ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

187 ಶಾಲೆಗಳಲ್ಲಿ ಬೇಸಿಗೆ ಅಕ್ಷರ ದಾಸೋಹ

Last Updated 20 ಏಪ್ರಿಲ್ 2017, 5:15 IST
ಅಕ್ಷರ ಗಾತ್ರ

ಭದ್ರಾವತಿ: ಬೇಸಿಗೆ ರಜೆಯಲ್ಲೂ ಮಧ್ಯಾಹ್ನ ಬಿಸಿಯೂಟ ನೀಡುವ ಯೋಜನೆ ತಾಲ್ಲೂಕಿನ 187 ಶಾಲೆಗಳಲ್ಲಿ ನಡೆಯುತ್ತಿದ್ದು, ಶೇ 50ರಷ್ಟು ಮಕ್ಕಳು ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ.ಒಂದೆಡೆ ದಾಸೋಹ ನಡೆಯುತ್ತಿದ್ದರೆ, ಮತ್ತೊಂದೆಡೆ ‘ಬೇಸಿಗೆ ಸಂಭ್ರಮ’ ಕಳೆ ಕಟ್ಟಿದೆ. 17 ಕಡೆ ‘ಬೇಸಿಗೆ ಸಂಭ್ರಮ’ ಆರಂಭವಾಗಿದೆ. ವಿದ್ಯಾರ್ಥಿಗಳು ಹಾಜರಾಗಲೇಬೇಕು ಎಂಬ ನಿಯಮವಿಲ್ಲ. ಬಂದಷ್ಟು ಮಕ್ಕಳಿಗೆ ಊಟ ನೀಡಲಾಗಿದೆ ಎನ್ನುತ್ತಾರೆ ಅಕ್ಷರ ದಾಸೋಹ ಅಧಿಕಾರಿ ರಾಜಪ್ಪ.

ಬೇಸಿಗೆ ಶಿಬಿರ ನಡೆದಿರುವ ಶಾಲೆಗಳಲ್ಲಿ ಸರಾಸರಿ ಹಾಜರಾತಿ ಉತ್ತಮವಾಗಿದೆ. ವಿಶೇಷವಾಗಿ ಜಂಕ್ಷನ್, ಗೋಣಿಬೀಡು, ಬಿ.ಆರ್.ಪಿ ಭಾಗದಲ್ಲಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಹಾಜರಾಗಿ ಚಟುವಟಿಕೆ ನಡೆಸಿರುವುದು ವಿಶೇಷ ಎಂದು ಮಾಹಿತಿ ನೀಡಿದರು.ಶಾಲೆ ರಜೆ ಇರುವ ಕಾರಣ ಮಕ್ಕಳ ನಿರ್ದಿಷ್ಟ ಹಾಜರಾತಿ ಕಷ್ಟ. ಹಾಗಾಗಿ ಆಸಕ್ತಿ ಹೊಂದಿರುವ ಮಕ್ಕಳು ಬಂದ ಕಡೆಯಲ್ಲಿ ‘ಬೇಸಿಗೆ ಸಂಭ್ರಮ’ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT