ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇತನಕ್ಕಾಗಿ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ

Last Updated 19 ಏಪ್ರಿಲ್ 2017, 5:19 IST
ಅಕ್ಷರ ಗಾತ್ರ

ವಿಜಯಪುರ: ವೇತನ ನೀಡಲು ಒತ್ತಾಯಿಸಿದ ಪೌರ ಕಾರ್ಮಿಕರು, ತಮ್ಮ ಸ್ವಚ್ಛತಾ ಕೆಲಸ ಸ್ಥಗಿತಗೊಳಿಸಿ ಮಹಾನಗರ ಪಾಲಿಕೆಯ ಹಳೆ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯ ದರ್ಶಿ ಲಕ್ಷ್ಮಣ ಹಂದ್ರಾಳ ಮಾತನಾಡಿ ಈ ಹಿಂದೆ ವೇತನಕ್ಕಾಗಿ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತರು ಇದೇ 15ರೊಳಗೆ ಕಾರ್ಮಿಕರ ಎರಡು ತಿಂಗಳ ವೇತನವನ್ನು ಖಾತೆಗೆ ಜಮಾ ಮಾಡುವ ಭರವಸೆ ನೀಡಿದ್ದರಿಂದ ಅನಿರ್ಧಿಷ್ಟ ಧರಣಿ ಸತ್ಯಾಗ್ರಹ  ಹಿಂಪಡೆಯಲಾಗಿತ್ತು, ಆದರೆ ಇದೀಗ ಅವರು ಹೇಳಿದ ದಿನದ ಮೇಲೆ ಮತ್ತೇ ಮೂರು ದಿನ ಹೆಚ್ಚಾದರೂ, ನೀಡಿದ ಭರವಸೆ ಮಾತ್ರ ಭರವಸೆ ಯಾಗಿಯೇ ಉಳಿದಿದೆ ಎಂದು ಕಿಡಿಕಾರಿದರು.

ವೇತನವನ್ನೇ ನಂಬಿ ಬದುಕುವ ಕಾರ್ಮಿಕರಿಗೆ ಮೂರು ತಿಂಗಳಿಂದ ವೇತನ ನೀಡದಿರುವುದರಿಂದ ಕುಟುಂಬ ನಿರ್ವಹಣೆಗೆ ತುಂಬಾ ತೊಂದರೆಯಾ ಗಿದೆ. ಬಟವಡೆ ಮಾಡಿರುವುದಿಲ್ಲ. ಇದನ್ನೇ ನಂಬಿ ಬದುಕುವ ಕಾರ್ಮಿಕರು ಬೇಸತ್ತು ಹೋಗಿದ್ದಾರೆ. ಅಲ್ಲದೆ 2012 ರಿಂದ ವೇತನದಲ್ಲಿ ಪಿ.ಎಫ್ ಹಣವನ್ನು ಕಡಿತಗೊಳಿಸಿದರೂ, ಇದುವರೆಗೂ ಸರಿಯಾದ ದಾಖಲೆಗಳನ್ನು ಒದಗಿಸಿಲ್ಲ. ಇಎಸ್ಐ ಕಾರ್ಡ್‌ ವಿತರಣೆ ಮಾಡಿಲ್ಲ ಎಂದು ದೂರಿದರು.

ಸೋಮಪ್ಪ ಆಯಟ್ಟಿ ಮಾತನಾಡಿ ಕಾರ್ಮಿಕರಿಗೆ ಪ್ರತಿ ತಿಂಗಳು ವೇತನ ನೀಡದಿರುವುದರಿಂದ ಕುಟುಂಬ ನಿರ್ವಹಣೆ ಮಾಡಲು ಸಮಸ್ಯೆಯಾಗು ತ್ತದೆ. ಅಲ್ಲದೇ ವಿನಾಃ ಕಾರಣ ವೇತನ ಕಡಿತಗೊಳಿಸಲಾಗುತ್ತಿದೆ. ಕಾರ್ಮಿಕರಿಗೆ ನೀಡುತ್ತಿರುವ ಬೆಳಗಿನ ಉಪಹಾರ ಕಳಪೆ ಮಟ್ಟದಾಗಿರುತ್ತದೆ. ಈ ಕುರಿತು ಮಹಾನಗರ ಪಾಲಿಕೆ ಗಮನಕ್ಕೆ ತಂದರು ಸರಿಯಾಗಿ ಸ್ಪಂದಿಸುತ್ತಿಲ್ಲ.

ಆಯುಕ್ತರು ಕೂಡಲೇ ಎಚ್ಚೆತ್ತು ಕೊಂಡು ಈ ಎಲ್ಲ ಸಮಸ್ಯೆಗಳಿಗೆ ಪರಿ ಹಾರ ಕಂಡುಕೊಳ್ಳಬೇಕು. ಇಲ್ಲದಿದ್ದರೇ ಇದೇ 20ರಿಂದ ಹಳೆಯ ಮಹಾನಗರ ಪಾಲಿಕೆ ಕಚೇರಿಯಿಂದ ಹೊಸ ಮಹಾ ನಗರ ಪಾಲಿಕೆ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಮಹಾನಗರ ಪಾಲಿಕೆ ಯಲ್ಲಿ ಅನಿರ್ಧಿಷ್ಟ ಅವಧಿಯ ಮುಷ್ಕರ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಸದಾಶಿವ ಚಂಚಲಕರ, ಗುರಪ್ಪ ದಲಾಲ, ಭಾಸ್ಕರ ಬೋರಗಿ, ವಿಜಯ ಕುಮಾರ ಬೆಳ್ಳುಂಡಗಿ, ರೇಣುಕಾ ವಾಘಮೋರೆ, ಮೀನಾಕ್ಷಿ, ಪೀರಪ್ಪ ಚಲವಾದಿ, ಗೋವಿಂದ ನಾಯಕ, ತಿಮ್ಮವ್ವ ಮುದ್ದೇಬಿಹಾಳ, ಕಮಲಾ ಬಾಯಿ, ಪಂಡಿತ ರಾಠೋಡ, ಸುಶೀಲಾ ಕಂಬಳಿ, ರಘುನಾಥ ಪುಕಾಳೆ, ಮಹಾದೇವಿ ಹಾದಿಮನಿ, ದಯಾನಂದ ಅಲಿಯಾಬಾದ, ಸಮೀರ ಶಿರೋಳ, ಭೀಮಣ್ಣ ಪೂಜಾರಿ ಪ್ರತಿಭಟನೆಯಲ್ಲಿ ದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT