ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಸರದ ಮೇಲ್‌ ತಡೆಯುವ ಆಯ್ಕೆ

Last Updated 19 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ತಂತ್ರಜ್ಞಾನ ಮುಂದುವರಿದಂತೆಲ್ಲಾ ಜನ ಅದನ್ನು ಬಳಸುವುದು ಅನಿವಾರ್ಯವಾಗುತ್ತಿದೆ. ತಂತ್ರಜ್ಞಾನದಿಂದ ದೂರ ಉಳಿದು ಬಾಳುವುದು ಈ ಕಾಲದಲ್ಲಿ ಕಷ್ಟವೇ ಸರಿ. ತಂತ್ರಜ್ಞಾನದ ಬಳಕೆ ಮಾಡುವ ಹೊಸತರಲ್ಲಿ ತಪ್ಪುಗಳಾಗುವುದು ಸಹಜ. ಹಾಗೆಯೇ ತಂತ್ರಜ್ಞಾನ ಬಳಕೆಯಲ್ಲಿ ಅವಸರದಿಂದಲೂ ತಪ್ಪುಗಳಾಗುವುದಿದೆ. ಹೀಗಾಗಿ ತಂತ್ರಜ್ಞಾನವನ್ನು ಬಳಕೆಯ ಸಂದರ್ಭದಲ್ಲಿ ಎಚ್ಚರಿಕೆ ವಹಿಸಬೇಕಾದ್ದು ಅತ್ಯಗತ್ಯ.

ಇಮೇಲ್‌ ಕಳಿಸುವ ಸಂದರ್ಭದಲ್ಲಿ ಅವಸರದಿಂದ ಯಾರಿಗೋ ಕಳಿಸಬೇಕಾದ ಮೇಲ್‌ ಇನ್ಯಾರಿಗೋ ತಲುಪಿ ಪೇಚಿಗೆ ಸಿಲುಕುವ ಸಂದರ್ಭಗಳು ಇಲ್ಲದೇ ಇಲ್ಲ. ಇಮೇಲ್‌ ಬಳಕೆ ಮಾಡುವ ಹೊಸಬರಿಗಷ್ಟೇ ಅಲ್ಲ, ಕಾಂಟ್ಯಾಕ್ಟ್‌ ಲಿಸ್ಟ್‌ನಿಂದ ಮೇಲ್‌ ಐಡಿ ಸೆಲೆಕ್ಟ್‌ ಮಾಡಿ ಮೇಲ್‌ ಕಳಿಸುವ ಅಭ್ಯಾಸವಿರುವವರೂ ಕೆಲವೊಮ್ಮೆ ಇಂಥ ಪೇಚಿಗೆ ಸಿಲುಕಿರುತ್ತಾರೆ.

ಯಾರಿಗೋ ಹೋಗಬೇಕಾದ ಮೇಲ್‌ ಇನ್ಯಾರಿಗೋ ಹೋಗುವುದು, ಮೇಲ್‌ನಲ್ಲಿದ್ದ ಟೆಕ್ಸ್ಟ್‌ನ ತಪ್ಪುಗಳು ಹಾಗೆಯೇ ಸೆಂಡ್‌ ಆಗುವುದು, ನೀವು ಕಳಿಸಬೇಕಾದ ಫೈಲ್‌ ಬದಲಿಗೆ ಇನ್ಯಾವುದೋ ಫೈಲ್‌ ಸೆಲೆಕ್ಟ್‌ ಆಗಿರುವುದು– ಇವನ್ನೆಲ್ಲಾ ತಪ್ಪಿಸಲು ಜಿಮೇಲ್‌ನಲ್ಲಿ ಸಾಧ್ಯವಿದೆ. ಇದಕ್ಕಿರುವ ಮಾರ್ಗ ‘ಅನ್‌ಡು ಸೆಂಡ್‌’.

ನಿಮ್ಮ ಜಿಮೇಲ್‌ನಲ್ಲಿ ‘ಅನ್‌ಡು ಸೆಂಡ್’ (Undo Send) ಆಯ್ಕೆಯನ್ನು ಎನೆಬಲ್‌ ಮಾಡಿದರೆ ನೀವು ಕಳಿಸಬೇಕಿರುವ ಮೇಲ್‌ ಸೆಂಡ್‌ ಬಟನ್‌ ಕ್ಲಿಕ್ಕಿಸಿದ ತಕ್ಷಣವೇ ಹೋಗುವುದಿಲ್ಲ. ನೀವು ಆಯ್ಕೆ ಮಾಡಿದಷ್ಟು ಸಮಯ ಅನ್‌ಡು ಆಯ್ಕೆಯ ಅವಕಾಶ ಇಲ್ಲಿರುತ್ತದೆ. ನೀವು ಮೇಲ್‌ನಲ್ಲಿ ಮಾಡಿರುವ ತಪ್ಪು ಸೆಂಡ್‌ ಬಟನ್‌ ಒತ್ತಿದ ಬಳಿಕ ನಿಮಗೆ ತಿಳಿದರೂ ತಕ್ಷಣ ಅನ್‌ಡು ಆಯ್ಕೆಯಿಂದ ಅದನ್ನು ತಡೆಹಿಡಿಯಬಹುದು.

ಮೇಲ್‌ ಕಂಪೋಸ್‌ ಮಾಡಿ ಅದನ್ನು ಸೆಂಡ್‌ ಮಾಡಿದ ಬಳಿಕ ನಿಮ್ಮ ತಪ್ಪು ಅರಿವಿಗೆ ಬಂದರೆ ಅಥವಾ ತಪ್ಪಾಗಿರಬಹುದು ಎಂಬ ಅನುಮಾನ ಮೂಡಿದರೆ ತಕ್ಷಣ ಜಿಮೇಲ್‌ನ ಸರ್ಚ್‌ ಆಯ್ಕೆಯ ಕೆಳಭಾಗದಲ್ಲಿ ಕಾಣುವ Undo ಮೇಲೆ ಕ್ಲಿಕ್ಕಿಸಿ. ಈಗ ನೀವು ಕಂಪೋಸ್‌ ಹಂತಕ್ಕೆ ಹಿಂದಿರುಗುತ್ತೀರಿ. ಇಲ್ಲಿ ನಿಮಗೆ ಬೇಕಾದ ಬದಲಾವಣೆ ಮಾಡಬಹುದು. ಬಳಿಕ ಸೂಕ್ತ ಬದಲಾವಣೆ ಮಾಡಿ ಆ ಮೇಲ್‌ ಅನ್ನು ಮತ್ತೆ ಸೆಂಡ್‌ ಮಾಡಬಹುದು.

ಜಿಮೇಲ್‌ನಲ್ಲಿ Undo Send ಆಯ್ಕೆಯನ್ನು ಎನೆಬಲ್ ಮಾಡಲು ಮೊದಲು ಸೆಟಿಂಗ್ಸ್‌ಗೆ ಹೋಗಿ. ಬಳಿಕ ಸೆಟಿಂಗ್ಸ್‌ ಆಯ್ಕೆಯಲ್ಲಿ General ಮೇಲೆ ಕ್ಲಿಕ್ಕಿಸಿ. ಇಲ್ಲಿನ ಏಳೆಂಟು ಆಯ್ಕೆಗಳ ಬಳಿಕ ಕಾಣುವ Undo Send ಆಯ್ಕೆಯ ಮುಂಭಾಗದಲ್ಲಿರುವ Enable Undo Send ಆಯ್ಕೆಯನ್ನು ಕ್ಲಿಕ್ಕಿಸಿ. ಕನಿಷ್ಠ 5 ಸೆಕೆಂಡ್‌ನಿಂದ ಗರಿಷ್ಠ 30 ಸೆಕೆಂಡ್‌ವರೆಗೆ ನಿಮ್ಮ ಮೇಲ್‌ ತಡೆಹಿಡಿಯುವ ಆಯ್ಕೆಯನ್ನು ಇಲ್ಲಿ ನೀವು ಮಾಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT