ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇ 14ರಿಂದ ಪೆಟ್ರೋಲ್‌ ಪಂಪ್‌ಗೆ ಭಾನುವಾರ ರಜೆ

Last Updated 18 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಚೆನ್ನೈ: ಕರ್ನಾಟಕವೂ ಸೇರಿದಂತೆ 8 ರಾಜ್ಯಗಳಲ್ಲಿ ಮೇ 14 ರಿಂದ ಪೆಟ್ರೋಲ್‌ ಪಂಪ್‌ಗಳು ಭಾನುವಾರ ಕಾರ್ಯ ನಿರ್ವಹಿಸುವುದಿಲ್ಲ.
ಪ್ರಧಾನಿ ನರೇಂದ್ರ ಮೋದಿ ಅವರ ಇಂಧನ ಉಳಿತಾಯ ಕರೆಗೆ ಅನುಗುಣವಾಗಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಪೆಟ್ರೋಲ್‌ ಪಂಪ್‌ ಮಾಲೀಕರ ಸಂಘ ತಿಳಿಸಿದೆ.

‘ಕೆಲ ವರ್ಷಗಳ ಹಿಂದೆ ಭಾನುವಾರ ಪೆಟ್ರೋಲ್‌ ಪಂಪ್‌ಗಳಿಗೆ ರಜೆ ನೀಡುವ ಬಗ್ಗೆ ನಿರ್ಧಾರಕ್ಕೆ ಬರಲಾಗಿತ್ತು.  ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಸಂಸ್ಥೆಗಳ ಮನವಿ ಮೇರೆಗೆ ಈ ನಿರ್ಧಾರ ಕೈಬಿಡಲಾಗಿತ್ತು’ ಎಂದು ಪೆಟ್ರೋಲ್‌ ವಿತರಕರ ಒಕ್ಕೂಟದ ಕಾರ್ಯಕಾರಿ ಸಮಿತಿ ಸದಸ್ಯ ಸುರೇಶ್‌ ಕುಮಾರ್‌ ತಿಳಿಸಿದ್ದಾರೆ. ಒಕ್ಕೂಟದ ಈ ನಿರ್ಧಾರವನ್ನು ತೈಲ ಮಾರಾಟ ಸಂಸ್ಥೆಗಳು ಬೆಂಬಲಿಸಿವೆಯೇ ಎನ್ನುವ ಪ್ರಶ್ನೆಗೆ ಉತ್ತರಿಸಿರುವ ಅವರು, ‘ನಮ್ಮ ನಿರ್ಧಾರವನ್ನು ಶೀಘ್ರದಲ್ಲಿಯೇ ಅವುಗಳ ಗಮನಕ್ಕೆ ತರಲಾಗುತ್ತಿದೆ. ತುರ್ತು ಸಂದರ್ಭದ ಅಗತ್ಯ ಪೂರೈಸಲು ಪೆಟ್ರೋಲ್‌ ಪಂಪ್‌ಗಳಲ್ಲಿ ಭಾನುವಾರ ಒಬ್ಬ ನೌಕರ ಕರ್ತವ್ಯದ ಮೇಲೆ ಇರುತ್ತಾನೆ ’ ಎಂದು  ಹೇಳಿದ್ದಾರೆ.

ಪರಿಸರ ಉಳಿಸಲು ಇಂಧನ ಬಳಕೆಗೆ ಕಡಿವಾಣ ವಿಧಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚಿನ ತಮ್ಮ ‘ಮನದ ಮಾತು’ ಕಾರ್ಯಕ್ರಮದಲ್ಲಿ  ಮನವಿ ಮಾಡಿಕೊಂಡಿದ್ದರು.

ಕರ್ನಾಟಕ, ಆಂಧ್ರಪ್ರದೇಶ, ಕೇರಳ, ತಮಿಳುನಾಡು, ಪುದುಚೇರಿ, ತೆಲಂಗಾಣ,  ಮಹಾರಾಷ್ಟ್ರ ಮತ್ತು ಹರಿಯಾಣ ರಾಜ್ಯಗಳಲ್ಲಿನ ಪೆಟ್ರೋಲ್‌ ಪಂಪ್‌ಗಳು  ಭಾನುವಾರ 24 ಗಂಟೆಗಳ ಕಾಲ ಬಾಗಿಲು ಹಾಕಲಿವೆ.

ಅಂಕಿ–ಅಂಶ

20,000 -ಎಂಟು ರಾಜ್ಯಗಳಲ್ಲಿನ ಪೆಟ್ರೋಲ್ ಪಂಪ್‌ಗಳ ಸಂಖ್ಯೆ

24ಗಂಟೆ -ಕಾರ್ಯನಿರ್ವಹಣೆ ಇಲ್ಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT