ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕಲಿ ವೈದ್ಯರ ವಿರುದ್ಧ ಕ್ರಮಕ್ಕೆ ಆಯುಕ್ತರಿಗೆ ವರದಿ: ಡಾ.ನೀಲಮ್ಮ

Last Updated 20 ಏಪ್ರಿಲ್ 2017, 5:38 IST
ಅಕ್ಷರ ಗಾತ್ರ

ಯಾದಗಿರಿ: ‘ಜಿಲ್ಲೆಯ ಗುರುಮಠಕಲ್‌ನಲ್ಲಿ ನಕಲಿ ವೈದ್ಯರು, ನಕಲಿ ರೇಡಿಯೋಲಾಜಿಸ್ಟ್‌ಗಳು ಹಾಗೂ ರಾಜ್ಯ ಖಾಸಗಿ ವೈದ್ಯಕೀಯ ಕಾಯ್ದೆ ಅಡಿ ನೋಂದಣಿ ಆಗದೆ ಇರುವ ವೈದ್ಯರ ವಿರುದ್ಧ ಕ್ರಮಕ್ಕೆ ಆರೋಗ್ಯ ಇಲಾಖೆ ಆಯುಕ್ತರಿಗೆ ವರದಿ ಸಲ್ಲಿಸಲಾಗಿದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ನೀಲಮ್ಮ ತಿಳಿಸಿದರು.

‘ರೇಡಿಯೋಲಾಜಿ ಪದವಿ ಪಡೆಯದೇ ಗುರುಮಠಕಲ್‌ನಲ್ಲಿ ಏಳೆಂಟು ವರ್ಷಗಳಿಂದ ಡಾ.ಗುರುರಾಜ ಕುಲಕರ್ಣಿ ಎನ್ನುವವರು ಮೊಬೈಲ್‌ ಸ್ಕ್ಯಾನಿಂಗ್ ಯಂತ್ರ ಬಳಸಿ ಭ್ರೂಣಲಿಂಗ ಪತ್ತೆ ಮಾಡುತ್ತಿರುವುದು ಕಂಡು ಬಂದಿದೆ. ಹಲವು ಆಸ್ಪತ್ರೆಗಳಲ್ಲಿ ಆಯುರ್ವೇದಿಕ್, ಹೋಮಿಯೊಪಥಿಕ್ ವೈದ್ಯರು ಅಲೋಪಥಿ ಮತ್ತು ಹೋಮಿಯೊಪಥಿಕ್ ಚಿಕಿತ್ಸೆ ನೀಡುತ್ತಿದ್ದಾರೆ. ಜತೆಗೆ ಪ್ರಯೋಗಾಲಯ, ಫಾರ್ಮಸಿ, ಎಕ್ಸ್- ರೇಗಳನ್ನು ನಿರ್ವಹಿಸುತ್ತಿರುವುದು ಕಂಡುಬಂದಿದೆ. ಇದು ಕಾನೂನು ಬಾಹಿರ’ ಎಂದು ಬುಧವಾರ ‘ಪ್ರಜಾವಾಣಿ’ ಗೆ ತಿಳಿಸಿದರು.

‘ಕೆಲವು ವೈದ್ಯರು ಕೆಪಿಎಂಎ (ಕರ್ನಾಟಕ ಪ್ರೈವೇಟ್ ಮೆಡಿಕಲ್ ಅಡ್ಮಿನಿಸ್ಟ್ರೇಟ್) ಕಾಯ್ದೆಅಡಿ ನೋಂದಣಿ ಮಾಡಿಸಿಲ್ಲ. ಇನ್ನು ಕೆಲವರು ನೋಂದಣಿ ದಿನಾಂಕ ಮುಗಿದಿದ್ದರೂ ಪರವಾನಗಿ ನವೀಕರಣ ಮಾಡಿಸದೇ ಚಿಕಿತ್ಸೆ ನೀಡುತ್ತಿರುವುದು ಪರಿಶೀಲನೆ ಸಂದರ್ಭದಲ್ಲಿ ಕಂಡುಬಂದಿದೆ. ಯಾದಗಿರಿ ಜಿಲ್ಲೆಯಲ್ಲಿ ಒಟ್ಟು 221 ವೈದ್ಯರು ಕೆಪಿಎಂಎ ಕಾಯ್ದೆಯಡಿ ನೋಂದಣಿ ಮಾಡಿಸಿಕೊಂಡಿದ್ದಾರೆ. ಉಳಿದಂತೆ 99 ವೈದ್ಯರು ಈ ಕಾಯ್ದೆಯಡಿ ನೋಂದಣಿ ಮಾಡಿಕೊಳ್ಳದೇ ಚಿಕಿತ್ಸೆ ನೀಡುತ್ತಿದ್ದಾರೆ. ಕಾನೂನು ಬಾಹಿರವಾಗಿರುವ ಇಂತಹ ಚಟುವಟಿಕೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ವರದಿ ನೀಡಲಾಗಿದೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT