ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕ್ ಮುಂದೆ ನೇಕಾರರ ಪ್ರತಿಭಟನೆ

Last Updated 20 ಏಪ್ರಿಲ್ 2017, 6:04 IST
ಅಕ್ಷರ ಗಾತ್ರ

ಹನುಮಸಾಗರ: ಸಾಲ ಸೌಲಭ್ಯ  ನೀಡಲು ಒತ್ತಾಯಿಸಿ ಇಲ್ಲಿನ ಅರ್ಬನ್ ಸಹಕಾರ ಬ್ಯಾಂಕ್‌ಗೆ  ನೇಕಾರರು ಮಂಗಳವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಬ್ಯಾಂಕ್‌ ಏಳ್ಗೆಗೆ ನೇಕಾರರು ಶ್ರಮಿಸಿದ್ದಾರೆ. ಆದರೆ, ನೇಕಾರರಿಗೆ ಸಾಲ ಸೌಲಭ್ಯ ಒದಗಿಸಲು ಬ್ಯಾಂಕ್‌ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಸಾಲದ ಅರ್ಜಿ ನಮೂನೆಯ ಉದ್ಯೋಗ ಕಾಲಂನಲ್ಲಿ ‘ನೇಕಾರ, ಕೃಷಿಕ’ ಎಂದು ಬರೆದವರಿಗೆ ಸಾಲ ನೀಡುವುದಿಲ್ಲ ಎಂದು ಮುಖಂಡ ಶಂಕರ ಸಿನ್ನೂರ ಆರೋಪಿಸಿದರು.

ಜವಳಿ ಇಲಾಖೆಯಿಂದ ಪತ್ರ ತರಬೇಕು. ವಿವಿಧ ದಾಖಲಾತಿ ಒದಗಿಸಬೇಕು ಎಂದು ಬ್ಯಾಂಕ್ ಸಿಬ್ಬಂದಿ ಸತಾಯಿಸುತ್ತಾರೆ ಎಂದು ನೇಕಾರರು ಆಕ್ರೋಶ ವ್ಯಕ್ತಪಡಿಸಿದರು.
ಬ್ಯಾಂಕ್ ಅಧ್ಯಕ್ಷ ಬಸವರಾಜ ಬಾಚಲಾಪುರ, ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ವಿಶ್ವನಾಥ ಕನ್ನೂರ ಮಾತನಾಡಿ, ‘ನಿಯಮದ ಪ್ರಕಾರ ನೇಕಾರರಿಗೆ ಸಾಲ ಸೌಲಭ್ಯ ಒದಗಿಸಲು ಕ್ರಮಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ಬ್ಯಾಂಕ್ ನಿರ್ದೇಶಕರಾದ ಪ್ರಹ್ಲಾದರಾಜ್ ದೇಸಾಯಿ, ವಿಠಲಸಾ ಶಿಂಗ್ರಿ, ಮಹಿಬೂಬಸಾಬ ಮೂಲಿಮನಿ, ಸಹಕಾರ ಭಾರತಿ ಜಿಲ್ಲಾಧ್ಯಕ್ಷ ಡಾ.ಶರಣು ಹವಾಲ್ದಾರ, ಸಿಇಒ ರಾಘವೇಂದ್ರ ಜಮಖಂಡಿಕರ, ಚಂದಾಲಿಂಗಪ್ಪ ಬಾಚಲಾಪುರ, ನೇಕಾರ ಸೊಸೈಟಿ ಅಧ್ಯಕ್ಷ ಅಂಬಾಸಾ ಬಸ್ವಾ, ಉಪಾಧ್ಯಕ್ಷ ಅಮರೇಶ ಕುರನಾಳ, ವೆಂಕಟೇಶ ಮೇಹರವಾಡೆ, ಸುರೇಶ ಸಿನ್ನೂರ, ನಾಗಪ್ಪ ಹರಿಜನ, ಶಂಕರ ಸಿನ್ನೂರ, ವಿಶ್ವನಾಥ ಯಾಳಗಿ, ವಾಸುದೇವ ಹುಲಮನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT