ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಮಾಜ ಸೇವೆಯಲ್ಲಿ ತೊಡಗಿ’

Last Updated 19 ಏಪ್ರಿಲ್ 2017, 5:00 IST
ಅಕ್ಷರ ಗಾತ್ರ

ಬೆಳಗಾವಿ: ಯುವಜನರು ನಿಸ್ವಾರ್ಥ ಮನೋ ಭಾವದಿಂದ ಸಮಾಜ ಸೇವೆ ಯಲ್ಲಿ ತೊಡಗಬೇಕು ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಶಿವಾನಂದ ಹೊಸಮನಿ ಇಲ್ಲಿ ಹೇಳಿದರು.ನಗರದ ಭಾರತ ಕಾಲೊನಿಯ ಮಹಿಳಾ ಕಲ್ಯಾಣ ಸಂಸ್ಥೆ ಸಭಾಂಗಣದಲ್ಲಿ ಮಂಗಳವಾರ ನಡೆದ ಮಹಿಳಾ ಕಲ್ಯಾಣ ಸಂಸ್ಥೆಯ ಸೇವಾಮಿತ್ರ ಸಮಾಜಕಾರ್ಯ ಮಹಾವಿದ್ಯಾಲಯದ ದಶಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ದುರ್ಬಲರು, ಅಂಗವಿಕಲರು, ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗಾಗಿ ಪ್ರಾಮಾಣಿಕವಾಗಿ ಸೇವೆ ಮಾಡಿದರೆ ಸಂತೃಪ್ತಿ ಪಡೆಯಲು ಸಾಧ್ಯ’ ಎಂದು ಅಭಿಪ್ರಾಯಪಟ್ಟರು.

ಲಿಂಗರಾಜ ಕಾಲೇಜಿನ ನಿವೃತ್ತ ಪ್ರಾಚಾರ್ಯ ಬಸವರಾಜ ಜಗಜಂಪಿ, ‘ಇಂದು ಮಹಿಳೆ ಸುಶಿಕ್ಷಿತಳಾಗಿದ್ದಾಳೆ. ಆದರೆ ಸುರಕ್ಷಿತವಾಗಿಲ್ಲ. ಮಹಿಳೆ ಮೇಲೆ ನಿರಂತರ ಶೋಷಣೆಗಳು ನಡೆಯುತ್ತಿವೆ’ ಎಂದು ವಿಷಾದ ವ್ಯಕ್ತಪಡಿಸಿದರು.‘ಯುವಜನರು ಪ್ರಾಮಾಣಿಕತೆ, ನಿರಂತರ ಪ್ರಯತ್ನ, ಬದ್ಧತೆ ಬೆಳೆಸಿ ಕೊಂಡಾಗ ಯಶಸ್ಸು ಸಾಧಿಸಬಹುದು’ ಎಂದು ತಿಳಿಸಿದರು.

ಪ್ರಾಯೋಗಿಕ ಜ್ಞಾನ ಪಡೆದರೆ:
ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕಿ ಎಸ್‌.ಎಸ್. ಬಳ್ಳಾರಿ ಮಾತನಾಡಿ, ‘ನಿರಂತರ ಪ್ರಯತ್ನದಿಂದ ಯಶಸ್ಸು ಸಿಗಬಲ್ಲದು. ಮಹಿಳೆಯರು ವಿವಾಹದ ನಂತರವೂ ಕೌಟುಂಬಿಕ ಜವಾಬ್ದಾರಿಗಳ ಜೊತೆಗೆ ಅಂದುಕೊಂಡಿದ್ದನ್ನು ಮಾಡಬಹುದು’ ಎಂದರು.
ಬಡ್ಸರ್್ ಸಮಾಜಕಾರ್ಯ ಮಹಾ ವಿದ್ಯಾಲಯದ ಪ್ರಾಚಾರ್ಯ ಬಿ.ಕೆ. ಬಲರಾಮ, ‘ಸಮಾಜಸೇವೆ ಹಾಗೂ ಸಮಾಜ ಕಾರ್ಯಕ್ಕೆ ವ್ಯತ್ಯಾಸವಿದೆ.

ಮಾಜ ಕಾರ್ಯದಲ್ಲಿ ಪ್ರಾಯೋಗಿಕ ಹಾಗೂ ಸೈದ್ಧಾಂತಿಕ ಜ್ಞಾನ ಪಡೆದರೆ ಸಮಾಜದಲ್ಲಿರುವ ಅನೇಕ ಸಮಸ್ಯೆ ಗಳನ್ನು ಹೋಗಲಾಡಿಸಲು ಸಹಕಾರಿ ಯಾಗುತ್ತದೆ. ಇಂತಹ ಸಮಾಜಕಾರ್ಯ ಶಿಕ್ಷಣ ನೀಡುತ್ತಿರುವ ಸೇವಾಮಿತ್ರ ಸಮಾಜಕಾರ್ಯ ಮಹಾವಿದ್ಯಾಲಯ ದಶಮಾನೋತ್ಸವ ಆಚರಿಸುತ್ತಿರುವುದು ಶ್ಲಾಘನೀಯ’ ಎಂದು ಹೇಳಿದರು.

ಬಸವ ಬೆಳವಿಯ ಚರಂತೇಶ್ವರ ಮಠದ ಶರಣ ಬಸವ ಸ್ವಾಮೀಜಿ, ‘ಪ್ರಸ್ತುತ ದಿನಗಳಲ್ಲಿ ಸಂಸ್ಥೆಗಳನ್ನು ನಡೆಸುವುದು ಕಷ್ಟದ ಕೆಲಸ. ಮಾನವೀಯ ಮೌಲ್ಯಗಳು ಅಧಃ ಪತನವಾಗಿರುವ ಈ ಸಂದರ್ಭದಲ್ಲಿ ಸುದೀರ್ಘ 40 ವರ್ಷ ಮಹಿಳಾ ಕಲ್ಯಾಣ ಸಂಸ್ಥೆಯನ್ನು ಪ್ರಾಮಾಣಿಕವಾಗಿ ನಡೆಸಿ ಕೊಂಡು ಬಂದಿರುವುದು ಕಡಿಮೆ ಸಂಗತಿಯೇನಲ್ಲ’ ಎಂದು ತಿಳಿಸಿದರು.

‘ಪುರುಷರು ವ್ಯಸನಿಗಳಾಗುತ್ತಿರು ವುದರಿಂದ ಕೌಟುಂಬಿಕ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಅವು ಗಳನ್ನು ಹೋಗಲಾಡಿಸಲು ಸಮಾಜಸೇವೆ ಅವಶ್ಯ. ಸಾಮಾಜಿಕ ಸಮಸ್ಯೆಗಳನ್ನು ಹೋಗಲಾಡಿಸಲು ಜಾಗೃತಿ ಜಾಥಾ, ಬೀದಿನಾಟಕಗಳು ಆಯೋಜಿಸುತ್ತಿರು ವುದು ಒಳ್ಳೆಯ ಬೆಳವಣಿಗೆ’ ಎಂದು ಹೇಳಿದರು.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಮಾಜ ಕಾರ್ಯ ವಿಭಾಗದ ವಿಭಾಗ ಮುಖ್ಯಸ್ಥ ಅಶೋಕ ಡಿಸೋಜಾ, ವಿಜಯಾ ಹಿರೇಮಠ, ಮಹಿಳಾ ಕಲ್ಯಾಣ ಸಂಸ್ಥೆ ಅಧ್ಯಕ್ಷ ಸರೋಜಿನಿ ಪಾಟೀಲ, ಗೌರವ ಕಾರ್ಯದರ್ಶಿ ವೈಜಯಂತಿ ಚೌಗಲಾ, ಖಜಾಂಚಿ ಸುಲೋಚನಾ ಭಟ್ಟ ಉಪಸ್ಥಿತರಿದ್ದರು. ಸೇವಾ ಮಿತ್ರ ಸಮಾಜಕಾರ್ಯ ಮಹಾವಿದ್ಯಾಲಯದ ಪ್ರಾಚಾರ್ಯರಾದ ಸುರೇಖಾ ಪಾಟೀಲ ಸ್ವಾಗತಿಸಿದರು. ಉಪನ್ಯಾಸಕಿ ಕವಿತಾ ಅಕ್ಕಿ ನಿರೂಪಿಸಿದರು. ಉಪನ್ಯಾಸಕ ಅಡಿವೆಪ್ಪಾ ಇಟಗಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT