ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದಿನ ತಿಂಗಳು ಹಕ್ಕು ಪತ್ರ ವಿತರಣೆ

Last Updated 20 ಏಪ್ರಿಲ್ 2017, 5:41 IST
ಅಕ್ಷರ ಗಾತ್ರ

ಅಫಜಲಪುರ: ತಾಲ್ಲೂಕಿನ ಸೊನ್ನ ಭೀಮಾ ಬ್ಯಾರೇಜ್‌ ನಿರ್ಮಾಣದಿಂದ ಅದರ ಹಿನ್ನೀರಿನಿಂದ ಬಂಕಲಗಾ ಸೇರಿದಂತೆ ಒಟ್ಟು 10 ಗ್ರಾಮಗಳು ಮುಳುಗಡೆಯಾಗಲಿವೆ.
ಆ ಗ್ರಾಮಸ್ಥರಿಗೆಂದೇ 8 ಪುನರ್ವಸತಿ ಕೇಂದ್ರಗಳು ಸಿದ್ಧವಾಗಿದ್ದು, ಅವುಗಳನ್ನು ಗ್ರಾಮ ಪಂಚಾಯಿತಿಗಳಿಗೆ ಹಸ್ತಾಂತರಿ ಸಲಾಗಿದೆ. ಇನ್ನೂ 2 ಪುನರ್ವಸತಿ ಕೇಂದ್ರಗಳು ಪೂರ್ಣಪ್ರಮಾಣದಲ್ಲಿ ನಿರ್ಮಾಣ ಆಗಬೇಕಿದೆ.

ಬಂಕಲಗಾ ಗ್ರಾಮದಿಂದ 1 ಕಿ.ಮೀ ದೂರದಲ್ಲಿ ಭೀಮಾ ಏತ ನೀರಾವರಿ ಉಪವಿಭಾಗವು ಪುನರ್ವಸತಿ ಕೇಂದ್ರ ನಿರ್ಮಿಸಿದೆ. ಇಡೀ ಗ್ರಾಮವನ್ನು ಸ್ಥಳಾಂತ ರಿಸಲು ಉದ್ದೇಶಿಸಿದೆ. ಆದರೆ ಗ್ರಾಮ ಸ್ಥರಿಗೆ ಈವರೆಗೆ ಹಕ್ಕುಪತ್ರ ವಿತರಿಸ ಲಾಗಿಲ್ಲ. ಸೌಲಭ್ಯ ಕೂಡ ಇನ್ನೂ ಕಲ್ಪಿಸಿರದ ಕಾರಣ ಗ್ರಾಮಸ್ಥರು ಸ್ಥಳಾಂತ ರಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ.ತಾಲ್ಲೂಕಿನ ಬಂಕಲಗಾ, ಬಳುಂಡಗಿ, ದುದ್ದುಣಗಿ ಹಾಗೂ ಸಿಂದಗಿ, ಇಂಡಿ ತಾಲ್ಲೂಕಿನ ವ್ಯಾಪ್ತಿಗೆ ಬರುವ ತಾರಾ ಪುರ, ತಾವರಖೇಡ ಗ್ರಾಮಗಳಲ್ಲಿ ಪುನರ್ವಸತಿ ಕಾಮಗಾರಿ ಮುಗಿದಿದೆ. ಆದರೆ ತಾವರಖೇಡ ಪುನರ್ವಸತಿ ಕೇಂದ್ರ ಇನ್ನೂ ಪೂರ್ಣಗೊಂಡಿಲ್ಲ.

‘ಬಂಕಲಗಾ ಗ್ರಾಮದವರಿಗೆ ₹ 5.24 ಕೋಟಿ ವೆಚ್ಚದಲ್ಲಿ ಪುನರ್ವಸತಿ ಕೇಂದ್ರ ನಿರ್ಮಿಸಲಾಗಿದೆ. 420 ನಿವೇಶನಗಳನ್ನು ಕಲ್ಪಿಸಲಾಗಿದೆ. ಮೇ ತಿಂಗಳ ಕೊನೆಯ ವಾರದಲ್ಲಿ 132 ಜನರಿಗೆ ಹಕ್ಕುಪತ್ರ ವಿತರಿಸಲಾಗುವುದು. ಉಳಿದ ಪತ್ರ ಗಳನ್ನು ಅದೇ ಕುಟುಂಬ ದಲ್ಲಿ 18 ವರ್ಷ ಪೂರ್ಣಗೊಂಡವರಿಗೆ ಪುನಃ ಸಮೀಕ್ಷೆ ನಡೆಸಿ, ಹಕ್ಕು ಪತ್ರ ವಿತರಿಸಲಾಗುವುದು’ ಎಂದು ಭೀಮಾ ಏತ ನೀರಾವರಿ ಉಪ ವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಬಿ.ಎಸ್. ಐನಾಪುರ ‘ಪ್ರಜಾವಾಣಿ’ ತಿಳಿಸಿದರು.

‘ಭೀಮಾ ಏತ ನೀರಾವರಿ ಹಿನ್ನೀರಿಗೆ ಒಳಪಡುವ 10 ಗ್ರಾಮದ ಜನರಿಗೆ ಅವರ ಮನೆಗಳ ಅಂದಾಜು ವೆಚ್ಚದ ಪ್ರಕಾರ ₹ 1 ಲಕ್ಷ ದಿಂದ ₹ 5 ಲಕ್ಷ ಪರಿಹಾರ ನೀಡಲಾಗಿದೆ. ಅವರು ಮನೆ ಕಟ್ಟಿಕೊಳ್ಳಬೇಕು. ನಾವು ಸ್ಥಳಾಂತರ ವೆಚ್ಚ ಕೊಡುತ್ತೇವೆ’ಎಂದರು.   ‘ಇಲ್ಲಿ ನಾವು ಈಗಾಗಲೇ ರಸ್ತೆ, ಕುಡಿಯುವ ನೀರಿನ ವ್ಯವಸ್ಥೆ, ಶಾಲಾ ಕೋಣೆ, ದೇವಾಲಯ, ಮಸೀದಿ, ಬಸ್‌ ನಿಲ್ದಾಣ, ಅಂಗನವಾಡಿ ಕಟ್ಟಡ, ಸಮುದಾಯ ಭವನ ಎಲ್ಲವೂ ಮಾಡಿದ್ದೇವೆ’ ಎಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT