ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಯೋಧರ ಉತ್ಸಾಹದಿಂದ ಕಾರ್ಗಿಲ್‌ ಜಯ’

Last Updated 20 ಏಪ್ರಿಲ್ 2017, 7:38 IST
ಅಕ್ಷರ ಗಾತ್ರ

ಮಂಗಳೂರು: ‘ಕಾರ್ಗಿಲ್‌ ಯುದ್ಧದಲ್ಲಿ ಗಳಿಸಿದ ಜಯ, ನಮ್ಮ ವೀರ ಯೋಧರ ಉತ್ಸಾಹದ ಫಲ. ಭಾರತೀಯ ಯೋಧರ ಸ್ಫೂರ್ತಿ, ಉತ್ಸಾಹಗಳನ್ನು ನಿರಂತರವಾಗಿ ಕಾಪಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ’ ಎಂದು ನಿವೃತ್ತ ಸೇನಾ ಮುಖ್ಯಸ್ಥ ಜನರಲ್‌ ವೇದ್‌ ಪ್ರಕಾಶ್‌ ಮಲಿಕ್‌ ಹೇಳಿದರು.ಮಾಜಿ ಸೈನಿಕರ ಸಂಘ, ಲಯನ್ಸ್‌ ಜಿಲ್ಲೆ 371 ಡಿ, ನಿಟ್ಟೆ ವಿಶ್ವವಿದ್ಯಾಲಯ, ಶಾಸ್ತಾವು ಭೂತನಾಥೇಶ್ವರ ದೇವಸ್ಥಾನ ಟ್ರಸ್ಟ್‌ಗಳ ಆಶ್ರಯದಲ್ಲಿ ಬುಧವಾರ ನಗರದ ಪುರಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಕಾರ್ಗಿಲ್‌ ಯುದ್ಧ–1999’ ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು.

‘ಕಾರ್ಗಿಲ್‌ ಯುದ್ಧದಲ್ಲಿ ಹೋರಾಡಿದ ಯೋಧರ ಸ್ಫೂರ್ತಿಯನ್ನು ಮರೆಯಲಾಗದು. ಅವರಲ್ಲಿದ್ದ ಉತ್ಸಾಹ, ಸ್ಫೂರ್ತಿ ಯಿಂದಾಗಿಯೇ ಪಾಕಿಸ್ತಾನ ಸೇನೆಯನ್ನು ಕಾರ್ಗಿಲ್‌ನಿಂದ ಹಿಮ್ಮೆಟ್ಟಿಸಲು ಸಾಧ್ಯವಾ ಯಿತು. ಇದಕ್ಕೆ ಸೇನೆಯ ಯೋಜನಾಬದ್ಧ ಕಾರ್ಯಾಚರಣೆ, ಸರ್ಕಾರದ ಬೆಂಬಲ, ವಾಯು ಪಡೆ, ನೌಕಾದಳದ ಸಹಕಾರ ವೂ ಕಾರಣ’ ಎಂದು ವಿವರಿಸಿದರು.

‘1999 ರಲ್ಲಿ ಪಾಕಿಸ್ತಾನದ ಸೈನಿ ಕರು, ಜಿಹಾದಿಗಳ ವೇಷದಲ್ಲಿ ಗಡಿ ನಿಯಂತ್ರಣ ರೇಖೆ ದಾಟಿ ಬಂದಿದ್ದರು. ಇದು ಪಾಕಿಸ್ತಾನದ ಆಡಳಿತಕ್ಕಾಗಲಿ, ವಾಯು ಪಡೆ ಮತ್ತು ನೌಕಾಪಡೆಗಾಗಲೀ ತಿಳಿದಿರಲಿಲ್ಲ. ನುಸುಳಿದವರು ಪಾಕಿ ಸ್ತಾನದ ಸೈನಿಕರೇ ಅಥವಾ ಜಿಹಾದಿಗಳೇ ಎಂಬುದನ್ನು ತಿಳಿಯಲು ಕೆಲ ದಿನ ಬೇಕಾ ಯಿತು. ಕೊನೆಗೆ ಅವರೇ ಪಾಕಿಸ್ತಾನದ ಸೈನಿಕರು ಎಂಬುದು ಖಚಿತವಾದಾಗ ಭಾರತದಿಂದ ಪ್ರತ್ಯುತ್ತರ ನೀಡಬೇಕಾ ಯಿತು’ ಎಂದು ಹೇಳಿದರು.

‘ತುರ್ತುಕ್‌ ಪ್ರದೇಶವನ್ನು 1971 ರಲ್ಲಿ ಭಾರತೀಯ ಸೇನೆ ವಶಕ್ಕೆ ಪಡೆದಿತ್ತು. ಅಲ್ಲದೇ 1984 ರಲ್ಲಿ ಸಿಯಾಚಿನ್‌ ಕೂಡ ಭಾರತದ ವಶವಾಗಿತ್ತು. ಇದೆಲ್ಲದರ ಪರಿ ಣಾಮದ 1998 ರಲ್ಲಿ ಸಿಯಾಚಿನ್‌ ಪ್ರದೇ ಶದಲ್ಲಿ ಭಯೋತ್ಪಾದಕ ಚಟುವಟಿಕೆಗಳು ಬಹುತೇಕ ಸ್ಥಗಿತಗೊಂಡಿದ್ದು, ಸಿಯಾಚಿ ನ್‌ಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗಿತ್ತು. ಇದು ಪಾಕಿಸ್ತಾನದ ಆತಂಕಕ್ಕೆ ಕಾರಣವಾಯಿತು. ಇದರ ಫಲವಾಗಿಯೇ ಕಾರ್ಗಿಲ್‌ಗೆ ನುಸುಳುವ ಪ್ರಯತ್ನ ಮಾಡಿದರು’ ಎಂದು ತಿಳಿಸಿದರು.

‘ಕಾರ್ಗಿಲ್‌ ಯುದ್ಧ ಘೋಷಣೆಯಾ ದಾಗ ಅನೇಕ ಸವಾಲುಗಳನ್ನು ಎದುರಿ ಸಿದ್ದೆವು. ಶಸ್ತ್ರಾಸ್ತ್ರಗಳ ಕೊರತೆಯೂ ಅದ ರಲ್ಲಿ ಒಂದಾಗಿತ್ತು. ಪರಮಾಣು ಪರೀಕ್ಷೆ ನಡೆಸಿದ್ದರಿಂದ ಅಂತರ ರಾಷ್ಟ್ರೀಯ ನಿರ್ಬಂಧವನ್ನೂ ದೇಶ ಎದುರಿಸುತ್ತಿತ್ತು. ಈ ಸಂದರ್ಭದಲ್ಲಿ ಎದುರಾದ ಯುದ್ಧ ವನ್ನು, ಇರುವ ಸಾಮರ್ಥ್ಯದಲ್ಲಿಯೇ ಗೆಲ್ಲುವುದಾಗಿ ಹೇಳಿದ್ದೆ. ಸೈನಿಕರ ಅಪ್ರತಿಮ ಹೋರಾಟದ ಫಲವಾಗಿ ಅದು ಸಾಕಾರಗೊಂಡಿತು’ ಎಂದು ಮಾಹಿತಿ ನೀಡಿದರು.

‘ಅಂತರರಾಷ್ಟ್ರೀಯ ಒತ್ತಡದಿಂದ ಗಡಿ ನಿಯಂತ್ರಣ ರೇಖೆಯನ್ನು ದಾಟ ದಂತೆ ಆಗಿನ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಸೂಚನೆ ನೀಡಿದ್ದರು. ಆದರೆ, ಪರಿಸ್ಥಿತಿ ಕೈಮೀರಿದರೆ, ಗಡಿ ನಿಯಂತ್ರಣ ರೇಖೆಯನ್ನು ದಾಟಲು ಹಿಂದೆ ನೋಡುವುದಿಲ್ಲ ಎಂದು ಪ್ರಧಾ ನಿಗೆ ತಿಳಿಸಿದ್ದೆ. ಆದರೆ, ನಿಯಂತ್ರಣ ರೇಖೆ ಯಲ್ಲಿ ಇದ್ದುಕೊಂಡೇ ಕಾರ್ಗಿಲ್‌ನಲ್ಲಿ ವಿಜಯ ಸಾಧಿಸಿದೆವು’ ಎಂದು ಹೇಳಿದರು.

ಮೇಜರ್‌ ವಿಕ್ರಮ್‌ ಬತ್ರಾ, ಮೇಜರ್‌ ಪಿ. ಅಚಾರ್ಯ, ಮೇಜರ್‌ ರಾಬಿನ್‌ ಥಾಪರ್‌, ಜವಾನ ಮನೋಜ್‌ ಪಾಂಡೆ ಅವರು ಬರೆದಿದ್ದ ಪತ್ರಗಳನ್ನು ಓದಿದ ಜನರಲ್‌ ವಿ.ಪಿ. ಮಲಿಕ್‌, ‘ಪ್ರತಿ ಯೊಂದು ಪತ್ರದಲ್ಲಿಯೂ ಯೋಧರ ಲ್ಲಿದ್ದ ಉತ್ಸಾಹ ಎದ್ದು ಕಾಣುತ್ತದೆ’ ಎಂದು ಹೇಳಿದರು.ಜಿಲ್ಲಾಧಿಕಾರಿ ಡಾ. ಕೆ.ಜಿ. ಜಗದೀಶ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಭೂಷಣ್‌ ಬೊರಸೆ, ಲಯನ್ಸ್‌ ಜಿಲ್ಲೆ 371 ಡಿ ಗವರ್ನರ್ ಅರುಣ್‌ ಶೆಟ್ಟಿ, ಸಾಸ್ತಾವು ಭೂತನಾಥೇಶ್ವರ ದೇವಸ್ಥಾನ ಟ್ರಸ್ಟ್‌ ವ್ಯವಸ್ಥಾಪಕ ಟ್ರಸ್ಟಿ ವಿಜಯ್‌ನಾಥ ವಿಠಲ್‌ ಶೆಟ್ಟಿ, ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳು ವೇದಿಕೆಯಲ್ಲಿದ್ದರು. ಮಾಜಿ ಸೈನಿಕರ ಸಂಘದ ಅಧ್ಯಕ್ಷ ವಿಕ್ರಮ್‌ ದತ್ತಾ ಸ್ವಾಗತಿಸಿದರು. ನಿವೃತ್ತ ಬ್ರಿಗೇಡಿಯರ್‌ ಐ.ಎನ್‌. ರೈ ಪರಿಚಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT