ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರುಣಾಚಲ ಪ್ರದೇಶದ 6 ಸ್ಥಳಗಳ ಹೆಸರು ಬದಲಿಸಿದ ಚೀನಾ

Last Updated 19 ಏಪ್ರಿಲ್ 2017, 6:41 IST
ಅಕ್ಷರ ಗಾತ್ರ

ನವದೆಹಲಿ: ಅರುಣಾಚಲ ಪ್ರದೇಶದ ವಿವಾದಿತ ಪ್ರದೇಶಗಳಿಗೆ ಟಿಬೆಟನ್‌ ಧರ್ಮಗುರು ದಲೈ ಲಾಮಾ ಭೇಟಿ ನೀಡಲು ಅನುಮತಿ ನೀಡಿದ ಭಾರತ ಸರ್ಕಾರದ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದ್ದ ಚೀನಾ, ಈಗ ಅರುಣಾಚಲ ಪ್ರದೇಶದ 6 ಸ್ಥಳಗಳ ಹೆಸರು ಬದಲಿಸಿದೆ.

‘ಚೀನಾದ ‘ಸಾರ್ವಭೌಮತ್ವ’ವನ್ನು ಭಾರತಕ್ಕೆ ತೋರಿಸುವುದಕ್ಕಾಗಿ ದಕ್ಷಿಣ ಟಿಬೆಟ್‌ನ (ವಿವಾದಿತ ಅರುಣಾಚಲ ಪ್ರದೇಶದ ಭಾಗ) 6 ಸ್ಥಳಗಳ ಹೆಸರು ಬದಲಿಸಲಾಗಿದೆ’ ಎಂದು ಚೀನಾದ ಸರ್ಕಾರಿ ಸ್ವಾಮ್ಯದ ಮಾಧ್ಯಮ ಸಂಸ್ಥೆಯು ವರದಿ ಮಾಡಿದೆ.

ಚೀನಾದ ಅಧಿಕೃತ ನಕ್ಷೆಯಲ್ಲಿ ಈ 6 ಸ್ಥಳಗಳ ಹೆಸರನ್ನು ಬದಲಿಸಲಾಗಿದೆ. ‘ಚೀನಾಕ್ಕೆ ಸೇರಿರುವ, ಸದ್ಯ ಭಾರತದ ಹಿಡಿತದಲ್ಲಿರುವ ದಕ್ಷಿಣ ಟಿಬೆಟ್‌ನ 6 ಸ್ಥಳಗಳ ಹೆಸರನ್ನು ಬದಲಿಸಲಾಗಿದೆ. ಈ ಹೆಸರುಗಳನ್ನು ಅಧಿಕೃತಗೊಳಿಸಲಾಗಿದೆ’ ಎಂದು ಈ ವರದಿ ಹೇಳಿದೆ.

‘ವೋಗ್ಯೈನ್ಲಿಂಗ್‌ (Wo’gyainling), ಮಿಲ ರಿ (Mila Ri), ಕ್ಯೊಡೆನ್ಗರ್ಬೊ ರಿ (Qoidêngarbo Ri), ಮೈನ್ಕ್ಯುಕಾ (Mainquka), ಬುಮೊ ಲಾ (Bümo La) ಮತ್ತು ನಮ್ಕಾಪಬ್‌ ರಿ (Namkapub Ri) ಎಂದು ಹೆಸರು ಬದಲಿಸಲಾಗಿದೆ ಎಂದು ವರದಿಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT