ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರುಕಟ್ಟೆಗೆ ಮಾವು; ಬೆಲೆ ಏರಿಕೆ ಕಾವು

Last Updated 19 ಏಪ್ರಿಲ್ 2017, 5:26 IST
ಅಕ್ಷರ ಗಾತ್ರ

ಗದಗ: ಜಿಲ್ಲೆ ವಿವಿಧ ಮಾರುಕಟ್ಟೆಗಳಲ್ಲಿ ಈಗ ಹಣ್ಣಿನ ರಾಜ ಮಾವು ದಾಂಗುಡಿ ಇಟ್ಟಿದೆ. ಮೊಸಂಬಿ, ಕಿತ್ತಾಳೆ, ಸೇಬು, ದ್ರಾಕ್ಷಿ ಹಾಗೂ ಬಾಳೆಹಣ್ಣು ಮೆರೆಯು ತ್ತಿದ್ದ ಜಾಗದಲ್ಲಿ ಸದ್ಯ ಮಾವಿನ ಹಣ್ಣಿನ ದರ್ಬಾರ್‌ ಜೋರಾಗಿದೆ. ಮಾರುಕಟ್ಟೆಯ ಸಿಂಹಾಸನದ ಮೇಲೆ ವಿರಾಜಮಾನವಾಗಿ ರುವ ಮಾವಿನ ಹಣ್ಣಿನ ಬೆಲೆಯ ಕುರಿತೇ ಈಗ ಎಲ್ಲರ ಬಾಯಲ್ಲಿ ಚರ್ಚೆ.

ಸಾಮಾನ್ಯವಾಗಿ ಏಪ್ರಿಲ್ ತಿಂಗಳ ಆರಂಭದಲ್ಲಿ ಮಾರುಕಟ್ಟೆ ಲಗ್ಗೆ ಇಡುತ್ತಿದ್ದ ಮಾವು, ಈ ಬಾರಿ ಮಾರ್ಚ್‌ ಪ್ರಾರಂಭ ದಲ್ಲೇ ಮಾರುಕಟ್ಟೆಗೆ ಬಂದಿದೆ. ಮಳೆ ಕೊರತೆ ಹಾಗೂ ಹವಾಮಾನದ ವೈಪ ರಿತ್ಯ ನಡುವೆಯೂ ನಿಗದಿತ ಅವಧಿಗಿಂತ ಮೊದಲೇ ಮಾವಿನ ಹಣ್ಣು ಮಾರುಕಟ್ಟೆಗೆ ಬಂದಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳ ಅಭಿಪ್ರಾಯ.

ಗದುಗಿನ ಮುಂಡರಗಿ, ಹುಲಕೋಟಿ, ಕುರ್ತಕೋಟಿ, ರೋಣ, ಡಂಬಳ, ಶಿರ ಹಟ್ಟಿ ಹಾಗೂ ಲಕ್ಷ್ಮೇಶ್ವರ ಸೇರಿ ವಿವಿಧ ಕಡೆಗಳಲ್ಲಿ ಮಾವಿನ ತೋಟಗಳಿವೆ. ಬದಾಮಿ (ಅಲ್ಫಾನ್ಸೋ), ದಶೇರಿ, ತೋತಾಪುರಿ, ಮಲ್ಲಿಕಾ ತಳಿಯ ಮಾವಿನ ಗಿಡಗಳನ್ನು ಬೆಳೆಯಲಾಗಿದೆ.‘ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಬಾರಿ ಜಿಲ್ಲೆಯಲ್ಲಿ ಬೆಳೆದ ಮಾವಿನ ಹಣ್ಣು ಗಳ ಗಾತ್ರ ಸ್ವಲ್ಪ ಚಿಕ್ಕದಾಗಿವೆ. ಮಳೆಯ ಕೊರತೆ, ನೀರಿನ ಅಭಾವದಿಂದ ಮಾವಿನ ಗಿಡಗಳಿಗೆ ಪ್ರಮುಖವಾಗಿ ತೇವಾಂಶದ ಕೊರತೆ ಅಧಿಕವಾಗಿ ಕಾಡಿತು’ ಎನ್ನುತ್ತಾರೆ ತೋಟಗಾರಿಕೆ ಇಲಾಖೆಯ ಅಧಿಕಾರಿ ವೈ.ಎಚ್.ಜಾಲವಾಡಗಿ.

ನಗರದ ಮಾರುಕಟ್ಟೆಗಳಿಗೆ ರತ್ನಗಿರಿ, ದೇವಗಡ, ಹುಲಕೋಟಿ, ಕುರ್ತಕೋಟಿ ಸೇರಿದಂತೆ ವಿವಿಧೆಡೆಯಿಂದ ಸಿಂಧೂರ, ಬದಾಮಿ, ಕಲ್ಮಿ, ಮಲ್ಲಿಕಾ, ತೋತಾಪುರಿ ತಳಿಯ ಮಾವಿನ ಹಣ್ಣುಗಳನ್ನು ತರಿಸಲಾ ಗುತ್ತಿದೆ. ಒಂದು ಡಜನ್‌ ಮಾವಿನ ಹಣ್ಣಿಗೆ ₹ 150ರಿಂದ ₹ 250ರವರೆಗೆ ಮಾರಾಟ ಮಾಡಲಾಗುತ್ತಿದೆ. ಮಾವಿನ ಸೀಜನ್‌ ಆಗಿರುವುದರಿಂದ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ. ಪ್ರತಿನಿತ್ಯ 20ರಿಂದ 25 ಡಜನ್‌ ಮಾವಿನ ಹಣ್ಣು ಗಳು ಬಿಕರಿಯಾಗುತ್ತಿವೆ ಎಂದು ಹೇಳು ತ್ತಾರೆ ಹಣ್ಣಿನ ವ್ಯಾಪಾರಿ ಪೀರಸಾಬ್ ಢಾಲಾಯತ್‌, ಸಲೀಂ ಅಹ್ಮದಾಬಾದ್.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT