ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ತಳಮಟ್ಟದಿಂದ ಸಂಘಟಿಸಿ: ರಾಜುಗೌಡ

Last Updated 19 ಏಪ್ರಿಲ್ 2017, 4:52 IST
ಅಕ್ಷರ ಗಾತ್ರ
ಸುರಪುರ: ‘ಮುಂದಿನ ವರ್ಷ ವಿಧಾನಸಭೆ ಚುನಾವಣೆ ಬರುತ್ತದೆ. ಈ ಬಾರಿ ಬಿಜೆಪಿಗೆ ವಿಪುಲ ಅವಕಾಶಗಳಿವೆ. ಕಾರ್ಯಕರ್ತರು ಬಿಜೆಪಿಯನ್ನು ತಳಮಟ್ಟದಲ್ಲಿ ಸಂಘಟಿಸುವತ್ತ ಪ್ರಾಮಾಣಿಕ ಪ್ರಯತ್ನ ಮಾಡಬೇಕು’ ಎಂದು ಬಿಜೆಪಿ ಎಸ್‌ಟಿ ಮೋರ್ಚಾದ ರಾಜ್ಯ ಘಟಕದ ಅಧ್ಯಕ್ಷ ರಾಜುಗೌಡ ಹೇಳಿದರು. 
 
ನಗರದ ಬಿಜೆಪಿ ಕಾರ್ಯಾಲಯದಲ್ಲಿ ಮಂಗಳವಾರ ಜರುಗಿದ ಬಿಜೆಪಿ ತಾಲ್ಲೂಕು ಮಟ್ಟದ ಕಾರ್ಯಕಾರಣಿ ಉದ್ಘಾಟಿಸಿ ಅವರು ಮಾತನಾಡಿದರು.
 
‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ 152ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ಕನಸು ನನಸಾಗಲು ಪಕ್ಷವನ್ನು ಸಂಘಟಿಸಬೇಕು. ಈ ನಿಟ್ಟಿನಲ್ಲಿ ಎಲ್ಲ ಮೋರ್ಚಾಗಳ ಪದಾಧಿಕಾರಿಗಳು ಒಗ್ಗಟ್ಟಾಗಿ ಶ್ರಮಿಸಬೇಕು’ ಎಂದು ಸಲಹೆ ನೀಡಿದರು. 
 
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರಗೌಡ ಮಾಗನೂರ ಮಾತನಾಡಿ, ಪಕ್ಷದ ಸಂಘಟನಾತ್ಮಕ ಚಟುವಟಿಕೆಗಳು ಹಾಗೂ ಸವಾಲುಗಳು ಮತ್ತು ಅದರ ಪರಿಹಾರಗಳನ್ನು ವಿವರಿಸಿದರು. ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಅಮರಣ್ಣ ಹುಡೇದ್ ಮಾತನಾಡಿದರು. 
 
ಪ್ರಮುಖರಾದ ರಾಜಾ ಹನುಮಪ್ಪನಾಯಕ, ಎಚ್.ಸಿ.ಪಾಟೀಲ, ಸಿದ್ದನಗೌಡ ಕರಿಬಾವಿ, ವೇಣುಮಾಧವ ನಾಯಕ, ಬಸವರಾಜ ಸ್ಥಾವರಮಠ, ಮರಿಲಿಂಗಪ್ಪ ನಾಯಕ ಕರ್ನಾಳ, ನಾರಾಯಣನಾಯ್ಕ ರಾಠೋಡ, ಅನಸೂಬಾಯಿ ಶಾಂತಿಲಾಲ ರಾಠೋಡ, ಲಕ್ಷ್ಮಿದೊಡ್ಡ ದೇಸಾಯಿ, ಕಿಶೋರಚಂದ ಜೈನ, ಸಲೀಂ ವರ್ತಿ, ಸಂಗನಗೌಡ ಪಾಟೀಲ, ದೇವಣ್ಣ ಮಲಗಲದಿನ್ನಿ, ಪರಮಣ್ಣ ಕಕ್ಕೇರಾ, ರಮೇಶಶೆಟ್ಟಿ, ಇಸ್ಮಾಯಿಲ್ ನೂರಿ, ಎಂಡಿ ಇಸ್ಮಾಯಿಲ್, ರಾಜು ಹವಾಲ್ದಾರ, ಚಂದ್ರಶೇಖರ ಜಡಿಮರಳ, ಶ್ರೀಕಾಂತ ಸುಬೇದಾರ, ವೆಂಕಟರಡ್ಡಿ ಅಬ್ಬೆತುಮಕೂರ, ಅಪ್ಪಸಾಹೇಬಗೌಡ ಅಗ್ನಿ, ಮೋತಿಲಾಲ ಚವಾಣ, ವೆಂಕಟೇಶ ರಾಠೋಡ, ರಾವುತರಾಯ ಕಮತಗಿ, ಭೀಮಣ್ಣ ಬೇವಿನಾಳ, ಮಾಳಪ್ಪ ದೇವರಗಡ್ಡಿ, ಬಸವರಾಜಪ್ಪಗೌಡ ಮುದನೂರ, ನರಸಪ್ಪ ಚಾಮನಾಳ, ಬಲಭೀಮನಾಯಕ ಬೈರಿಮಡ್ಡಿ, ವಿಜಯಕುಮಾರ ಸಪ್ತಗಿರಿ, ಸಣ್ಣ ದೇಸಾಯಿ, ಮಾನಪ್ಪ ಹುಲಕಲ, ಶಿವರಾಜ ಅವಂಟಿ, ನರಸಿಂಹಕಾಂತ ಪಂಚಮಗಿರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT