ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡು ಪ್ರಾಣಿಗಳು ಬಂದು ಸೇರುವ ಆತಂಕ

Last Updated 19 ಏಪ್ರಿಲ್ 2017, 6:25 IST
ಅಕ್ಷರ ಗಾತ್ರ

ಸಂಡೂರು: ತಾಲ್ಲೂಕಿನ ವಿಠಲಾಪುರ–ಆವಿನಮಡಗು ಗ್ರಾಮಗಳ ಮಧ್ಯ ಇರುವ ಸುಮಾರು 700 ಎಕರೆ ವಿಸ್ತೀರ್ಣದ ಕೆರೆ ಅಂಗಳ ಒಂದೆಡೆ ನೀರಿಲ್ಲದೆ ಬರಿದಾಗಿ ದ್ದರೆ, ಮತ್ತೊಂದೆಡೆ ಅದರ ತುಂಬಾ ಜಾಲಿ ಮುಳ್ಳಿನ ಪೊದೆ ಹಬ್ಬಿಕೊಂಡಿವೆ.

ಕುರಿ ಮೇಕೆಗಳಿಗೆ ಆಹಾರವಾಗಬಹುದಾ ದರೂ; ಚಿರತೆ, ಕರಡಿ ಬಂದು ಸೇರುವ ಭಯ: ಕೆರೆಯಂಗಳದ ತುಂಬ ಬೆಳೆದಿ ರುವ ಜಾಲಿ ಮುಳ್ಳಿನ ಪೊದೆಗಳು ಕುರಿ –ಮೇಕೆಗಳಿಗೆ ಆಹಾರವನ್ನು ಒದಗಿಸಬಹು ದಾದರೂ, ಅಲ್ಲಿ ಚಿರತೆ, ಕರಡಿಯಂತಹ ಕಾಡುಮೃಗಗಳು ಬಂದು ಸೇರುವ ಆತಂಕ ಗ್ರಾಮಸ್ಥರಲ್ಲಿ ಮನೆ ಮಾಡಿದೆ.

ಈ ಕೆರೆಗೆ ನೀರು ಬಂದರೆ, ಇದರ ನೀರಿನಿಂದ ಸುತ್ತಲಿನ 500–600 ಎಕರೆ ಮಾಗಾಣಿಯಲ್ಲಿ ಭತ್ತ, ಹತ್ತಿ ಮುಂತಾದ ಬೆಳೆಗಳನ್ನು ಬೆಳೆಯುತ್ತಾರೆ. ಆದರೆ ಕೆಲ ವರ್ಷಗಳಿಂದ ಈ ಭಾಗದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಕಾರಣ, ಕೆರೆ ಬತ್ತಿ ಅಲ್ಲಿ ಕೇವಲ ಜಾಲಿ ಮುಳ್ಳಿನ ಪೊದೆ ಬೆಳೆದಿದೆ ಎನ್ನುತ್ತಾರೆ ಗ್ರಾಮಸ್ಥರು.

ಕಂಟಕವಾಗಿರುವ ಮುಳ್ಳಿನ ಪೊದೆ: ವಿಠ ಲಾಪುರ ಗ್ರಾಮದ ಮುಖಂಡ ಸದಾಶಿವ ಮಾತನಾಡಿ, ಕೆರೆಯಂಗಳದಲ್ಲಿನ ಜಾಲಿ ಮುಳ್ಳಿನ ಗಿಡಗಳ ಪೊದೆಗಳು ಜನತೆಗೆ ಕಂಟಕವಾಗಿವೆ. ಈ ಭಾಗದಲ್ಲಿ ಚಿರತೆ, ಕರಡಿ ಭಯವಿದೆ. ಕೆರೆಯಂಗಳದಲ್ಲಿನ ಮುಳ್ಳಿನ ಗಿಡಗಳ ಪೊದೆಗಳಲ್ಲಿ ಚಿರತೆ, ಕರಡಿಯಂತಹ ಪ್ರಾಣಿಗಳು ಬಂದು ಕುಳಿತರೂ ಯಾರಿಗೂ ಕಾಣುವುದಿಲ್ಲ.

ಅಲ್ಲಿ ಮೇಯಲು ಹೋಗುವ ಕುರಿ ಮೇಕೆಗಳನ್ನು ಆಗಾಗ್ಗೆ ಚಿರತೆ ತಿಂದು ಹೋಗುತ್ತದೆ. ಕುರಿ– ಮೇಕೆಗಳು ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಒಂದೆರಡು ಕುರಿ ಮೇಕೆಗಳನ್ನು ತಿಂದು ಹೋದರೂ ಗೊತ್ತಾಗುವುದಿಲ್ಲ.  ಕೆಲ ದಿನಗಳ ಹಿಂದೆ ಕೆರೆಯಂಗಳದಲ್ಲಿ ಜನತೆ ಚಿರತೆಯನ್ನು ನೋಡಿದ್ದಾರೆ. ಆದ್ದರಿಂದ,  ಈಚೆಗೆ ಶಾಸಕ ಈ. ತುಕಾರಾಂ ಅವರು ಗ್ರಾಮಕ್ಕೆ ಬಂದಾಗ ಕೆರೆಯಂಗಳದಲ್ಲಿನ ಮುಳ್ಳಿನ ಪೊದೆಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಬೇಡಿಕೆ ಸಲ್ಲಿಸಿದ್ದೇವೆ. ಜಿಲ್ಲಾಧಿಕಾರಿ ಜತೆ ಮಾತನಾಡಿ, ಈ ಕುರಿತು ಶೀಘ್ರವೇ ಕ್ರಮಕೈಗೊಳ್ಳುವು ದಾಗಿ ಅವರು ಭರವಸೆ ನೀಡಿದ್ದಾರೆಂದು ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT