ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಾತಿವಾರು, ಪ್ರಾಂತ್ಯವಾರು ವಿಂಗಡನೆ– ಆತಂಕ ಸೃಷ್ಟಿ’

Last Updated 20 ಏಪ್ರಿಲ್ 2017, 7:56 IST
ಅಕ್ಷರ ಗಾತ್ರ

ಉಡುಪಿ: ‘ದೇಶದಲ್ಲಿ ಬಹು ಸಂಖ್ಯಾತ ರೆಂದು ಎನಿಸಿಕೊಂಡಿರುವ ಹಿಂದೂಗಳು ಜಾತಿವಾರು, ಪ್ರಾಂತ್ಯವಾರುಗಳಾಗಿ ವಿಂಗಡಿ ಸಲ್ಪಟ್ಟು, ಅಲ್ಪಸಂಖ್ಯಾತರಾಗುವ ಆತಂಕದಲ್ಲಿದ್ದಾರೆ ಎಂದು ಚಿತ್ರದುರ್ಗದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಹೇಳಿದರು.ಉಡುಪಿ ಶ್ರೀಕೃಷ್ಣಮಠ ಪರ್ಯಾಯ ಪೇಜಾವರ ಮಠದ ಆಶ್ರಯದಲ್ಲಿ ನಗರದ ರಾಜಾಂಗಣದಲ್ಲಿ ನಡೆಯು ತ್ತಿರುವ ಸಂತ ಸಂದೇಶ ಮಾಲಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ದೇಶದಲ್ಲಿ ಇಸ್ಲಾಂ, ಕ್ರಿಶ್ಚಿಯನ್‌ ಧರ್ಮವರು ಬಹುಸಂಖ್ಯಾತರಾಗಿ ಬೆಳೆ ಯುತ್ತಿದ್ದಾರೆ. ಈಗ ನಿಜವಾದ ಅಲ್ಪ ಸಂಖ್ಯಾತರು ಹಿಂದೂಗಳೇ ಆಗಿದ್ದಾರೆ. ಕಾಶ್ಮೀರ ದಿಂದ, ಕನ್ಯಾಕುಮಾರಿವರೆಗೆ ಇರುವ ಇಸ್ಲಾಂ ಧರ್ಮಿಯರು, ಎಲ್ಲಾ ವಿಷಯ ದಲ್ಲೂ ಒಂದಾಗಿರುತ್ತಾರೆ. ಆದರೆ, ಹಿಂದೂಗಳು ಮಾತ್ರ ಜಾತಿ ವಾರು, ಪ್ರಾಂತ್ಯವಾರುಗಳಾಗಿ ಪ್ರತ್ಯೇಕ ವಾಗಿದ್ದಾರೆ ಎಂದರು.

‘ಕಾಲ ಕಾಲಘಟ್ಟಕ್ಕೆ ಒಬ್ಬೊಬ್ಬರು ಕಾಂತ್ರಿ ಪುರುಷರು ಹುಟ್ಟಿಬರುತ್ತಾರೆ ಎನ್ನುವುದನ್ನು ಇತಿಹಾಸದಲ್ಲಿ ಕಾಣು ತ್ತೇವೆ. ಬುದ್ಧ, ಬಸವಣ್ಣ, ಗಾಂಧೀಜಿ, ಅಂಬೇಡ್ಕರ್‌ ಇವರೆಲ್ಲರೂ ಆಯಾ ಕಾಲಘಟ್ಟಕ್ಕೆ ಹುಟ್ಟಿಬಂದವರು. ಅವರು ಬಂದಂತಹ ಆಯಾ ಸಂದರ್ಭದಲ್ಲಿ ಒಂದೊಂದು ಕಾಂತ್ರಿಗಳು ನಡೆದಿವೆ ಎಂದು ತಿಳಿಸಿದರು.‘ದಾರ್ಶನಿಕರು ಮತ್ತು ಕ್ರಾಂತಿ ಪುರು ಷರು ಇದ್ದಾಗ ಅವರನ್ನು ಗೌರವಿಸಿಲ್ಲ, ಅವರ ವಿಚಾರಗಳನ್ನು ಅನುಷ್ಠಾನ ಮಾಡುವುದಿಲ್ಲ. ಕೇವಲ ಟೀಕೆ ಟಿಪ್ಪಣಿ ಮಾಡಲು ಮಾಡುತ್ತೇವೆ. ಇಲ್ಲದಂತಹ ಸಂದರ್ಭದಲ್ಲಿ ಅವರನ್ನು ದೇವರ ಸ್ಥಾನದಲ್ಲಿ ಕಾಣುತ್ತೇವೆ. ಅವ ರನ್ನು ದಾರ್ಶನಿಕ ಸ್ಥಾನದಲ್ಲೂ ನೋಡಲು ಬಯಸುವುದಿಲ್ಲ. ಕನಿಷ್ಠ ಪಕ್ಷ ಅವರನ್ನು ಗೌರವದಿಂದ ಕಾಣಲು ಈ ಸಮುದಾಯ ವಿರೋಧವಿದೆ ಎನ್ನುವು ದಕ್ಕೆ ಸ್ಪಷ್ಟ ಉದಾಹರಣೆ ವಿಶ್ವೇಶತೀರ್ಥ ಸ್ವಾಮೀಜಿ ಹೇಳಬಹುದು. ದೇಶದಲ್ಲಿ ಜಾತಿ ಸಾಮ ರಸ್ಯ ಮೂಡಿಸಿ, ಸಮಾನತೆ ಸಾಧಿಸಲು ಶ್ರಮಿಸುತ್ತಿರುವ ಪೇಜಾವರ ಶ್ರೀಗಳ ವಿಷಯದಲ್ಲಿಯೂ ಸಮಾಜ ಹಾಗೆಯೇ ನಡೆದುಕೊಳ್ಳುತ್ತಿದೆ ಎಂದರು.

ಹಿಂದೂ ಸಮಾಜದಲ್ಲಿರುವ ಪ್ರತಿಯೊಬ್ಬರು ಜಾತಿ ಮತ, ಆಚಾರ ವಿಚಾರ, ಭಾಷೆ ಪ್ರಾಂತ್ಯವನ್ನು ಮರೆತು, ನಾವೆ ಲ್ಲರೂ ಒಂದೇ ಎಂಬ ಭಾವನೆ ಯನ್ನು ತಳೆಯಬೇಕು. ಬಸವಣ್ಣನವರು ದೇವರು, ದಿಂಡರನ್ನು ವಿರೋಧಿಸಿಲ್ಲ. ದೇವರ ಮತ್ತು ಭಕ್ತರ ನಡುವೆ ಅಂತರ ಸೃಷ್ಟಿಸುವವರನ್ನು ವಿರೋಧಿಸಿದರು. ಸಮಾನತೆಗಾಗಿ ಹಾಗೂ ಸಮ ಸಮಾಜದ ನಿರ್ಮಾಣ ಮಾಡಬೇಕೆಂಬ ನಿಟ್ಟಿನಿಂದ ತಾನೂ ಹುಟ್ಟಿದ ಸಮುದಾಯವನ್ನು ಬಿಟ್ಟು ಬಂದು, ಹೊಸ ಧರ್ಮವನ್ನು ಸ್ಥಾಪಿಸಿದರು. ಅವರ ವಿಚಾರಧಾರೆಗ ಳನ್ನು ಅನುಸರಿಸಿಕೊಂಡು ಅನೇಕ ಶರಣರು ಬಂದರು. ಅದರಲ್ಲಿ ತೀರಾ ಹಿಂದುಳಿದ, ನಿಕೃಷ್ಟಕ್ಕೊಳಗಾದ ದಲಿತ ಸಮುದಾಯದ ಮಾದಾರ ಚೆನ್ನಯ್ಯ ಅವರು ಒಬ್ಬರು. ಅವರು ಹಿಂದುಳಿದ ಜಾತಿಯವರಾದರು ಉನ್ನತ ಸಂಸ್ಕಾರ ಹೊಂದಿದ್ದರು ಎಂದು ಹೇಳಿದರು.

ಜಾತಿ ವ್ಯವಸ್ಥೆ ಸಮಾನತೆಗೆ ಪೇಜಾ ವರ ಶ್ರೀಗಳು ಧ್ವನಿ ಎತ್ತಿದವರು. ದಲಿತ ಕಾಲೊನಿಗಳಿಗೆ ಭೇಟಿಕೊಡುವ ಮೂಲಕ ದೇಶದಲ್ಲಿ ಬುಡಸಮೇತ ಜಾತಿ ವ್ಯವಸ್ಥೆ ಯನ್ನು ಕಿತ್ತೊಗೆಯಲು ಪ್ರಯತ್ನಿಸುತ್ತಿ ದ್ದಾರೆ. ಟೀಕೆ ಟಿಪ್ಪಣಿಗಳಿಗೆ ಎದೆ ಗುಂದದೆ ಮುನ್ನಡೆಯುತ್ತಿದ್ದಾರೆ ಎಂದರು.ಪರ್ಯಾಯ ಪೇಜಾವರಮಠದ ವಿಶ್ವೇಶತೀರ್ಥ ಸ್ವಾಮೀಜಿ ಮಾತನಾಡಿ, ‘ಜಾತಿ ಪದ್ಧತಿಯನ್ನು ಸಂಪೂರ್ಣವಾಗಿ ತೊಡೆದು ಹಾಕಲು ಸಾಧ್ಯವಾಗದಿದ್ದರೂ, ಜಾತಿಗಳ ನಡುವೆ ಸಾಮರಸ್ಯವನ್ನು ಮೂಡಿಸುವ ಕೆಲಸ ಮಾಡಬೇಕು’ ಎಂದರು.

ಅಲ್ಪಸಂಖ್ಯಾತರಲ್ಲಿ ಅಸ್ಪೃಶ್ಯತೆ ಎಂಬುವುದಿಲ್ಲ. ಆದರೆ, ಹಿಂದೂಗಳಿಗೆ ಸಮಾನವಾಗಿರುವ ದಲಿತರಲ್ಲಿ ಅಸ್ಪೃಶ್ಯತೆ ಕಾಣುತ್ತಿದ್ದೇವೆ. ಇದು ಹಿಂದು ಧರ್ಮಕ್ಕೆ ಅಪಮಾನ. ಪ್ರಗತಿಪರರು ಹಿಂದು ಸಮಾಜದಲ್ಲಿ ಒಡಕು ಸೃಷ್ಟಿಸುತ್ತಿದ್ದಾರೆ. ಹಿಂದೂ ಮುಸ್ಲಿಂರ ನಡುವೆ ಕೋಮು ಸಾಮರಸ್ಯ ಬೆಳೆಸಬೇಕು ಎಂದು ಹೇಳಿದರು. ಪೇಜಾವರ ಮಠದ ಕಿರಿಯ ವಿಶ್ವಪ್ರಸನ್ನ ಸ್ವಾಮೀಜಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT