ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

20 ನಿಮಿಷದಲ್ಲೇ ಚಿಮ್ಮಿತು ನೀರು!

Last Updated 20 ಏಪ್ರಿಲ್ 2017, 7:36 IST
ಅಕ್ಷರ ಗಾತ್ರ

ಉಳ್ಳಾಲ: ಬೆಳ್ಮ ಗ್ರಾಮ ಪಂಚಾಯಿತಿ ಯಲ್ಲಿ  ನೀರಿನ ಸಮಸ್ಯೆ ಇರುವ ಕಾರಣ ಶಾಸಕರ ಅನುದಾನದಡಿ ಕೆರೆ ಅಭಿ ವೃದ್ದಿಗೆ ಮುಂದಾದ ವೇಳೆ ಅಚ್ಚರಿ ಎಂಬಂತೆ ಏಕಾಏಕಿ ಅಂತರ್ಜಲ ಒಸರಿದ ಘಟನೆ  ಪಂಚಾಯಿತಿ ವ್ಯಾಪ್ತಿಯ ಬೆಳ್ಮ ದೋಟ ಕುಡ್ಪಡ್ಪು ಎಂಬಲ್ಲಿ ಬುಧವಾರ ನಡೆದಿದೆ.ಬೆಳ್ಮದೋಟದ ಕುಡ್ಪಡ್ಪುವಿನ ಸುಮಾರು 150 ಮನೆಗಳಿಗೆ ನೀರು ಪೂರೈಸುವ ಉದ್ದೇಶದಿಂದ ಚಂದ್ರ ಹಾಸ್ ಶೆಟ್ಟಿ ಎಂಬವರ ಕೃಷಿ ಗದ್ದೆಯಲ್ಲಿ ಕೆರೆ ಅಭಿವೃದ್ಧಿ ಕಾರ್ಯಕ್ಕೆ ಬೆಳ್ಮ ಗ್ರಾಮ ಪಂಚಾಯಿತಿ ಮುಂದಾಗಿತ್ತು. ಅಲ್ಲದೇ ಈ ಕಾರ್ಯಕ್ಕೆ ಸ್ಥಳೀಯ ಶಾಸಕ ಯು.ಟಿ.ಖಾದರ್ ಅನುದಾನದಿಂದ ₹ 3 ಲಕ್ಷ ಬಿಡುಗಡೆಯಾಗಿತ್ತು.

ಬುಧವಾರ ಬೆಳಿಗ್ಗೆ ಜೆಸಿಬಿ ಸಹಿತ ಕೆರೆ ಅಭಿವೃದ್ಧಿ ಕಾರ್ಯಕ್ಕೆ ಪಂಚಾಯಿತಿ ಆಡ ಳಿತ ಮುಂದಾಗಿತ್ತು. ಗುದ್ದಲಿ ಪೂಜೆ ನಡೆ ಸುವ ಮೂಲಕ ಕಾರ್ಯಕ್ಕೆ ಚಾಲನೆ ನೀಡ ಲಾಯಿತು. ಈ ವೇಳೆ ಗದ್ದೆಗಿಳಿದ ಜೆಸಿಬಿ ವಾಹನ ಗದ್ದೆಯನ್ನು ಕೊರೆದು ಕೆರೆಯ ಮಾದರಿಗೆ ಪರಿವರ್ತಿಸಲು ಮುಂದಾದ ಕೇವಲ ಇಪ್ಪತ್ತು ನಿಮಿಷದಲ್ಲಿ ಅಲ್ಲೊಂ ದು ಅಚ್ಚರಿ ನಡೆಯಿತು. ಹೊಂಡ ತೋ ಡಲು ಮುಂದಾಗುತ್ತಿದ್ದಂತೆ ಏಕಾಏಕಿ ಅಂತರ್ಜಲ ಚಿಮ್ಮಿದ್ದು, ದೊಡ್ಡ ಮಟ್ಟ ದಲ್ಲಿ ಒಸರು ಕಾಣಿಸಿಕೊಂಡಿದೆ. ಇದರಿಂ ದಾಗಿ ಸ್ಥಳೀಯ ಅಚ್ಚರಿಗೆ ಒಳಗಾಗಿದ್ದಾರೆ. ಅಲ್ಲದೇ ನೀರಿನ ಸಮಸ್ಯೆಯ ಹಿನ್ನೆಲೆ ಯಲ್ಲಿ ಈ ಕೆರೆ ಅಭಿವೃದ್ದಿ ಕಾರ್ಯಕ್ಕೆ ಮುಂದಾಗಿದ್ದರೂ ಏಕಾಏಕಿ ನೀರು ಚಿಮ್ಮಿರುವುದು ಸ್ಥಳೀಯ ಸಂತಸಕ್ಕೆ ಕಾರಣವಾಗಿದೆ.

ಹೆಚ್ಚುವರಿ ಅನುದಾನ!: ಗದ್ದೆಯಲ್ಲಿ ಕಾಮಗಾರಿಗೆ ಚಾಲನೆ ನೀಡಿದ ಕೆಲವೇ ನಿಮಿಷಗಳಲ್ಲಿ ನೀರು ಚಿಮ್ಮಿರುವ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳು ತಕ್ಷಣ ಸಚಿವ ಖಾದರ್ ಅವರ ಗಮನಕ್ಕೆ ತಂದರು. ಹೀಗಾಗಿ ತಕ್ಷಣ ಅವರು ಹೆಚ್ಚುವರಿ ಅನುದಾನ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ಮತ್ತೆ ಎರಡು ಲಕ್ಷ ಅನು ದಾನ ನೀಡುವ ಮೂಲಕ ಅಂತರ್ಜಲ ವನ್ನು ರಕ್ಷಿಸಿ ಸುತ್ತಲಿನ ಸುಮಾರು 150 ಮನೆಗಳಿಗೆ ಪೂರೈಸಲು ಕ್ರಮ ಕೈಗೊಳ್ಳು ವಂತೆ ಶಾಸಕ ಖಾದರ್ ಸ್ಥಳೀಯಾ ಡಳಿತಕ್ಕೆ ಸೂಚಿಸಿದ್ದಾರೆ. ಗದ್ದೆಯಲ್ಲಿ ಕೆರೆ ಅಭಿವೃದ್ಧಿಯ ಸಂದರ್ಭ ಏಕಾಏಕಿ ನೀರು ಕಾಣಿಸಿದ್ದು ತುಂಬಾ ಸಂತಸ ತಂದಿದೆ. ಇನ್ನು ಮುಂದೆ 150 ಮನೆಗಳಿಗೆ ಈ ನೂತನ ಕೆರೆ ಯಿಂದ ನೀರನ್ನು ಪೂರೈಸಲಾಗುತ್ತದೆ ಎಂದು ಬೆಳ್ಮ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷ ಅಬ್ದುಲ್ ಸತ್ತಾರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT