ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹಕ್ಕಬುಕ್ಕರ ಇತಿಹಾಸ: ಇನ್ನಷ್ಟು ಅಧ್ಯಯನ ಅಗತ್ಯ’

Last Updated 19 ಏಪ್ರಿಲ್ 2017, 3:50 IST
ಅಕ್ಷರ ಗಾತ್ರ
ಚಿತ್ರದುರ್ಗ: ‘ಹಂಪಿಯ ವಿಜಯನಗರ ಸಾಮ್ರಾಜ್ಯ ಸ್ಥಾಪಿಸಿದ ಸಂಗಮ ವಂಶದ ಹಾಲುಮತ ಅರಸರಾದ ಹಕ್ಕಬುಕ್ಕರು, ಈ ನಾಡು ಕಂಡ ಅಪ್ರತಿಮ ವೀರರು. ಅವರ ಕುರಿತು ಹೆಚ್ಚು ಅಧ್ಯಯನ ಮಾಡಬೇಕಿದೆ’ ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಿ.ಟಿ.ಜಗದೀಶ್ ಅಭಿಪ್ರಾಯಪಟ್ಟರು.
 
ಜಿಲ್ಲಾ ಕುರುಬರ ಸಂಘ, ಹಾಲುಮತ ಮಹಾಸಭಾ, ಜಿಲ್ಲಾ ಕುರುಬರ ಮಹಿಳಾ ವೇದಿಕೆ, ಚಿತ್ರದುರ್ಗ ತಾಲ್ಲೂಕು ಕುರುಬರ ಸಂಘ, ತಾಲ್ಲೂಕು ಕನಕ ನೌಕರರ ಕ್ಷೇಮಾಭಿವೃದ್ಧಿ ಸಂಘ, ಸಂಗೊಳ್ಳಿ ರಾಯಣ್ಣ ಯುವ ಜಾಗೃತಿ ವೇದಿಕೆ, ವಿಶ್ವಹಾಲುಮತ ಯುವ ವೇದಿಕೆ ಸಹಯೋಗದಲ್ಲಿ ನಗರದ ಕನಕ ಗುರುಪೀಠ ಶಾಖಾ ಮಠದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ಹಕ್ಕಬುಕ್ಕರ ವಿಜಯನಗರ ಸಾಮ್ರಾಜ್ಯ ಸಂಸ್ಥಾಪನಾ ದಿನ’ದ ವಿಜಯೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
 
‘ಹಕ್ಕಬುಕ್ಕರನ್ನು ಒಂದು ಸಮುದಾಯಕ್ಕೆ ಸೀಮಿತಗೊಳಿಸದೇ, ಅವರ ಇತಿಹಾಸವನ್ನು ಎಲ್ಲರಿಗೂ ತಲುಪಿಸುವಂತಾಗಬೇಕು. ಇಂಥ ಅರ್ಥಪೂರ್ಣ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕು’ ಎಂದು ಆಶಿಸಿದರು.
 
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಶ್ರೀರಾಮ್ ಮಾತನಾಡಿ, ‘ಕುರುಬ ಸಮುದಾಯದವರು ಶಾಂತಿ ಪ್ರಿಯರು. ಇತ್ತೀಚೆಗೆ ಕೆಲವು ಕಡೆ ಸಮುದಾಯದವರೊಂದಿಗೆ ಸಂಘರ್ಷವಾಗಿದೆ. ಅಂಥವುಗಳನ್ನು ಸರಿಪಡಿಸಿಕೊಂಡು ಸಹೋದರರಂತೆ ಬಾಳಬೇಕು’ ಎಂದರು. 
 
ಸಮಾರಂಭ ಉದ್ಘಾಟಿಸಿದ ಜಿಲ್ಲಾ ಪಂಚಾಯ್ತಿ ಸದಸ್ಯೆ ಶಶಿಕಲಾ ಸುರೇಶ್‌ಬಾಬು ಮಾತನಾಡಿ, ‘ಮಹಿಳೆಯರು ಹಾಗೂ ಯುವಕರು ಸಮುದಾಯದ ಇತಿಹಾಸ ಅರಿಯಬೇಕು. ಬುಡಕಟ್ಟು ಸಂಸ್ಕೃತಿ ಪೋಷಿಸುವ ಕೆಲಸವಾಗಬೇಕು. ಇಂಥ ಕಾರ್ಯಕ್ರಮ ಎಲ್ಲೆಡೆ ನಡೆಯಬೇಕು’ ಎಂದು ಸಲಹೆ ನೀಡಿದರು. 
 
ಕುರುಬ ಸಮುದಾಯದ ಮುಖಂಡ ಜಿ.ಟಿ.ಸಂಪತ್ ಕುಮಾರ್ ಮಾತನಾಡಿದರು. ಕುರುಬರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಜಗನ್ನಾಥ್, ತಾಲ್ಲೂಕು ಪಂಚಾಯ್ತಿ ಸದಸ್ಯೆ ರಾಧಮ್ಮ ಜಗದೀಶ್, ಕರ್ನಾಟಕ ಪ್ರದೇಶ ಕುರುಬರ ಸಂಘದ ನಿರ್ದೇಶಕ ಕಂದಿಕೆರೆ ಸುರೇಶ್ ಬಾಬು, ಜಿಲ್ಲಾ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಡಿವಿಟಿ ಕರಿಯಪ್ಪ, ಹಾಲುಮತ ಮಹಾಸಭಾದ ರಾಜ್ಯ ಕಾರ್ಯದರ್ಶಿ ಎಮ್ಮೆಹಟ್ಟಿ ಹನುಮಂತಪ್ಪ, ತಾಲ್ಲೂಕು ಕನಕ ನೌಕರರ ಸಂಘದ ಅಧ್ಯಕ್ಷ ಕೆಂಚಪ್ಪ, ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ಜಗನ್ನಾಥ್ ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT