ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಎಚ್‌ಬಿ: ಅಕ್ರಮಕ್ಕೆ ಬೀಳದ ಕಡಿವಾಣ?

Last Updated 20 ಏಪ್ರಿಲ್ 2017, 8:45 IST
ಅಕ್ಷರ ಗಾತ್ರ

ವಿಜಯಪುರ: ಜಿಲ್ಲೆ ವ್ಯಾಪ್ತಿಯ ಕರ್ನಾಟಕ ಗೃಹ ಮಂಡಳಿ ಕಚೇರಿಯಲ್ಲಿ ವ್ಯಾಪಕ ಪ್ರಮಾಣದ ಅಕ್ರಮ ನಡೆದಿವೆ ಎಂಬ ದೂರುಗಳ ಸುರಿಮಳೆ ನಡುವೆಯೂ, ನೌಕರರಿಂದ ಲಂಚಕ್ಕೆ ಬೇಡಿಕೆಯಿಡುವುದು ಎಗ್ಗಿಲ್ಲದೆ ಮುಂದುವರೆದಿದೆ.ನಗರದ ಕೆಎಚ್‌ಬಿ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ಮಲ್ಲಪ್ಪ ಸುಕಾಲಿ ಈಚೆಗೆ ತನ್ನ ನಿವಾಸದಲ್ಲಿ ಅರ್ಜಿ ದಾರ ಮಹಮದ್‌ ಸಾಧಿಕ್‌ ಎಂಬುವವ ರಿಂದ ಮೂರು ನಿವೇಶನ ಮಂಜೂರು ಮಾಡಿಸಿಕೊಡಲು ₹ 3 ಲಕ್ಷಕ್ಕೆ ಬೇಡಿಕೆ ಯಿಟ್ಟು, ₹ 2 ಲಕ್ಷ ಲಂಚ ಪಡೆಯುವ ಸಂದರ್ಭ ಎಸಿಬಿ ಪೊಲೀಸರ ದಾಳಿಯಲ್ಲಿ ಸಿಕ್ಕಿಬಿದ್ದಿದ್ದು, ಗೃಹಮಂಡಳಿಯಲ್ಲಿ ನಡೆ ದಿರುವ ಅಕ್ರಮಕ್ಕೆ ಸಾಕ್ಷಿ ಒದಗಿಸಿದಂತಾಗಿದೆ.

ಜಿಲ್ಲೆಯ ಗೃಹಮಂಡಳಿ ವ್ಯಾಪ್ತಿಯಲ್ಲಿ ಸಾಕಷ್ಟು ಅಕ್ರಮ ನಡೆದಿವೆ. ಮನೆ, ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿ ಹಣ ತುಂಬಿದವರು ಇಂದಿಗೂ ಚಾತಕ ಹಕ್ಕಿಗಳಂತೆ ಕಾದು ಕೂತಿದ್ದಾರೆ. ಇದರ ನಡುವೆ ಮಂಡಳಿಯ ಅಧಿಕಾರಿಗಳ ಮಸಲತ್ತಿಗೆ ಒಳಗಾಗಿ ಲಕ್ಷ, ಲಕ್ಷ ರೂಪಾಯಿ ತೆತ್ತು ಖೊಟ್ಟಿ ನಿವೇಶನ, ಮನೆ ಪಡೆದವರು ಇಂದಿಗೂ ಹೈರಾಣಾಗಿ ಇಡೀ ವ್ಯವಸ್ಥೆಗೆ ಶಾಪ ಹಾಕುತ್ತಿದ್ದಾರೆ.

ಗೃಹಮಂಡಳಿಯ ಅಧಿಕಾರಿಗಳ ಧನದಾಹದಿಂದ ಒಂದೇ ನಿವೇಶನ, ಮನೆ ಮೂರ್ನಾಲ್ಕು ಮಂದಿಗೆ ನೋಂದಣಿಯಾಗಿದೆ. ಇದಕ್ಕೆ ಸಂಬಂಧಿಸಿದಂತೆ ಖೊಟ್ಟಿ ಪತ್ರ ಸೃಷ್ಟಿಸಿ ಗ್ರಾಹಕರಿಗೆ ನೋಂದಣಿ ಮಾಡಿಕೊಟ್ಟವರಲ್ಲಿ ಬಹುತೇಕರು ಅಧಿಕಾರಿಗಳೇ ಇದ್ದಾರೆ.ವ್ಯವಸ್ಥಿತ ಜಾಲ ಇದರಲ್ಲಿ ನಿರತವಾ ಗಿದ್ದು, ತಪ್ಪಿತಸ್ಥರಿಗೆ ಜಿಲ್ಲೆಯ ಪ್ರಭಾವಿ ಶಾಸಕರ ಬೆಂಬಲವಿದೆ. ಎಲ್ಲವೂ ಅರಿ ವಿದ್ದರೂ ತಮಗ್ಯಾಕೆ ಇದರ ಉಸಾಬರಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಮೌನಕ್ಕೆ ಶರಣಾಗಿ ದ್ದಾರೆ ಎಂದು ನೊಂದ ಸಂತ್ರಸ್ತರು ‘ಪ್ರಜಾವಾಣಿ’ ಬಳಿ ಅಲವತ್ತುಕೊಂಡರು.

ಮೂರ್ನಾಲ್ಕು ತಿಂಗಳ ಹಿಂದೆ ಗೃಹಮಂಡಳಿಯಲ್ಲಿನ ಅವ್ಯವಹಾರಕ್ಕೆ ಕಡಿವಾಣ ಹಾಕುವ ಜತೆಗೆ, ಇದುವ ರೆಗೂ ನಡೆದಿರುವ ಎಲ್ಲ ಅಕ್ರಮಗಳ ಸೂತ್ರಧಾರರ ವಿರುದ್ಧ ತನಿಖೆಗೆ ಅಗತ್ಯ ವಿರುವ ಸಕಲ ಮಾಹಿತಿ ಸಂಗ್ರಹಿಸಿದ್ದ ಸಚಿವರ ಕಚೇರಿ ಈ ವಿಷಯದಲ್ಲಿ ಮತ್ತೆ ಮೌನಕ್ಕೆ ಶರಣಾಗಿದ್ದು ಹಲವು ಸಂಶಯಗಳನ್ನು ಹುಟ್ಟಿಹಾಕಿದೆ ಎಂದು ಅವರು ಹೇಳಿದರು.

ಗೃಹಮಂಡಳಿಯಲ್ಲಿ ನಡೆದಿರುವ ಅಕ್ರಮದ ವಿರುದ್ಧ ಸಂಘಟನೆಗಳು ಆಗಿಂದಾಗ್ಗೆ ಬೀದಿಗಿಳಿದು ಹೋರಾಟ ನಡೆಸುತ್ತವೆ. ತಾರ್ಕಿಕ ಅಂತ್ಯ ತಲುಪು ವುದರೊಳಗಾಗಿ ಹೋರಾಟವೇ ಇಲ್ಲದಂತಾಗುತ್ತದೆ. ಎಲ್ಲರಿಗೂ ದಾಖಲೆ ನೀಡಿ ಸಾಕಾಗಿದೆ. ಇದರಲ್ಲಿ  ಫಲಾನುಭವ ಪಡೆಯಲು ಮುಂದಾಗುವವರ ಸಂಖ್ಯೆಯೇ ಹೆಚ್ಚುತ್ತಿದೆ ಎಂದು ಗೃಹ ಮಂಡಳಿಯ ಅಕ್ರಮದ ವಿರುದ್ಧ ಹೋರಾಟ ನಡೆಸುತ್ತಿರುವ ಗ್ರಾಹಕ ರೊಬ್ಬರು ‘ಪ್ರಜಾವಾಣಿ’ ಬಳಿ ತೀವ್ರ ಅಸಮಾಧಾನದಿಂದಲೇ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಎಲ್ಲರೂ ತಮಗೆಷ್ಟು ಬೇಕು ಅಷ್ಟನ್ನು ಮಾತ್ರ ನೋಡಿಕೊಳ್ತಾರೆ. ಈ ಅಕ್ರಮ ದಲ್ಲಿ ಕೋಟಿ ಕೋಟಿ ಲೂಟಿಯಾಗಿದೆ. ತಪ್ಪಿತಸ್ಥರಿಗೆ ಶಿಕ್ಷೆಯಾಗುವ ತನಕ ನಾನು ವಿರಮಿಸಲ್ಲ. ಈ ಸಂಬಂಧ  ಈಗಾಗಲೇ ವಸತಿ ಇಲಾಖೆ, ಗೃಹಮಂಡಳಿಯ ಉನ್ನತ ಅಧಿಕಾರಿಗಳ ಬಳಿ ಲಿಖಿತ ಮನವಿ ಮೂಲಕ ಹೋರಾಟ ಆರಂಭಿ ಸಿದ್ದೇನೆ ಎಂದು ಅವರು ತಿಳಿಸಿದರು.

ಅಕ್ರಮದ ಬೃಹತ್ ಜಾಲ: ವಿಜಯಪುರ ಉಪ ವಿಭಾಗದಲ್ಲಿ ಗೃಹಮಂಡಳಿ 16000 ಆಸ್ತಿ ಹೊಂದಿದೆ. ಇವುಗಳಲ್ಲಿ ಅಕ್ರಮ ನಡೆದಿದೆ ಎನ್ನಲಾದ ಆಸ್ತಿಗೆ ಸಂಬಂಧಿಸಿದ ಬಹುತೇಕ ಕಡತಗಳು ಇದೀಗ ಎಲ್ಲೂ ಲಭ್ಯವಿಲ್ಲದಾಗಿವೆ.ವಿಜಯಪುರ, ಇಟ್ಟಂಗಿಹಾಳ, ಜುಮ್ಮಾ ಮಸೀದಿ, ಜಲನಗರ, ಆದರ್ಶ ನಗರ, ಸೊಲ್ಲಾಪುರ ರಸ್ತೆ, ಕಸಬಾ–1, 2, ಮಹಲ ಬಾಗಾಯತ, ಮುದ್ದೇಬಿಹಾಳ, ತಾಳಿಕೋಟೆ, ಸಿಂದಗಿ, ನಿಡಗುಂದಿ, ಇಂಡಿ, ಮನಗೂಳಿ, ನಾಲತವಾಡ ಸೇರಿದಂತೆ ಇನ್ನಿತರೆಡೆ ಗೃಹ  ಮಂಡಳಿಯ ನಿವೇಶನ ಹಂಚುವ ಪ್ರಕ್ರಿಯೆ ನಡೆದಿದ್ದು, 110ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಹಣ ಪಾವತಿಸದೆ ನಿವೇಶನ ನೋಂದಣಿಯಾದ ದಾಖಲೆಗಳಿವೆ.

ಈ ಜಾಲ ಬೃಹತ್‌ ಪ್ರಮಾಣದಲ್ಲಿದೆ. ಮೇಲ್ನೋಟಕ್ಕೆ ಒಂದಿಬ್ಬರು ಆರೋಪಿಗಳಂತೆ ಕಂಡು ಬಂದರೂ  ಈ ಅವ್ಯವಹಾರಗಳ ಹಿಂದೆ ಪ್ರಭಾವಿಗಳ ಕೈವಾಡ, ಶ್ರೀರಕ್ಷೆಯಿದೆ. ಆದ್ದರಿಂದಲೇ ತಪ್ಪಿತಸ್ಥರು ರಾಜಾರೋಷವಾಗಿ ಅಧಿಕಾರಿಗಳ ಮೂಲಕ ತಮ್ಮ ದಂಧೆಯನ್ನು ನಿರಾತಂಕವಾಗಿ ಮುಂದುವರೆಸಿದ್ದಾರೆ ಎಂಬ ಆರೋಪ ಕರವೇ ಜಿಲ್ಲಾ ಘಟಕದ ಗೌರವಾಧ್ಯಕ್ಷ ಸೋಮು ಗಣಾಚಾರಿ ಅವರದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT