ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ಧಿವಿನಾಯಕ ದೇಗುಲ ಪುನರ್‌ ಪ್ರತಿಷ್ಠಾಪನೆ

Last Updated 19 ಏಪ್ರಿಲ್ 2017, 3:40 IST
ಅಕ್ಷರ ಗಾತ್ರ
ರಿಪ್ಪನ್‌ಪೇಟೆ:  ಪಟ್ಟಣದಲ್ಲಿ ₹ 1.50 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ   ಸಿದ್ಧಿ ವಿನಾಯಕ ದೇವಸ್ಥಾನ ಹಾಗೂ   ಅನ್ನಪೂಣೇಶ್ವರಿ ಅಮ್ಮನವರ  ಮತ್ತು ನವಗ್ರಹ ದೇವಸ್ಥಾನದ ಪ್ರತಿಷ್ಠಾಪನಾ ಮಹೋತ್ಸವ ಮಂಗಳವಾರ   ನಡೆಯಿತು.
 
ಶಿವಮೊಗ್ಗ ವೇದಮೂರ್ತಿ  ವಸಂತ ಭಟ್ಟರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಐದು ದಿನಗಳ ಕಾರ್ಯಕ್ರಮ ನಡೆಯಲಿದೆ. ವಿನಾಯಕ ವೃತ್ತದಿಂದ ದೇವಸ್ಥಾನದವರೆಗೆ ಮಹಿಳೆಯರು ಪೂರ್ಣ ಕುಂಭ  ಮೆರವಣಿಗೆ ನಡೆಸಿದರು.

ದೇವತಾ ಪ್ರಾರ್ಥನೆ, ಗಣಪತಿ ಪೂಜೆ, ಸ್ವಸ್ತಿ ಪುಣ್ಯಾಹವಾಚನ ನಾಂದಿ ಸಮಾರಾಧನೆ, ಮಹಾ ಸಂಕಲ್ಪ. ಋತ್ವಿಗ್ವರಣ, ಮಧುಪರ್ಕಪೂಜೆ, ಅಂಕುರಾರ್ಪಣ ಕೌತುಕ ಬಂಧನ, ಗೇಹ ಪರಿಗ್ರಹ ಹಾಗೂ ಬಿಂಬ ಪರಿಗ್ರಹ, ಸಪ್ತಶುದ್ಧಿ, ಪ್ರಸಾದ ಶುದ್ಧಿ, ವಾಸ್ತು, ರಾಕ್ಷೋಘ್ನ ಹೋಮ, ಪೂಜಾ ಬಲಿಕ್ರಿಯಾ  ಪೂಜೆ ನಡೆಯಿತು. 
 
ರಿಪ್ಪನ್‌ಪೇಟೆಯ ವ್ಯಕ್ತಿ ವಿಕಾಸ ಕೇಂದ್ರ, ಶ್ರೀರಾಮ ಸೇವಾ ಸಂಘ , ಗಜೇಂದ್ರ ಅಂಕೋಲ,  ಸುರಕ್ಷಾ, ಅನಘಾ  ಅವರಿಂದ  ಭಜನೆ ನಡೆಯಿತು. ಶ್ವೇತಾ ಹೆಗಡೆ ಕೊಳಗಿ  ‘ಯಕ್ಷ ವೈಭವ’ ನಡೆಸಿಕೊಟ್ಟರು.  ಹಿಮ್ಮೇಳದಲ್ಲಿ ಕೇಶವ ಹೆಗಡೆ ಕೊಳಗಿ, ಮದ್ದಳೆ;  ಶಂಕರ ಭಾಗವತ ಯಲ್ಲಾ ಪುರ, ಚಂಡೆ ವಿಶ್ವೇಶ್ವರ ಗೌಡ ಕೆಸರೆ ಕೊಪ್ಪ ಇದ್ದರು. ಶಿಲ್ಪಿಗಳಿಗೆ, ಸಹಕರಿಸಿದ ಮಹನೀಯರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT