ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪ್ಪೂರಿನಲ್ಲಿ ಅತ್ಯಾಧುನಿಕ ಡೇರಿ ನಿರ್ಮಾಣಕ್ಕೆ ಸಿದ್ಧತೆ

Last Updated 19 ಏಪ್ರಿಲ್ 2017, 5:48 IST
ಅಕ್ಷರ ಗಾತ್ರ
ಸಣ್ಣಹಿಡುವಳಿದಾರರೇ ಹೆಚ್ಚಾಗಿದ್ದ ಅಂದಿನ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಾಲಿನ ಉತ್ಪಾದನೆಯಿಂದ ಗ್ರಾಮೀಣ ರೈತರಿಗೆ ಆರ್ಥಿಕ ಶಕ್ತಿ ತುಂಬುವ ಉದ್ದೇಶದಿಂದ ಗುಜರಾತ್‌ನ ಆನಂದ್‌ದಲ್ಲಿರುವ ಅಮೂಲ್ ಮಾದರಿ ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ಸ್ಥಾಪಿಸಿ ತನ್ಮೂಲಕ ಹಾಲಿನ ಉತ್ಪಾದನೆ, ಸಂಗ್ರಹಣೆ ಮತ್ತು ವಿತರಣೆಗೆ ದಿ. ಟಿ. ಎ.ಪೈ ಅವರು 25.05.1974ರಲ್ಲಿ ಕೆನರಾ ಮಿಲ್ಕ್‌ ಯೂನಿ ಯನ್(ಕೆಮುಲ್)ಎಂಬ ಹಾಲು ಒಕ್ಕೂಟವನ್ನು ಪ್ರಾರಂಭಿಸಿ, ಈ ಸಂಸ್ಥೆಗೆ ಎಲ್ಲ ರೀತಿಯ ಪ್ರೋತ್ಸಾಹ, ಮಾರ್ಗದರ್ಶನ ನೀಡಿದರು. 
 
ಡಾ. ವರ್ಗೀಸ್‌ ಕುರಿಯನ್‌ ಅವರ ಸಹಕಾರದಿಂದ ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ಸ್ಥಾಪಿಸಿ ಮಣಿಪಾಲದಲ್ಲಿ ಹಾಲು ಸಂಸ್ಕರಣಾ ಘಟಕವನ್ನು ಸ್ಥಾಪಿಸಿದರು.

ಈ ಕ್ಷೀರ ಯೋಜನೆಯನ್ನು ಉಡುಪಿ, ಕುಂದಾಪುರ, ಮತ್ತು ಕಾರ್ಕಳ ತಾಲ್ಲೂಕುಗಳಿಗೂ ವಿಸ್ತರಿಸಿ, ಜಾನುವಾರು ತಳಿ ಅಭಿವೃದ್ಧಿ, ಹಾಲು ಉತ್ಪಾದ ಕರ ಸಹಕಾರ ಸಂಘಗಳ ಕಾರ್ಯದ ರ್ಶಿಗಳಿಗೆ ತರಬೇತಿ ಮುಂತಾದ ವ್ಯವಸ್ಥೆಗ ಳೊಂದಿಗೆ ದಿನವೊಂದಕ್ಕೆ ಸರಾಸರಿ 3 ಸಾವಿರ ಲೀಟರ್ ಹಾಲನ್ನು ಸಂಗ್ರಹಿಸಲಾಗುತ್ತಿತ್ತು.
 
ಕೆ.ಕೆ.ಪೈ ಅವರ ಅಧ್ಯಕ್ಷತೆಯಲ್ಲಿ ಮುನ್ನಡೆದ ಕೆನರಾ ಮಿಲ್ಕ್‌ ಯೂನಿಯನ್ 1985ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದೊಂದಿಗೆ ವೀಲೀನಗೊಂಡಿತು.
 
ಈ ಸಂಸ್ಥೆ 1986ರ ಮೇ ತಿಂಗಳಲ್ಲಿ ಅವಿ ಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕ್ಷೀರಧಾರ-2ನೇ ಯೋಜನೆಯಲ್ಲಿ ಆರಂಭವಾದ ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟವಾಗಿ ಮಾರ್ಪಾಡುಗೊಂಡು, ಕರ್ನಾಟಕ ಹಾಲು ಮಂಡಳಿಯೊಡನೆ ಸಂಯೋಜನೆಗೊಂಡಿತು.

ಒಕ್ಕೂಟದ ವ್ಯಾಪ್ತಿಯಲ್ಲಿ ಪ್ರಸಕ್ತ 95 ಬಿ.ಎಂ.ಸಿ. ಹಾಲು ಕೇಂದ್ರಗಳು, ಮತ್ತು 34 ಹಾಲು ಸಂಗ್ರಹಣಾ ಮಾರ್ಗಗಳು ಇದ್ದು 702 ಹಾಲು ಉತ್ಪಾದಕರ ಸಹಕಾರಿ ಸಂಘಗಳಿಂದ ದಿನವಹಿ ಸರಾಸರಿ 3.72 ಲಕ್ಷ ಕೆ.ಜಿ ಹಾಲು ಸಂಗ್ರಹಣೆಯಾಗುತ್ತಿದೆ.
 
ಅದೇರೀತಿ 1525 ಅಧಿಕೃತ ನಂದಿನಿ ಹಾಲಿನ ಡೀಲರ್‌ಗಳ ಮೂಲಕ ದಿನವೊಂದಕ್ಕೆ ಸರಾಸರಿ 3.45 ಲಕ್ಷ ಲೀಟರ್ ಹಾಲನ್ನು ಮಾರಾಟ ಮಾಡಲಾಗು ತ್ತಿದ್ದು 60 ಸಾವಿರ ಲೀಟರ್‌ ಮೊಸರು ಮಾರಾಟ ಮಾಡಲಾಗುತ್ತಿದೆ. 
 
ಮಣಿಪಾಲ ವಲಯವು ಉಡುಪಿ ಜಿಲ್ಲೆಯ ವ್ಯಾಪ್ತಿಯಲ್ಲಿ ಹೊಂದಿರುವ 95 ಹಾಲು ಉತ್ಪಾ ದಕರ ಮಹಿಳಾ ಸಂಘಗಳು ಸೇರಿದಂತೆ ಒಟ್ಟು 326 ಹಾಲು ಉತ್ಪಾದಕರ ಸಹಕಾರಿ ಸಂಘಗಳು ಕಾರ್ಯನಿರ್ವಹಿಸುತ್ತಿದ್ದು, 17 ಹಾಲು ಸಂಗ್ರ ಹಣಾ ಮಾರ್ಗಗಳು ಮತ್ತು 40 ಬಿ.ಎಂ.ಸಿ. ಕೇಂದ್ರಗಳ ಮೂಲಕ ದಿನವಹಿ ಸರಾಸರಿ 1.87 ಲಕ್ಷ ಲೀಟರ್‌ ಹಾಲು ಸಂಗ್ರಹವಾಗುತ್ತಿದೆ. 62,679  ಸದಸ್ಯರಿದ್ದು, 35,680 ಸಕ್ರಿಯ ಸದಸ್ಯರು ಸಂಘಗಳಿಗೆ ಹಾಲು ಪೂರೈಕೆ 
ಮಾಡು ತ್ತಿದ್ದಾರೆ. 
 
ಉಡುಪಿ ಜಿಲ್ಲೆಯಲ್ಲಿ ಹಾಲು ಸಂಗ್ರಹಣಾ ಜಾಲವನ್ನು ಬಲಗೊಳಿಸುವ ನಿಟ್ಟಿನಲ್ಲಿ ಪಶು ವೈದ್ಯಕೀಯ ಶಿಬಿರಗಳನ್ನು ಸ್ಥಾಪಿಸಿ ಈ ವಲ ಯದ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಸದಸ್ಯರಿಗೆ ಪಶು ವೈದ್ಯಕೀಯ ಸೇವೆ ನೀಡಲಾಗುತ್ತಿದೆ.
 
175 ಹಾಲು ಉತ್ಪಾದಕ ಸಹಕಾರ ಸಂಘಗಳಲ್ಲಿ ಕೃತಕಗರ್ಭಧಾರಣೆ ಕೇಂದ್ರಗಳನ್ನು ಸ್ಥಾಪಿಸಿ ಸರಾಸರಿ ತಿಂಗಳಿಗೆ 10 ಸಾವಿರಕ್ಕೂ ಹೆಚ್ಚು ಕೃತಕಗರ್ಭಧಾರಣೆ ನಡೆಸಲಾಗುತ್ತಿದೆ.
 
ಒಕ್ಕೂಟದಿಂದ ಜಾರಿಯಾಗಿರುವ ಮೇವು ಅಭಿವೃದ್ಧಿ ಯೋಜನೆಗಳಾದ ಅಜೋಲಾ ಕೃಷಿ, ಹಸಿರು ಮೇವು ಫಾರಂ, ರಸಮೇವು ತಯಾ ರಿಕೆ, ಚಾಫ್‌ಕಟ್ಟರ್, ಅಡಿಕೆ ಹಾಳೆ ಹುಡಿ ಮಾಡುವ ಘಟಕ, ಸಾಂದ್ರೀಕೃತ ಮೇವು ಬಿಲ್ಲೆ ಸರಬರಾಜು, ಕರುಸಾಕಾಣಿಕೆ ಯೋಜನೆ, ಹಾಲು ಕರೆಯುವ ಯಂತ್ರ, ಹಟ್ಟಿ ತೊಳೆಯುವ ಯಂತ್ರ, ಸ್ಲರಿ ಹಾಯಿಸುವ ಯಂತ್ರ, ಮಿನಿ ಡೇರಿ ಯೋಜನೆ, ವಾಣಿಜ್ಯ ಡೇರಿ ಘಟಕ, ಬಯೋ ಗ್ಯಾಸ್ ಯೋಜನೆ ಮುಂತಾದ ಯೋಜನೆಗಳನ್ನು ಸಮರ್ಪಕವಾಗಿ ಹೈನುಗಾರರಿಗೆ ತಲುಪಿಸುವಲ್ಲಿ ಕ್ಷೇತ್ರಾಧಿಕಾರಿಗಳ ಎರಡು ತಂಡ ಕಾರ್ಯ ನಿರ್ವಹಿಸುತ್ತಿದೆ.
 
ಆರಂಭದಲ್ಲಿ ದಿನವಹೀ 29 ಸಾವಿರ ಲೀಟರ್‌ ಹಾಲು ಮಾರಾಟದಿಂದ ಆರಂಭವಾದ ಹಾಲಿನ ಮಾರುಕಟ್ಟೆ ಪ್ರಸ್ತುತ ಉಡುಪಿ ಜಿಲ್ಲೆ ಯಲ್ಲಿ 657 ಅಧಿಕೃತ ನಂದಿನಿ ಹಾಲಿನ ಡೀಲರ್‌ ಗಳ ಮೂಲಕ ದಿನವಹಿ ಸರಾಸರಿ 1.10 ಲಕ್ಷ ಲೀಟರ್‌ ಹಾಲು ಮತ್ತು 20 ಸಾವಿರ ಕಿಲೋ ಮೊಸರು ಮಾರಾಟ ಮಾಡಲಾಗುತ್ತಿದೆ. 
 
ಇದಲ್ಲದೇ ತುಪ್ಪ, ಕ್ರೀಂ, ಪೇಡಾ, ಲಸ್ಸಿ, ಮಸಾಲ ಮಜ್ಜಿಗೆ, ಬೈಟ್, ಪನ್ನೀರ್, ಕ್ಯಾಶ್ಯೂ ಬರ್ಫಿ, ಸುವಾಸಿತ ಹಾಲು, ತೃಪ್ತಿ ಹಾಲು, ಮೈಸೂರು ಪಾಕ್ ಮುಂತಾದ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ.
 
ಮಾರಾಟ ಜಾಲದಲ್ಲಿ 40 ಇನ್ಸುಲೇಟೆಡ್ ಹಾಲು ವಿತರಣಾ ವಾಹನಗಳ ಮೂಲಕ ದಿನನಿತ್ಯ ಎರಡು ಬಾರಿ ಡೀಲರ್‌ಗಳಿಗೆ ಹಾಲು ಮತ್ತು ಉತ್ಪನ್ನಗಳನ್ನು ಸರಬರಾಜು ಮಾಡಲಾಗುತ್ತಿದೆ.

ಪ್ರಸ್ತುತ ಹಾಲನ್ನು ಮಾತ್ರ ಮಣಿಪಾಲದ ಡೇರಿಯಲ್ಲಿ ಸಂಸ್ಕರಿಸಿ ಪ್ಯಾಕ್ ಮಾಡಲಾಗುತ್ತಿದ್ದು, ಮೊಸರು ಮತ್ತು ಇತರ ಉತ್ಪನ್ನಗಳನ್ನು ದಿನವಹಿ ಮಂಗಳೂರು ಡೇರಿಯಿಂದ ತಯಾರಿಸಿ ಮಣಿಪಾಲ ಡೇರಿಗೆ ಕಳುಹಿಸಲಾಗುತ್ತಿದೆ.
 
ಈ ವ್ಯವಸ್ಥೆಗೆ ತಿಂಗಳಿಗೆ ಸರಾಸರಿ ₹5 ಲಕ್ಷ ವೆಚ್ಚವಾಗುತ್ತಿದೆ. ಅದಾಗ್ಯೂ ಪ್ರಸ್ತುತ ಗರಿಷ್ಠ ಹಾಲು ಸಂಗ್ರಹಣಾ ಸಮಯದಲ್ಲಿ ಸಂಸ್ಕರಣಾ ಘಟಕದ ಸಾಮರ್ಥ್ಯ ಬಳಕೆಯು ಶೇ 190ರಷ್ಟಾಗುತ್ತಿದ್ದು, 2021–22ರ ವೇಳೆಗೆ ಇದು ಶೇ 239ಕ್ಕೆ ಹೆಚ್ಚಳವಾಗಲಿದೆ.

ಪ್ರಸ್ತುತ ಸಂಸ್ಕರಣಾ ಮತ್ತು ಶೀತಲೀಕರಣ ಕೊಠಡಿಯ ಸಾಮರ್ಥ್ಯ ಹಾಲು ಮತ್ತು ಮೊಸರಿನ ದಾಸ್ತಾನಿಗೆ ಸಾಕಾಗದೇ ಇರುವುದರಿಂದ ಡೇರಿಯ ವಿಸ್ತರಣೆ ಅನಿವಾರ್ಯವಾಗಿದೆ.
 
ಮುಂದಿನ 5 ವರ್ಷಗಳ ಅಂತ್ಯಕ್ಕೆ ಹಾಲಿನ ಸಂಗ್ರಹಣೆಯು ದಿನವಹಿ 2.76 ಲಕ್ಷ ಲೀಟರ್‌, ಹಾಲಿನ ಮಾರಾಟ 1.57 ಲಕ್ಷ ಲೀಟರ್‌ ಹಾಗೂ ಮೊಸರಿನ ಮಾರಾಟ 32 ಸಾವಿರ ಕೆ.ಜಿ.ಗಳಿಗೆ ಹೆಚ್ಚಳವಾಗುವ ನಿರೀಕ್ಷೆ ಇರುವುದರಿಂದ ದಕ್ಷಿಣ ಕನ್ನಡ ಹಾಲು ಒಕ್ಕೂಟವು ಉಡುಪಿ ತಾಲ್ಲೂಕಿನ ಉಪ್ಪೂರು ಗ್ರಾಮದ ಜಾತಬೆಟ್ಟು ಎಂಬಲ್ಲಿ 5.9 ಎಕರೆ ಜಮೀನನ್ನು ಖರೀದಿಸಿ 2.5 ಲಕ್ಷ ಲೀಟರ್‌ ಸಾಮರ್ಥ್ಯದ ಅಟೋಮೇಟೆಡ್ ಡೇರಿಯನ್ನು ₹92 ಕೋಟಿ ವೆಚ್ಚದಲ್ಲಿ ರಾಷ್ಟ್ರೀಯ ಹೈನು ಅಭಿವೃದ್ಧಿ ಮಂಡಳಿಯ ವತಿಯಿಂದ ಟರ್ನ್‌ಕೀ ಆಧಾರದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿದೆ. 
 
ಹೊಸ ಡೇರಿ ಸ್ಥಾವರದಲ್ಲಿ 2.5 ಲಕ್ಷ ಲೀಟರ್‌ ಹಾಲು ಸಂಸ್ಕರಣೆ, 35ಸಾವಿರ ಕೆ.ಜಿ. ಮೊಸರು ತಯಾರಿಕೆ ಮಾತ್ರವಲ್ಲದೆ ಲಸ್ಸಿ, ಮಸಾಲ ಮಜ್ಜಿಗೆ, ತುಪ್ಪ, ಮ್ಯಾಂಗೋ ಲಸ್ಸಿ ತಯಾರಿಕೆಗೆ ಸೂಕ್ತ ಆಧುನಿಕ ಯಂತ್ರೋಪಕರಣಗಳನ್ನು ಅಳವಡಿಸಲಾಗುವುದು.
 
ಈ ಡೇರಿಯಲ್ಲಿ ಶೇ 100ರಷ್ಟು ಹಾಲಿನ ಸಂಗ್ರಹಣೆಯನ್ನು ಟ್ಯಾಂಕರ್‌ಗಳ ಮೂಲಕವೇ ಮಾಡಲು ಕ್ರಮ ಕೈಗೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ಪನ್ನೀರ್, ಬೆಣ್ಣೆ, ಹೆಚ್ಚು ಕಾಲ ಬಾಳಿಕೆ ಬರುವ ತೃಪ್ತಿ ಹಾಲಿನ ತಯಾರಿಕೆಗೆ ಯಂತ್ರಗಳನ್ನು ಅಳವಡಿಸಲು ಅವಕಾಶ ಕಲ್ಪಿಸಲಾಗಿದೆ. 
*****
ದಕ್ಷಿಣ ಕನ್ನಡ ಹಾಲು ಒಕ್ಕೂಟವು ಉಡುಪಿ ತಾಲ್ಲೂಕಿನ ಉಪ್ಪೂರು ಗ್ರಾಮದ ಜಾತಬೆಟ್ಟು ಎಂಬಲ್ಲಿ 5.9 ಎಕರೆ ಜಮೀನನ್ನು ಖರೀದಿಸಿದ್ದು, ಅಲ್ಲಿ 2.5 ಲಕ್ಷ ಲೀಟರ್‌ ಸಾಮರ್ಥ್ಯದ ಅಟೋಮೇಟೆಡ್ ಡೇರಿಯನ್ನು ₹92 ಕೋಟಿ ವೆಚ್ಚದಲ್ಲಿ ರಾಷ್ಟ್ರೀಯ ಹೈನು ಅಭಿವೃದ್ಧಿ ಮಂಡಳಿಯ ವತಿಯಿಂದ ನಿರ್ಮಾಣ ಮಾಡಲು ಉದ್ದೇಶಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT