ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ಸರ್ಕಾರದ ಯೋಜನೆ ಜನತೆಗೆ ಮುಟ್ಟಲಿ

Last Updated 19 ಏಪ್ರಿಲ್ 2017, 5:32 IST
ಅಕ್ಷರ ಗಾತ್ರ

ವಿಜಯಪುರ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಜನಪರ ಯೋಜನೆಗಳನ್ನು ಪ್ರತಿಯೊಬ್ಬರಿಗೂ ಮುಟ್ಟಿಸುವ ಕೆಲಸ ವನ್ನು ಯುವ ಮೋರ್ಚಾ ಕಾರ್ಯ ಕರ್ತರು ವ್ಯವಸ್ಥಿತವಾಗಿ ನಡೆಸಬೇಕು ಎಂದು ಯುವ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ರವಿ ಖಾನಾಪುರ ಹೇಳಿದರು.ನಗರದ ಜಿಲ್ಲಾ ಬಿಜೆಪಿ ಕಾರ್ಯಾ ಲಯದಲ್ಲಿ ಮಂಗಳವಾರ ನಡೆದ ಯುವ ಮೋರ್ಚಾ ಜಿಲ್ಲಾ ಕಾರ್ಯಕಾರಿಣಿಯಲ್ಲಿ ಮಾತನಾಡಿದ ಅವರು, ಪಕ್ಷದ ಎಲ್ಲ ಮೋರ್ಚಾಗಳಲ್ಲಿಯೇ ಯುವ ಮೋರ್ಚಾ ಬಹಳ ಮಹತ್ವ ಹೊಂದಿದೆ.

ಜವಾಬ್ದಾರಿ ಹೊತ್ತಿರುವ ಪದಾಧಿಕಾರಿಗಳು ಬಹಳ ಪ್ರಬಲವಾಗಿ, ಶಕ್ತಿ ಯುತವಾಗಿ ರಾಜಕೀಯದಲ್ಲಿ ಬೆಳೆಯ ಬಹುದು. ಹೀಗಾಗಿ ಕೇಂದ್ರ ಸರ್ಕಾರ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳ ಕುರಿತು ಸಾರ್ವಜನಿಕರಿಗೆ ತಿಳಿಸುವ ಕೆಲಸ ಮಾಡಲು ಸದಾ ಸಿದ್ಧವಾಗಿರಬೇಕು ಎಂದರು.ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡಿ ಯುವ ಮೋರ್ಚಾ ಬಿಜೆಪಿಯ ಒಂದು ಮಹತ್ವದ ಅಂಗವಾಗಿದ್ದು, ಪಕ್ಷದಿಂದ ನಡೆಯ ಬೇಕಾದ ಸಾಕಷ್ಟು ಕೆಲಸ, ಕಾರ್ಯಕ್ರಮ, ಪ್ರತಿಭಟನೆ ಮತ್ತು ಇನ್ನಿತರ ಕೆಲಸಗಳ ಜವಾಬ್ದಾರಿ ಯುವ ಮೋರ್ಚಾ ಪದಾ ಧಿಕಾರಿಗಳು ಮತ್ತು ಕಾರ್ಯಕರ್ತರ ಮೇಲಿರುತ್ತದೆ. ಈ ಎಲ್ಲ ಜವಾಬ್ದಾರಿ ಗಳನ್ನು ಅರಿತುಕೊಂಡು ಪಕ್ಷದ ಒಬ್ಬ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡಬೇಕು ಎಂದು ಮೋರ್ಚಾ ಪದಾ ಧಿಕಾರಿಗಳಿಗೆ ಕಿವಿಮಾತು ಹೇಳಿದರು.

ಜಿಲ್ಲಾ ಘಟಕದ ಅಧ್ಯಕ್ಷ ವಿಠ್ಠಲ ಕಟಕದೊಂಡ, ಪ್ರಧಾನ ಕಾರ್ಯದರ್ಶಿ ರವಿಕಾಂತ ಬಗಲಿ, ಸ್ವಚ್ಛ ಭಾರತ ಅಭಿಯಾನದ ಸಂಚಾಲಕ ಬಸವರಾಜ ಹೂಗಾರ ಮಾತನಾಡಿದರು. ಕಾರ್ಯ ಕಾರಿಣಿಯಲ್ಲಿ ನಿಧನರಾದ ವಿಧಾನ ಪರಿಷತ್ ಸದಸ್ಯೆ ವಿಮಲಾಗೌಡ ಆತ್ಮಕ್ಕೆ ಶಾಂತಿ ಕೋರಿ ಎರಡು ನಿಮಿಷ ಮೌನಾಚರಿಸಲಾಯಿತು.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಗರಾಜ ದೇಸಾಯಿ, ಗಣೇಶ ಜಿ, ಶರತ್‌ ಬಿರಾದಾರ, ವಿರಾಜ ಪಾಟೀಲ, ಮಲ್ಲು ಕಲಾದಗಿ, ರಾಜು ವಾಲಿ, ರಾಮು ಅಂಕಲಗಿ, ಕೃಷ್ಣಾ ಗುನ್ಹಾಳಕರ, ಈರಣ್ಣ ಶಿರಮಗೊಂಡ, ಶರಣು ಲಾಳಸಂಗಿ, ಶ್ರೀಕಾಂತ ರಾಠೋಡ, ಪ್ರಶಾಂತ ಅಗಸರ, ಅಜೀತ ಚವ್ಹಾಣ, ಗುರುರಾಜ ರಾವ, ರಾಜು ಹುನ್ನೂರ, ಚಿದಾನಂದ ಯಳಮೇಲಿ ಇದ್ದರು.

ಭವ್ಯ ಮೆರವಣಿಗೆ
ಇಂಡಿ: ತಾಲ್ಲೂಕಿನ ಭಾರತೀಯ ಜನತಾ ಪಕ್ಷದ ಆಶ್ರಯದಲ್ಲಿ ಸೋಮವಾರ ಸಂಜೆ 4 ಗಂಟೆಗೆ ಡಾ.ಬಾಬಾಸಾಹೇಬ ಅಂಬೇಡ್ಕರ್‌ ಅವರ 126ನೇ ಜಯಂತ್ಯು ತ್ಸವದ ನಿಮಿತ್ತ ಭಾರತ ರತ್ನ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ ಅವರ ಭಾವಚಿತ್ರಕ್ಕೆ ಕೇಂದ್ರ ಸಚಿವ ರಮೇಶ ಜಿಗಜಿಣಗಿ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು.

ಮೆರವಣಿಗೆಯಲ್ಲಿ ವಿವಿಧ ಮದ್ದು ಮತ್ತು ಪಟಾಕಿ ಸಿಡಿಸುತ್ತ ವಾದ್ಯ ವೈಭವ ಗಳೊಂದಿಗೆ ಅಲಂಕಾರಿಕ ರಥದಲ್ಲಿ ಡಾ.ಬಾಬಾಸಾಹೇಬ ಅಂಬೇಡ್ಕರ್‌ ಅವರ ಭಾವಚಿತ್ರ ಹೊತ್ತ ರಥ ಪ್ರಮುಖ ರಸ್ತೆಗಳಲ್ಲಿ ಸಾಗಿತು. ಮೆರವಣಿಗೆಯು ದ್ದಕ್ಕೂ ಕುಣಿತ, ಹಲಗೆ, ಚಿಟ್ಟ ಹಲಿಗೆ, ಬ್ಯಾಂಜೋ, ಡಾಲಬಿಗಳ  ಸದ್ದು ಅನುರಣಿಸಿತು.

ಜಿಲ್ಲಾ ಘಟಕದ ಅಧ್ಯಕ್ಷ ವಿಠ್ಠಲ ಕಟಕದೊಂಡ, ಬೆಳಗಾವಿ ವಿಭಾಗದ ಸಂಘಟನಾ ಕಾರ್ಯದರ್ಶಿ ಪ್ರಕಾಶ ಅಕ್ಕಲಕೋಟ, ರವಿಕಾಂತ ಬಗಲಿ, ತಾಲ್ಲೂಕು ಮಂಡಲ ಅಧ್ಯಕ್ಷ ಕಾಸುಗೌಡ ಬಿರಾದಾರ, ಮಾಜಿ ಜಿ.ಪಂ. ಸದಸ್ಯ ಶ್ರೀಶೈಲಗೌಡ ಬಿರಾದಾರ, ವಿರಾಜ ಪಾಟೀಲ, ಶೀಲವಂತ ಉಮರಾಣಿ, ಅಪ್ಪುಗೌಡ ಪಾಟೀಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿವೇಕ ಡಬ್ಬಿ, ಹಣ ಮಂತರಾಯಗೌಡ ಪಾಟೀಲ, ಅನಿಲ ಜಮಾದಾರ. ಪಾಪು ಕಿತ್ತಲಿ, ಪುಟ್ಟುಗೌಡ ಪಾಟೀಲ, ಗಣಪತಿ ಬಾಣಿಕೋಲ, ಮಲ್ಲಯ್ಯ ಪತ್ರಿಮಠ, ರಮೇಶ ಧರೇನವರ, ಮಲ್ಲಿಕಾರ್ಜುನ ಕಿವುಡೆ ವಹಿಸಿಕೊಂಡಿದ್ದರು.

‘ದೇಶದ ಪ್ರಗತಿಗೆ ಶ್ರಮಿಸಿ
ನಿಡಗುಂದಿ: ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಜನರಿಗೆ ನಾನಾ ಯೋಜನೆ ನೀಡುವ ಮೂಲಕ ಉತ್ತಮ ಆಡಳಿತ ನೀಡುತ್ತಿದೆ. ದೇಶದ ಪ್ರಗತಿಗೆ ಶ್ರಮಿಸುತ್ತಿದೆ ಎಂದು ಮಾಜಿ ಸಚಿವ ಎಸ್.ಕೆ ಬೆಳ್ಳುಬ್ಬಿ ಹೇಳಿದರು.ಪಟ್ಟಣದ ಕಮದಾಳ ಪು.ಕೇ.ದಲ್ಲಿ ನಡೆದ ಬೂತ್ ಕಮಿಟಿ ಅಧ್ಯಕ್ಷ ಆನಂದಯ್ಯ ಹಿರೇಮಠ ಅವರ ಮನೆ ಮೇಲೆ ಪಕ್ಷದ ಧ್ವಜ ಹಾರಿಸುವ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು.

ನಿಡಗುಂದಿ ಪಟ್ಟಣದಲ್ಲಿ ನಗರ ಘಟಕ, ವಾರ್ಡ್‌ ಬೂತ್‌,  ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ ಸೇರಿದಂತೆ ಎಲ್ಲ ನೇಮಕಾತಿ ಮಾಡಲಾಗಿದ್ದು, ಎಲ್ಲರೂ ಒಗ್ಗೂಡಿ ನರೇಂದ್ರ ಮೋದಿ ಹಾಗೂ ಹಿಂದಿನ ಬಿಜೆಪಿ ಸರ್ಕಾರದ ಸಾಧನೆಗಳನ್ನು ಜನರ ಮನಮುಟ್ಟು ವಂತೆ ತಿಳಿಹೇಳುವ ಮೂಲಕ ಪಕ್ಷವನ್ನು ಗಟ್ಟಿಗೊಳಿಸಬೇಕು ಎಂದರು.

ಡಾ. ಸಂಗಮೇಶ ಗೂಗಿಹಾಳ ಮಾತ ನಾಡಿದರು. ಕೃಷ್ಣಾ ಕಾಡಾ ಮಾಜಿ ಅಧ್ಯಕ್ಷ ಬಸವರಾಜ ಕುಂಬಾರ, ಶಂಕರಗೌಡ ಪಾಟೀಲ, ಶಿವಾನಂದ ಮುಚ್ಚಂಡಿ, ಪ್ರಹ್ಲಾದ ಪತ್ತಾರ ಸೇರಿದಂತೆ ಮುಂತಾ ದವರು ಮಾತನಾಡಿದರು.ನಿಡಗುಂದಿ ಗ್ರಾ.ಪಂ ಮಾಜಿ ಅಧ್ಯಕ್ಷ ನಾಗಲಿಂಗಪ್ಪ ಕಂಬಾರ, ಗ್ರಾ.ಪಂ ಮಾಜಿ ಸದಸ್ಯ ವಿಜಯಕುಮಾರ ಕಿರಸೂರ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದರು.

ಬೂತ್ ಕಮಿಟಿ ಅಧ್ಯಕ್ಷ ಆನಂದಯ್ಯ ಹಿರೇಮಠ, ಬಾಲರಾಜ ಮಾದರ, ತಿಪ್ಪಣ್ಣ ಕುಂದರಗಿ, ಅಶೋಕ ಮಾನೆ, ಇಸ್ಮಾಯಿಲ್ ಕಲಾದಗಿ, ಮಂಜುನಾಥ ಹಡಪದ, ಬಸವರಾಜ ಬಡಿಗೇರ, ಹಣಮಂತ ಮಾದರ, ಗದಿಗೆಪ್ಪ  ವಗ್ಗರ, ಜಯಶ್ರೀ ಗೂಗಿಹಾಳ, ಬಸವ್ವ ತೊಂಡಿ ಕಟ್ಟಿ ಸೇರಿದಂತೆ ಮುಂತಾದವರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT