ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

Last Updated 20 ಏಪ್ರಿಲ್ 2017, 8:47 IST
ಅಕ್ಷರ ಗಾತ್ರ

ವಿಜಯಪುರ: ಆಲಮಟ್ಟಿಯ ಲಾಲ್‌ ಬಹಾದ್ದೂರ್‌ ಶಾಸ್ತ್ರೀ ಸಾಗರ ಜಲಾಶಯ ದಲ್ಲಿ ನೀರಿನ ಮಟ್ಟವನ್ನು ಕಾಯ್ದು ಕೊಳ್ಳಲು ವಿಫಲರಾದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನೀರು ಬೇಕು ಸಮಿತಿ ಅಧ್ಯಕ್ಷ ವಿಶ್ವನಾಥ ಬಾವಿ ಆಗ್ರಹಿಸಿದರು.ವಿಜಯಪುರ ನಗರವೂ ಸೇರಿದಂತೆ ಅವಳಿ ಜಿಲ್ಲೆಯ ಜನತೆಯ ಕುಡಿಯುವ ನೀರಿಗೆ ಆಗಿರುವ ತೊಂದರೆಗೆ ಅಧಿಕಾರಿ ಗಳನ್ನೇ ಹೊಣೆ ಮಾಡುವ ಜತೆಗೆ, ತುರ್ತು ಪರಿಸ್ಥಿತಿಯಲ್ಲಿ ನೀರಿಗಾಗಿ ತಗ ಲುವ ವೆಚ್ಚವನ್ನು ಅಧಿಕಾರಿಗಳಿಂದಲೇ ವಸೂಲಿ ಮಾಡಬೇಕು ಎಂದು ಬುಧ ವಾರ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಪದಾಧಿಕಾರಿಗಳು ಒತ್ತಾಯಿಸಿದರು.

ವಿಜಯಪುರ ನಗರದ ಕುಡಿಯುವ ನೀರಿನ ಪ್ರಮುಖ ಮೂಲವಾದ ಕೊಲ್ಹಾರ ಬ್ಯಾರೇಜ್‌ನಲ್ಲಿ ನೀರು ಕಡಿಮೆ ಯಾಗಿದೆ. ಬಳೂತಿಯಿಂದ ನೀರು ತರುವ ಪ್ರಯತ್ನ ವಿಫಲವಾಗಿದೆ. ಕುಡಿಯುವ ನೀರಿನ ಅಗತ್ಯತೆಗೆ ಅನುಗುಣವಾಗಿ ಜಲಾಶಯದಲ್ಲಿ ನೀರಿನ ಸಂಗ್ರಹವನ್ನು ಕಾಯ್ದುಕೊಳ್ಳದೆ, ನೀರು ನಿರ್ವಹಣೆ ಯಲ್ಲಿ ವಿಫಲವಾಗಿರುವ ಕೆಬಿಜೆಎನ್ಎಲ್ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು  ಒತ್ತಾಯಿಸ ಲಾಗುವುದು ಎಂದು ಬಾವಿ ಹೇಳಿದರು.

ಕಡು ಬೇಸಿಗೆ ಸಂದರ್ಭದಲ್ಲಿ ವಿಜಯಪುರ ನಗರದ 4 ಲಕ್ಷ ಜನ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಕುಡಿಯುವ ನೀರಿಗಾಗಿ ಭಾರಿ ತೊಂದರೆ ಅನುಭವಿಸುವುದಕ್ಕೆ ಅಧಿಕಾರಿಗಳ ಬೇಜವಾಬ್ದಾರಿತನವೇ ಕಾರಣವಾಗಿದೆ. ಎರಡು ದಶಕದಿಂದ ಉಲ್ಭಣಿಸದ ಸಮಸ್ಯೆ ಈ ವರ್ಷ ಎದುರಾಗಿದೆ. ಬೇಸಿಗೆ ಬೆಳೆಗೆ ನೀರು ಬಿಟ್ಟಿದ್ದು, ಆಂಧ್ರಕ್ಕೆ ಹೆಚ್ಚು ವರಿಯಾಗಿ ನೀರು ಹರಿದು ಹೋಗು ವಂತೆ ಮಾಡಿದ್ದು, ನೀರಾವರಿ ಸಲಹಾ ಸಮಿತಿ ಸದಸ್ಯರ ದಾರಿ ತಪ್ಪಿಸಿದ್ದು ಅಧಿ ಕಾರಿಗಳೇ ಎಂದು ಬಾವಿ ಆರೋಪಿಸಿದರು.

ಸಮರ್ಪಕವಾಗಿ ನೀರು ನಿರ್ವಹ ಣೆಯ ಜವಾಬ್ದಾರಿಯನ್ನು ನಿರ್ವಹಿಸದ ನೀರಾವರಿ ಸಲಹಾ ಸಮಿತಿ ಸದಸ್ಯರ ವಿರುದ್ಧವೂ ಸರ್ಕಾರ ಕ್ರಮ ಕೈಗೊಳ್ಳ ಬೇಕು. ತಕ್ಷಣಕ್ಕೆ ಬಳೂತಿ ಬ್ಯಾರೇಜ್ ಬಳಿ 4ರಿಂದ 5 ಮೀಟರ್‌ ಎತ್ತರದ ಒಡ್ಡು ನಿರ್ಮಿಸಿ, ನೀರು ಸಂಗ್ರಹಿಸಿ ಕೊಲ್ಹಾರ ಬಳಿಯ ಜಾಕ್‌ವೆಲ್‌ ಇಂಟೇಕ್ ಕಾಲುವೆಗೆ ನೀರು ಹರಿದು ಬರುವಂತೆ ಮಾಡಬೇಕು.

ಹಣಮಾಪುರ ಜಾಕ್‌ವೆಲ್‌ನಿಂದ ಹಳ್ಳಕ್ಕೆ ನೀರು ಬಿಟ್ಟು, ಬಳೂತಿ ಮೂಲಕ ಕೊಲ್ಹಾರ ಬ್ಯಾರೇಜ್‌ಗೆ 25 ಕಿ.ಮೀ.ವರೆಗೆ ಸುತ್ತು ಬಳಸಿ ನೀರು ತರುವ ಹುಚ್ಚು ಸಾಹಸ ಕೈಗೂಡಲಾರದು. ಸರ್ಕಾರ ಈ ನಿಟ್ಟಿನಲ್ಲಿ ವ್ಯರ್ಥ ಪ್ರಯತ್ನ ಮಾಡದೆ ವೈಜ್ಞಾನಿಕ ವಿಧಾನದಲ್ಲಿ ನೀರು ತರುವ ಕೆಲಸ ಮಾಡಬೇಕು ಎಂದರು.ಬಳೂತಿ ಕ್ಷೇತ್ರದಲ್ಲಿ ಹೆಚ್ಚಿನ ನೀರು ಲಭ್ಯವಿರುವ ಸ್ಥಾನದಿಂದ ನೀರನ್ನು ಪಡೆಯಬೇಕು. ಇದಕ್ಕಾಗಿ ಮುಳವಾಡ ಏತ ನೀರಾವರಿಯಿಂದ ನೀರೆತ್ತಿ 6 ಕಿ.ಮೀ. ದೂರದಲ್ಲಿರುವ ಹಣಮಾಪುರ ಜಾಕ್‌ವೆಲ್‌ಗೆ ಕಾಲುವೆ ಮೂಲಕ ನೀರು ಬಿಟ್ಟು ಅಲ್ಲಿಂದ ಮತ್ತೆ ನೀರನ್ನು ಲಿಫ್ಟ್‌ ಮಾಡಿ 19 ಕಿ.ಮೀ. ಅಂತರದಲ್ಲಿರುವ ಕೊಲ್ಹಾರ ಬ್ಯಾರೇಜ್‌ಗೆ ನೀರನ್ನು ತುಂಬುವುದು ಎಷ್ಟೊಂದು ಸಮಂಜಸ ಎಂದು ಬಾವಿ ಪ್ರಶ್ನಿಸಿದರು.

ಗಲಗಲಿ ಹೊಸ ಬ್ಯಾರೇಜ್ ಸಮಸ್ಯೆಗೆ ಪರಿಹಾರವಲ್ಲ:  ಗಲಗಲಿ ಬಳಿ ನೂತನ ಬ್ಯಾರೇಜ್‌ ನಿರ್ಮಿಸಿ ಜಲಾಶಯದ ಒಂದು ಟಿಎಂಸಿ ಅಡಿ ನೀರನ್ನು ಶೇಖರಿಸಿ ಕೊಳ್ಳುವುದು ನಗರದ ನೀರಿನ ಸಮಸ್ಯೆಗೆ ಪರಿಹಾರವಾಗುವುದಿಲ್ಲ ಎಂದು ವಿಶ್ವನಾಥ ಬಾವಿ ಅಭಿಪ್ರಾಯಪಟ್ಟರು.

ತುಂಬಿ ಹೋಗಿದ್ದ ಕೊಲ್ಹಾರ ಬ್ಯಾರೇಜ್ 10–-12 ದಿನದಲ್ಲಿ ಬರಿದಾಗಿ ನೆಲ ಕಚ್ಚಿತ್ತು. ಈ ಉದಾಹರಣೆ ಕಣ್ಮುಂದೆಯೇ ಇದೆ. ಇದಕ್ಕೆ ವಾಡಿಕೆ ಯಂತೆ ನೀರನ್ನು ನೀರಾವರಿಗೆ ಬಳಸಿದ್ದು. ಈ ನೀರೆತ್ತುವುದು ಗಲಗಲಿಯಲ್ಲಿಯೂ ಮತ್ತು ಬಳೂತಿಯಿಂದ ಯಾವುದೇ ಕಾಲುವೆ ಮೂಲಕ ಕೊಲ್ಹಾರ ಬ್ಯಾರೇಜ್‌ ವರೆಗೆ ನೀರು ಹರಿಸಿದರೂ ಮಾರ್ಗ ಮಧ್ಯದಲ್ಲಿನ ನೀರನ್ನು ಉಪಯೋಗಿಸ ಲಾಗುತ್ತದೆ ಎಂದರು.ಡಾ.ಗೋಕುಲ ಮಹೀಂದ್ರಕರ, ಹಳ್ಳೂರ, ರವೀಂದ್ರ ಬಿಜ್ಜರಗಿ, ಅಶೋಕ ಗಂಜ್ಯಾಳ, ಉದಯ ಕುಲಕರ್ಣಿ  ಇತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT