ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಲಿತ ಸಮುದಾಯದ ವ್ಯಕ್ತಿ ಸಿಎಂ ಆಗಲಿ

Last Updated 20 ಏಪ್ರಿಲ್ 2017, 8:02 IST
ಅಕ್ಷರ ಗಾತ್ರ

ಉಡುಪಿ: ‘ರಾಜ್ಯದಲ್ಲಿ ದಲಿತ ಸಮುದಾ ಯಕ್ಕೆ ಸೇರಿದ ವ್ಯಕ್ತಿಯೋಬ್ಬರು ಮುಖ್ಯಮಂತ್ರಿಯಾಗಬೇಕು ಎನ್ನುವುದು ತಮ್ಮ ಬಹುಕಾಲದ ಬಯಕೆ. ದಲಿತರಿಗೆ ಮುಖ್ಯಮಂತ್ರಿ, ಪ್ರಧಾನ ಮಂತ್ರಿ ಯಾಗಲು ಅವಕಾಶ ನೀಡಿದರೆ ನಮ್ಮ ಸಾಮರ್ಥ್ಯದೊಂದಿಗೆ ಜವಾಬ್ದಾರಿ ನಿರ್ವಹಿಸಲು ಸಾಧ್ಯವಾಗುತ್ತದೆ’ ಎಂದು ಚಿತ್ರದುರ್ಗದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಹೇಳಿದರು.

ಉಡುಪಿ ಶ್ರೀಕೃಷ್ಣಮಠಕ್ಕೆ ಬುಧವಾರ ಭೇಟಿ ನೀಡಿ ದೇವರ ಆಶೀರ್ವಾದ ಪಡೆದ ಬಳಿಕ ಮಾಧ್ಯಮ ಪ್ರತಿನಿಧಿಗ ಳೊಂದಿಗೆ ಮಾತನಾಡಿದ ಅವರು, ದಲಿತ ಸಮುದಾಯ ಕೇವಲ ಮುಖ್ಯಮಂತ್ರಿ ಮಾತ್ರವಲ್ಲ ಪ್ರಧಾನಿಯಾಗುವ ಅರ್ಹತೆ ಯನ್ನೂ ಹೊಂದಿದೆ. ಅದನ್ನು ಕೇವಲ ಒತ್ತಾಯದಿಂದ ಈಡೇರಿಸಿಕೊಳ್ಳ ಲಾಗದು. ಆಡಳಿತ ನಡೆಸುವ ರಾಜಕೀಯ ಪಕ್ಷಗಳು ನಿರ್ಧಾರ ಮಾಡಬೇಕು. ದಲಿತರ ವ್ಯಕ್ತಿಯನ್ನು ಮುಖ್ಯ ಮಂತ್ರಿ ಯನ್ನಾಗಿಸುವ ವಿಶಾಲ ಮನೋಭಾವ ಬೆಳೆಸಿಕೊಳ್ಳಬೇಕು. ಅದನ್ನು ಮುಂದೆ ಅಧಿಕಾರಕ್ಕೆ ಬರುವ ರಾಜಕೀಯ ಪಕ್ಷಗಳು ಬೆಳೆಸಿಕೊಳ್ಳಬೇಕು. ಈ ಸರ್ಕಾರ ಮಾತ್ರವಲ್ಲ, ಮುಂದೆ ಅಧಿಕಾರಕ್ಕೆ ಬರುವ ರಾಜಕೀಯ ಪಕ್ಷ ಕೂಡಾ ದಲಿತರನ್ನು ಮುಖ್ಯಮಂತ್ರಿ ಯನ್ನಾಗಿಸುವ ವಿಶ್ವಾಸ ತಮಗಿಲ್ಲ ಎಂದರು.

ಸಂವಿಧಾನದಲ್ಲಿ ಎಲ್ಲರಿಗೂ ಅರ್ಹತೆ ಮತ್ತು ಹಕ್ಕು ನೀಡಲಾಗಿದೆ. ಆದರೆ ಈಗ ಅಥವಾ ಮುಂದಿನ ಚುನಾವಣೆಯಲ್ಲೇ ದಲಿತರಿಗೆ ಸಿ.ಎಂ ಹುದ್ದೆ ಸಿಗುತ್ತದೆ ಹೇಳಲಾಗುವುದಿಲ್ಲ. ದಲಿತ ಸಮುದಾ ಯದವರು ಮುಖ್ಯಮಂತ್ರಿಯಾದರೆ, ಅದರಿಂದ ದಲಿತರು ಆರ್ಥಿಕವಾಗಿ, ಸಾಮಾಜಿಕವಾಗಿ ಸುಧಾರಣೆ ಕಾಣ ಲಿದ್ದಾರೆ ಎಂಬ ವಿಶ್ವಾಸವನ್ನು ಸ್ವಾಮೀಜಿ  ವ್ಯಕ್ತಪಡಿಸಿದರು. ವಿಶ್ವೇಶತೀರ್ಥ ಸ್ವಾಮೀಜಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT