ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದಗ ವೈದ್ಯಕೀಯ ಕಾಲೇಜಿಗೆ ಜಿಲ್ಲಾ ಆಸ್ಪತ್ರೆ ಹಸ್ತಾಂತರ

Last Updated 19 ಏಪ್ರಿಲ್ 2017, 5:02 IST
ಅಕ್ಷರ ಗಾತ್ರ

ಗದಗ: ಜಿಲ್ಲಾ ಆಸ್ಪತ್ರೆಯನ್ನು ಗದಗ ವೈದ್ಯಕೀಯ ವಿಜ್ಞಾನಗಳ ಮಹಾವಿದ್ಯಾಲಯಕ್ಕೆ (ಜಿಮ್ಸ್‌) ಹಸ್ತಾಂತರಿಸಲಾಗಿದ್ದು, ಈ ಎರಡೂ ಸಂಸ್ಥೆಗಳ ಸಿಬ್ಬಂದಿ, ವೈದ್ಯರ ಮಧ್ಯೆ ಮಾನಸಿಕವಾಗಿ ಹೊಂದಾಣಿಕೆ ಮಾಡಿಕೊಳ್ಳಲು ಇದೇ 29ರ ವರೆಗೆ ಗಡುವು ನೀಡಲಾಗಿದೆ.ಹಸ್ತಾಂತರದ ನಂತರ ರೋಗಿಗಳಿಂದ ಚಿಕಿತ್ಸೆ ಲಭಿಸುತ್ತಿಲ್ಲ, ವೈದ್ಯರಿಲ್ಲ, ಸಿಬ್ಬಂದಿ ಇಲ್ಲ ಎನ್ನುವ ಯಾವುದೇ ದೂರುಗಳು ಬರಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ. ಪಾಟೀಲ ಹೇಳಿದರು.
ಮಂಗಳವಾರ ಅವರು ಎರಡೂ ಸಂಸ್ಥೆಗಳ ವೈದ್ಯರು, ಸಿಬ್ಬಂದಿ ಜತೆ ಸಮನ್ವಯ ಸಭೆ ನಡೆಸಿದರು.

ವಿಲೀನದ ಹಿನ್ನೆಲೆಯಲ್ಲಿ ಹಣಕಾಸಿಗೆ ಸಂಬಂಧಿಸಿದಂತೆ ಇರುವ ಕೆಲ ತಾಂತ್ರಿಕ ತೊಂದರೆ ಸರಿಪಡಿಸಲು ಉಪ ವಿಭಾಗಾಧಿಕಾರಿ ಪಿ.ಎಸ್. ಮಂಜುನಾಥ ಅವರಿಗೆ ಸಚಿವರು ಸೂಚಿಸಿದರು.ಜಿಲ್ಲಾ ಆಸ್ಪತ್ರೆ ಜಿಮ್ಸ್ ಸುಪರ್ದಿಗೆ ಬರುವುದರಿಂದ ಇದರ ನಿರ್ವಹಣೆ ಸುಲಭವಾಗಲಿದೆ. ಜತೆಗೆ ಆಸ್ಪತ್ರೆಗೆ ಬರುತ್ತಿದ್ದ ಅನುದಾನ ಎಲ್ಲವೂ ಒಂದೆಡೆ ಕ್ರೋಢೀಕರಣವಾಗಲಿದೆ. ಜೊತೆಗೆ ವೈದ್ಯಕೀಯ ವಿದ್ಯಾರ್ಥಿಗಳೂ  ತುರ್ತು ಸೇವೆಗೆ ಲಭ್ಯವಾಗುತ್ತಾರೆ ಎಂದು  ಜಿಮ್ಸ್ ನಿರ್ದೇಶಕ ಡಾ. ಪಿ.ಎಸ್. ಭೂಸರಡ್ಡಿ ಅವರು ಹೇಳಿದರು.

ಜಿಮ್ಸ್‌ ನಿರ್ದೇಶಕ ಡಾ.ಪಿ.ಎಸ್. ಭೂಸರಡ್ಡಿ, ಜಿಲ್ಲಾ ಆಸ್ಪತ್ರೆ ಶಸ್ತ್ರಚಿಕಿತ್ಸಕ ಡಾ. ಜಿ.ಎಸ್. ಪಲ್ಲೇದ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಪಿ.ಎಚ್. ಕಬಾಡಿ, ಡಾ.ಪ್ರಶಾಂತ ಅಡಿಗ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT