ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಳುವ ಮುನ್ನ ಕೇಳಿಸಿಕೊಳ್ಳಿ

Last Updated 19 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಕೆಲವರಿಗೆ ಇನ್ನೊಬ್ಬರ ಇಯರ್‌ಫೋನ್ ಬಳಸುವ ಅಥವಾ ಇಯರ್‌ಫೋನ್‌ ಅನ್ನು ಇನ್ನೊಬ್ಬರಲ್ಲಿ ಹಂಚಿಕೊಂಡು ಸಂಗೀತ ಕೇಳುವ ಅಭ್ಯಾಸವಿರುತ್ತದೆ. ಆದರೆ ಇದು ಒಳ್ಳೆಯದಲ್ಲ. ಇದರಿಂದ ಹಾನಿಕಾರಕ ಬ್ಯಾಕ್ಟೀರಿಯಾಗಳು  ಕಿವಿಯಿಂದ ಕಿವಿಗೆ ಹರಡುವ ಸಾಧ್ಯತೆ ಇದೆ. ಆದ್ದರಿಂದ ಶೇರ್ ಮಾಡದಿರುವುದು ಒಳಿತು.

*

.
ಇಯರ್‌ಫೋನ್‌/ಹೆಡ್‌ಫೋನ್‌ನಲ್ಲಿ ಸಂಗೀತ ಆಲಿಸುವುದು ತೊಂದರೆಯಲ್ಲ. ಆದರೆ ಎಷ್ಟರ ಮಟ್ಟದಲ್ಲಿ ಶಬ್ದದ ಪ್ರಮಾಣ ಇದೆ ಹಾಗೂ ಎಷ್ಟು ಅವಧಿ ಕೇಳುತ್ತೀರಿ ಎಂಬುದನ್ನು ಅವಲಂಬಿಸಿ ಸಮಸ್ಯೆಯ ಗಂಭೀರತೆ ಇರುತ್ತದೆ. ಸಾಮಾನ್ಯವಾಗಿ 80 ಡೆಸಿಬೆಲ್‌ನಲ್ಲಿ ಕೇಳುವುದು ಕಿವಿಗೆ ಹಾನಿಕಾರಕವಲ್ಲ. ಆದರೆ ಕೇಳುವ ಕಾಲಾವಧಿ ಮಿತಿಯಲ್ಲಿರಬೇಕು. ಹಾಗಿದ್ದರೆ ಎಷ್ಟು ಡೆಸಿಬೆಲ್‌ನಲ್ಲಿ ಕೇಳಿದರೆ ಅತಿ ಅಪಾಯಕಾರಿ?
80 ಡಿಸಿಬೆಲ್‌ಗಿಂತ ಹೆಚ್ಚಿನ ಮಟ್ಟದಲ್ಲಿ ದಿನಕ್ಕೆ 8 ಗಂಟೆಗೂ ಹೆಚ್ಚು ಅವಧಿ ಕೇಳುವುದು 88 ಡೆಸಿಬಲ್ ಶಬ್ದವನ್ನು 4 ಗಂಟೆಗಳ ಕಾಲ ಕೇಳುವುದು
100–105 ಡೆಸಿಬೆಲ್‌ ಮಟ್ಟದಲ್ಲಿ15 ನಿಮಿಷ ಕೇಳುವುದು

*


ಅತಿಯಾಗಿ ಇಯರ್‌ಫೋನ್, ಹೆಡ್‌ಫೋನ್ ಬಳಸುವುದು ಕಿವಿನೋವಿಗೆ ಕಾರಣ. ಹೆಚ್ಚು ಬಳಸಿದಷ್ಟೂ ಕಿವಿ ನೋವು ಕಾಣಿಸಿಕೊಳ್ಳುವ ಸಾಧ್ಯತೆಯೂ ಹೆಚ್ಚು.

*


ಇಯರ್‌ಫೋನ್ ಹಾಗೂ ಹೆಡ್‌ಫೋನಿನ ವಿದ್ಯುತ್ ಕಾಂತೀಯ ಅಲೆಗಳು ಮೆದುಳಿನ ಮೇಲೆ ಗಂಭೀರ ಪರಿಣಾಮ ಬೀರುತ್ತವೆ. ಈ ಅಂಶವನ್ನು  ಸಾಬೀತು ಪಡಿಸಲು ಸೂಕ್ತ ಪುರಾವೆಗಳು ದೊರೆತಿಲ್ಲವಾದರೂ ದಿನನಿತ್ಯ ಬ್ಲೂಟೂಥ್, ಹೆಡ್‌ಫೋನ್ ಹಾಗೂ ಇಯರ್‌ಫೋನ್ ಬಳಸುವ ಮಂದಿಗೆ ಮೆದುಳಿಗೆ ಸಂಬಂಧಿಸಿದ ಸಮಸ್ಯೆಗಳು ಬರುವ ಸೂಚನೆಗಳು ದೊರೆತಿವೆ. ಒಳಕಿವಿ– ಮೆದುಳಿಗೆ ನೇರ ಸಂಪರ್ಕ ವಿದ್ದು, ಕಿವಿಗೆ ಪುಟ್ಟ ಸೋಂಕು ತಗುಲಿದರೂ ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ.

*


ನಿರಂತರವಾಗಿ ಸಂಗೀತ ಕೇಳುವ ಸಾಧನಗಳನ್ನು ಬಳಸುವ ಮಂದಿಗೆ ಕ್ರಮೇಣ ಕಿವಿಯಲ್ಲಿ ಸೋಂಕು ಕಾಣಿಸಿಕೊಳ್ಳುತ್ತದೆ. ಇಯರ್‌ಫೋನ್‌ಗಳು ಕಿವಿ ಮೇಲೆ ಒತ್ತಡ ತರುವುದರಿಂದ ಶ್ರವಣದೋಷಗಳು ಕಾಣಿಸಿಕೊಳ್ಳಬಹುದು. ಇದಕ್ಕೆ ಸಾಕ್ಷ್ಯ ಎಂಬಂತೆ, ಆಕ್ಯುಪೇಷನಲ್ ಸೇಫ್ಟಿ ಮತ್ತು ಹೆಲ್ತ್‌ ಅಡ್ಮಿನಿಸ್ಟ್ರೇಷನ್‌ (ಔದ್ಯೋಗಿಕ ಸುರಕ್ಷತೆ ಮತ್ತು ಆರೋಗ್ಯ ಆಡಳಿತ ಸಂಸ್ಥೆ) ನಡೆಸಿರುವ ಸಮೀಕ್ಷೆಯಲ್ಲಿ, ಕಳೆದ ಹತ್ತು ವರ್ಷಗಳಲ್ಲಿ, ವಯಸ್ಕರಲ್ಲಿ ಹೆಚ್ಚಾಗಿರುವ  ಶ್ರವಣದೋಷದಲ್ಲಿ ‘ಪೋರ್ಟೆಬಲ್ ಸ್ಟಿರಿಯೊ ಇಯರ್‌ಫೋನ್‌’ಪಾಲು ಹೆಚ್ಚು ಎಂಬುದು ತಿಳಿದುಬಂದಿದೆ.

*


ಸಂಗೀತ ಆಲಿಸುವ ಉತ್ತಮ ಅನುಭವ ನೀಡುತ್ತೇವೆ ಎಂದು ಕೆಲವು ಕಂಪೆನಿಗಳು ಕಿವಿ ಕಾಲುವೆಯೊಳಗೆ ನೇರ ಕುಳಿತುಕೊಳ್ಳುವಂಥ ಇಯರ್‌ಫೋನ್‌ಗಳನ್ನು ಪರಿಚಯಿಸುತ್ತವೆ. ಈ ಸಾಧನಗಳು ಸಂಗೀತವನ್ನು ಚೆನ್ನಾಗಿ ಕೇಳಿಸುವಂತೆ ಮಾಡಿದರೂ ಇದರೊಂದಿಗೆ ಕೆಲವು ಸಮಸ್ಯೆಗಳೂ ಅಡಗಿ ಕೂತಿರುತ್ತವೆ. ಇದು ಕಿವಿಯೊಳಗೆ ಗಾಳಿ ಹೋಗುವುದನ್ನು ತಡೆಯುತ್ತದೆ. ಹಾಗೂ ಹೆಚ್ಚು ಅವಧಿ ಕೇಳುವುದು ಕಾಲ ಕಳೆದಂತೆ ಕಿವಿಯನ್ನು ನಿಷ್ಕ್ರಿಯಗೊಳಿಸುವ ಸಾಧ್ಯತೆ ಇದೆ.

*
ಅಪಘಾತ ಹೆಚ್ಚಳ
ಇಯರ್‌ಫೋನ್ ಧರಿಸಿದ ಕಾರಣಕ್ಕೇ ಸಂಭವಿಸಿದ ಅಪಘಾತಗಳ ಸಂಖ್ಯೆ ಇತ್ತೀಚೆಗೆ ಹೆಚ್ಚುತ್ತಿದೆ. ರಸ್ತೆ ಅಪಘಾತ, ರೈಲು ಅಪಘಾತ, ಕಾರು ಅಪಘಾತ...  ಎಲ್ಲದರಲ್ಲೂ ಸಂಗೀತ ಸಾಧನಗಳ ಪಾಲಿದೆ. ಹಾರ್ನ್‌ ಶಬ್ದ ಕೇಳಿಸಿಕೊಳ್ಳದೆ, ಮೊಬೈಲ್‌ನಲ್ಲಿ ಮಾತನಾಡುತ್ತ, ಸಂಗೀತ ಕೇಳುತ್ತ ಹಳಿ, ರಸ್ತೆ ದಾಟುವುದು ಕಾರಣ. ದೆಹಲಿಯೊಂದರಲ್ಲೇ ಮೊಬೈಲ್‌ನಿಂದ ಹಾಗೂ ಇಯರ್‌ಫೋನ್ ಧರಿಸಿದ್ದ ಕಾರಣ ಅಪಘಾತ ಸಂಭವಿಸಿ 2014ರಲ್ಲಿ ಒಟ್ಟು 379 ಮಂದಿ ಸಾವನ್ನಪ್ಪಿರುವುದು ವರದಿಯಾಗಿದೆ.

*


ಪರಿಣಾಮ ತಡೆಯಲು ಏನು ಮಾಡಬಹುದು

* ನೇರ ಕಿವಿ ಕಾಲುವೆಯೊಳಗೆ ಇಳಿಯುವಂಥ ಇಯರ್‌ಫೋನ್ ಆಯ್ಕೆ ಬೇಡ.
*ಸದಾ ಇಯರ್‌ಫೋನ್‌/ಹೆಡ್‌ಫೋನ್‌ನೊಂದಿಗೆ ಕೆಲಸ ಮಾಡುವವರು ಗಂಟೆಗೆ 10 ನಿಮಿಷದಂತೆ ವಿರಾಮ ತೆಗೆದುಕೊಳ್ಳಬೇಕು.
* ಇಯರ್‌ಫೋನ್‌ಗೆ ಹೋಲಿಸಿದರೆ ಹೆಡ್‌ಫೋನ್ ಪರಿಣಾಮ ಕಡಿಮೆ.
* ಇನ್ನೊಬ್ಬರ ಇಯರ್‌ಫೋನ್ ಬಳಕೆಬೇಡ.
* ಎರಡು ತಿಂಗಳಿಗೊಮ್ಮೆ ಇಯರ್‌ಫೋನ್‌ ಸ್ಪಾಂಜ್ ಬದಲಿಸಿ.
*ಹೆಚ್ಚು ಶಬ್ದವಿದ್ದ ಕಡೆ ಸಂಗೀತ ಕೇಳುವ ಪ್ರಯತ್ನ ಬೇಡ.
*ಪ್ರಯಾಣಿಸುವಾಗ ಇಯರ್‌ಫೋನ್/ ಹೆಡ್‌ಫೋನ್ ಬಳಕೆ ಸಲ್ಲದು.

*


ಸಾಕಷ್ಟು ಆ್ಯಪ್‌ಗಳು ಶಬ್ದದ ಗುಣಮಟ್ಟ ಅಳೆಯಲು ನೆರವಾಗುತ್ತವೆ. ಅವುಗಳಲ್ಲಿ ಸೌಂಡ್‌ ಮೀಟರ್+, ಪ್ಲೇ ಇಟ್ ಡೌನ್‌ ಮುಂತಾದವು ಲಭ್ಯವಿವೆ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT