ್ಯವನ್ನು ಸಂಗ್ರಹಿಸಲಿರುವ ಶ್ರೀಯುತರನ್ನು ಮುಖ್ಯ ಕಾರ್ಯದರ್ಶಿ ಕೆ. ನಾರಾಯಣಸ್ವಾಮಿ, ಗಡಿ ಪ್ರಶ್ನೆಗೆ ಸಂಬಂಧಿಸಿದ ರಾಜ್ಯದ ವಿಶೇಷಾಧಿಕಾರಿ

ಕೆ. ಬಾಲಸುಬ್ರಹ್ಮಣ್ಯಂ, ಕಾರ್ಪೊರೇಷನ್‌ ಕಮೀಷನರ್‌  ಕೆ.ಎನ್‌.ಎಸ್‌. ಮೂರ್ತಿ ಹಾಗೂ ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ಮೋಸೆಸ್‌ ಅವರುಗಳು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು.

**

ಮಹಾಜನ್‌ ಆಯೋಗದ ಕಾರ್ಯವ್ಯಾಪ್ತಿ– ಕೇಂದ್ರದ ವಿವರಣೆಗಾಗಿ ಕೇಳಿಕೆ
ಬೆಂಗಳೂರು, ಏ. 18–
ಮಹಾರಾಷ್ಟ್ರದ ನಾಲ್ಕು ತಾಲ್ಲೂಕುಗಳನ್ನು ಮೈಸೂರಿಗೆ ಸೇರಿಸುವಂತೆ ಮೈಸೂರು ರಾಜ್ಯದ ಕೇಳಿಕೆಯು ತನ್ನ ಕಾರ್ಯವ್ಯಾಪ್ತಿಗೆ ಸೇರುವುದೇ? ಎಂದು ಮಹಾಜನ್‌ ಆಯೋಗವು ಕೇಂದ್ರ ಸರಕಾರದಿಂದ ಸ್ಪಷ್ಟೀಕರಣ ಕೇಳಿದೆಯೆಂದು ಗೊತ್ತಾಗಿದೆ.

ಅಕ್ಕಲಕೋಟೆ, ಸೊಲ್ಲಾಪುರ, ಜತ್‌ ಮತ್ತು ಚಂದಘಡ ಈ ತಾಲ್ಲೂಕುಗಳನ್ನು ಪೂರ್ಣವಾಗಿ ಮೈಸೂರಿಗೆ ಸೇರಿಸಬೇಕೆಂದು ಮೈಸೂರು ಸರಕಾರವು ಈ ಆಯೋಗಕ್ಕೆ ಸಲ್ಲಿಸಿರುವ ಮನವಿಯಲ್ಲಿ ಕೇಳಿದೆ.

ಮಾರ್ಚಿ 31 ರಂದು ರಾಜ್ಯ ಸರಕಾರವು ತನ್ನ ಮನವಿಪತ್ರವನ್ನು ಆಯೋಗಕ್ಕೆ ಸಲ್ಲಿಸಿತು.

ಮೈಸೂರಿಗೆ ವರ್ಗಾಯಿಸಲು ಮಹಾರಾಷ್ಟ್ರವೇ ಒಪ್ಪಿರುವ 260 ಗ್ರಾಮಗಳ ಜೊತೆಗೆ ಈ ನಾಲ್ಕು ತಾಲ್ಲೂಕುಗಳನ್ನು ಮೈಸೂರಿಗೆ ವರ್ಗಾಯಿಸಬೇಕೆಂದು ಒತ್ತಾಯಪಡಿಸಲಾಗಿದೆ.

ಶಿಸ್ತಿಲ್ಲದ ಪೋಲೀಸ್‌ ಪಡೆ ಅನಗತ್ಯ ಎಂದ ಪ್ರಧಾನಿ
ನವದೆಹಲಿ, ಏ. 18–
ಕಳೆದ ಮೂರು ದಿನಗಳ ಅವಧಿಯಲ್ಲಿ ರಾಜಧಾನಿಯಲ್ಲಿ ಪೋಲೀಸರು ತೋರಿದ ಅಶಿಸ್ತನ್ನು ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರು
ಇಂದು ಸರ್ವಥಾ ಒಪ್ಪದೆ, ತೀವ್ರವಾಗಿ ವಿರೋಧಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT