ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಸಾಲ ಮನ್ನಾಗೆ ರೈತ ಸಂಘ ಆಗ್ರಹ

Last Updated 19 ಏಪ್ರಿಲ್ 2017, 6:30 IST
ಅಕ್ಷರ ಗಾತ್ರ

ಬಳ್ಳಾರಿ: ರಾಷ್ಟ್ರೀಕೃತ ಹಾಗೂ ಸಹಕಾರಿ ಸಂಘಗಳಲ್ಲಿ ರೈತರು ಪಡೆದ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು. ಹಾಗೂ ಮರುಸಾಲ ವಿತರಣೆ ಮಾಡ ಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘ, ಹಸಿರು ಸೇನೆಯ ಕೋಡಿಹಳ್ಳಿ ಚಂದ್ರಶೇಖರ ಬಣದ ಪದಾಧಿಕಾರಿಗಳು ಸೋಮವಾರ ಇಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಇಲ್ಲಿನ ಗಡಿಗಿ ಚೆನ್ನಪ್ಪ ವೃತ್ತದ ಬಳಿ ಸಂಘದ ಅಧ್ಯಕ್ಷ ಜೆ.ಕಾರ್ತಿಕ್ ನೇತೃತ್ವದ ನೂರಾರು ಕಾರ್ಯಕರ್ತ ಮುಖಂಡರು ಸಮಾವೇಶಗೊಂಡು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಬಳಿಕ, ಬೆಂಗಳೂರು ರಸ್ತೆ, ಕೃಷ್ಣಮಾಚಾರ್ಯ ರಸ್ತೆಯ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿಯವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ಕೈಗೊಂಡರು. ಜಿಲ್ಲಾಧಿಕಾರಿ ವಿ.ರಾಮಪ್ರಸಾದ ಮನೋ ಹರ್ ಅವರಿಗೆ ಮನವಿ ಸಲ್ಲಿಸಿದರು.

ಹಿಂಗಾರು, ಮುಂಗಾರು ಹಂಗಾಮಿ ನಲ್ಲಿ ಸಮರ್ಪಕ ಮಳೆ ಸುರಿಯದ್ದರಿಂದ ಬಿತ್ತನೆ ಮಾಡಿರುವ ಬೀಜ, ರಸಗೊಬ್ಬರ ಮಣ್ಣು ಪಾಲಾಗಿದೆ. ಅಲ್ಪಪ್ರಮಾಣದ ಬೆಳೆಗೂ ಸಮರ್ಪಕ ಬೆಂಬಲ ಬೆಲೆಯಿಲ್ಲ. ಹೀಗಾಗಿ, ಬೆಳೆನಷ್ಟ ಪರಿಹಾರದ ಜೊತೆಗೆ ರೈತರ ಸಾಲವನ್ನೂ ಸಂಪೂರ್ಣ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.

ಜಿಲ್ಲೆಯ ಬರಪೀಡಿತ ತಾಲ್ಲೂಕಿನ ರೈತರ ಪ್ರತಿ ಎಕರೆಗೆ ಕನಿಷ್ಠ ₹ 20,000 ಪರಿಹಾರ ನೀಡಬೇಕು. ಮೆಣಸಿನ ಕಾಯಿ, ಈರುಳ್ಳಿ, ಶೇಂಗಾ, ಹೆಸರು, ತೊಗರಿ ಸೇರಿ ಇತರ ಬೆಳೆಗಳಿಗೆ ಕೂಡಲೇ ಬೆಂಬಲ ಬೆಲೆ ನಿಗದಿಪಡಿಸಬೇಕು. ನೀರಾ ವರಿ ಯೋಜನೆಯ ಅಭಿವೃದ್ಧಿ ಕಾರ್ಯ ವನ್ನು ಕಾಲಮಿತಿಯೊಳಗೆ ಪೂರ್ಣಗೊಳಿ ಸಬೇಕು. ಕೃಷಿ ಚಟುವಟಿಕೆಯ ಪಂಪ್‌ ಸೆಟ್‌ಗಳಿಗೆ ಪ್ರತಿದಿನ ಹದಿನೆಂಟು ತಾಸು ಮೂರು ಫೇಸ್ ವಿದ್ಯುತ್ ಪೂರೈಸಬೇಕು. ವಿದ್ಯುತ್ ದರ ಏರಿಕೆಯನ್ನು ಹಿಂಪಡೆ ಯಬೇಕು ಎಂದು ಒತ್ತಾಯಿಸಿದರು.

ಈ ಬಾರಿಯ ಮುಂಗಾರು ಹಂಗಾ ಮಿಗೆ ಉಚಿತ ಬೀಜ ಮತ್ತು ರಸಗೊಬ್ಬರ ವಿತರಣೆ ಮಾಡಬೇಕು. ಕಬ್ಬು ಬೆಳೆಗಾರರ ಬಾಕಿ ಮೊತ್ತವನ್ನು ಕೂಡಲೇ ನೀಡು ವಂತೆ ಸಕ್ಕರೆ ಕಾರ್ಖಾನೆಗಳ ಮಾಲೀಕ ರಿಗೆ ಸೂಚಿಸಬೇಕು. ಎಲ್ಲ  ರೈತರಿಗೆ ಉಚಿತ ಪಡಿತರಧಾನ್ಯ ವಿತರಿಸಬೇಕು. ಅರಣ್ಯ ಭೂಮಿಯಲ್ಲಿ ಉಳುಮೆ ಮಾಡುವವರಿಗೆ ಹಕ್ಕುಪತ್ರ ನೀಡಬೇಕು.

ಕೆರೆಗಳ ಅತಿ ಕ್ರಮಣ ತೆರವುಗೊಳಿಸಬೇಕು. ಅದರ ಲ್ಲಿನ ಹೂಳೆತ್ತಿ ನೀರನ್ನು ಭರ್ತಿಮಾಡ ಬೇಕು. ತುಂಗಭದ್ರಾ ಜಲಾಶಯದಲ್ಲಿನ ಹೂಳೆತ್ತಲು ರಾಜ್ಯ ಸರ್ಕಾರ ಆದ್ಯತೆ ನೀಡ ಬೇಕು ಎಂದು ಆಗ್ರಹಿಸಿದರು.ಪದಾಧಿಕಾರಿಗಳಾದ ಆರ್.ಮಾಧವ ರೆಡ್ಡಿ, ಎಸ್‌.ಮಂಜುನಾಥ, ವೆಂಕಟೇಶ, ಎಸ್‌.ಶಿವರುದ್ರಗೌಡ, ಮುಖಂಡ ಚಾಗ ನೂರು ಮಲ್ಲಿಕಾರ್ಜುನರೆಡ್ಡಿ ಪ್ರತಿಭಟನೆ ಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT