ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಗವ ಬೆಳಗಿದ ಅಣ್ಣ ಕತ್ತಲೆಯಲ್ಲಿ!

Last Updated 20 ಏಪ್ರಿಲ್ 2017, 8:57 IST
ಅಕ್ಷರ ಗಾತ್ರ

ಮುದ್ದೇಬಿಹಾಳ: ಜಗತ್ತಿಗೇ ತನ್ನ ವಚನ ಗಳ ಮೂಲಕ ಕ್ರಾಂತಿ ಮಾಡಿ ಬೆಳಕು ತೋರಿದ ಬಸವಣ್ಣನನ್ನು ಎಲ್ಲರೂ ಜಗದ ಜ್ಯೋತಿ ಬಸವಣ್ಣ ಎಂದು ಕರೆಯುತ್ತಾರೆ. ಆದರೆ ಪಟ್ಟಣದಲ್ಲಿ ಮಾತ್ರ ಬಸವಣ್ಣ ನನ್ನು ಕಂಡರೆ ಪುರಸಭೆಯವರಿಗೆ ಅನಾದರ. ಯಾಕೆಂದರೆ ಬಸವಣ್ಣನಿಗೆ ಏನು ಮಾಡಿದರೂ ನಡೆಯುತ್ತದೆ ಎಂಬ ನಿರ್ಲಕ್ಷ್ಯ ಎಂದು ಬಸವಾಭಿಮಾನಿ ಉಮೇಶ ಜತ್ತಿ ಆಕ್ರೋಶ ವ್ಯಕ್ತಪಡಿಸಿದರು.

ಪುರಸಭೆಯವರಿಗೆ ಸತತ ಹೇಳುತ್ತಲೇ ಬಂದರೂ ಅವರು ಕ್ಯಾರೇ ಎನ್ನದ ಕಾರಣ  ಬಸವಣ್ಣನ ಕುದುರೆಗೆ ಕಂದೀಲು ಕಟ್ಟಿ ವಿಶಿಷ್ಟ ರೀತಿಯ ಪ್ರತಿಭಟನೆ ಮಾಡಲಾಗಿದೆ ಎಂದು ಅವರು ವಿವರಿಸಿದರು.ಪಟ್ಟಣದ ಹೃದಯ ಭಾಗದಲ್ಲಿರುವ ಹಾಗೂ ನಾಲ್ಕು ಪ್ರಮುಖ ರಸ್ತೆಗಳು ಕೂಡುವ ಸ್ಥಳದಲ್ಲಿ ಕರ್ನಾಟಕದಲ್ಲಿಯೇ ಎರಡನೆಯ ಅತೀ ಎತ್ತರದ ಬಸವಣ್ಣನ ಮೂರ್ತಿಯನ್ನು ಈಗ್ಗೆ ಐದು ವರ್ಷಗಳ ಹಿಂದೆ ಪ್ರತಿಷ್ಠಾಪಿಸಲಾಗಿದೆ. ಇದಕ್ಕೆ ಬೆಳಕು ಚೆಲ್ಲಲಿ ಎಂದೇ ಹೈಮಾಸ್ಟ್‌ ದೀಪ ಸಹ ಅಳವಡಿಸಲಾಗಿದೆ, ಆದರೆ ಕಳೆದ ಒಂದು ತಿಂಗಳಿಂದ ಈ ವೃತ್ತಕ್ಕೆ ಬೆಳಕು ಇಲ್ಲದೇ ಬಸವಣ್ಣ ಸಂಪೂರ್ಣ ಕತ್ತಲೆ ಯಲ್ಲಿ ಉಳಿದಿದ್ದಾನೆ. ಬಸವಣ್ಣನ ಮೇಲೆ ಇರುವ ದೀಪಗಳನ್ನು ಬೆಳಗಿಸುವಂತೆ ಆಗ್ರಹಿಸಿದರು.

ಪುರಸಭೆ ಅವ್ಯವಸ್ಥೆ ಬಗ್ಗೆ ಪುರಸಭೆ ಯಲ್ಲಿ ಬೀದಿ ದೀಪಗಳ ಉಸ್ತುವಾರಿ ವ್ಯವಸ್ಥಾಪಕ ರಮೇಶ ಮಾಡಬಾಳ ಅವ ರನ್ನು ಮಾತನಾಡಿಸಿದಾಗ, ಬಸವೇಶ್ವರ ವೃತ್ತದ ವಿದ್ಯುತ್ ಸರಬರಾಜು ಮಾಡುವ ಟಿ.ಸಿ.ಸುಟ್ಟಿದೆ, ಅದನ್ನು ಹಾಕಿ ಕೊಡಿ ಎಂದು ಕೆಇಬಿ ಸೆಕ್ಶನ್ ಆಫೀಸ್‌ರಿಗೆ ಹೇಳಿ, ಹೇಳಿ ಸಾಕಾಗಿ ಹೋಗಿದೆ, ಅವರ ಬಳಿ ಟಿ.ಸಿ.ಸ್ಟಾಕ್ ಇಲ್ಲವಂತೆ, ಏನೇ ಮಾಡಿಯಾದರೂ ನಾಳೆ ಖಂಡಿತ ಹೈ ಮಾಸ್ಟ್‌ ದೀಪ ಬೆಳಗುವಂತೆ ಮಾಡುವು ದಾಗಿ ಅವರು ಹೇಳಿದರು.ಬಸವ ಜಯಂತಿ (ಏ.29) ಹತ್ತಿರ ದಲ್ಲಿಯೇ ಇದೆ, ಬಸವಣ್ಣನ ಮೂರ್ತಿಯ ಮೇಲೆ ಸತತ ಬೆಳಕು ಚೆಲ್ಲುವಂತೆ ವ್ಯವಸ್ಥೆ ಮಾಡಬೇಕು. ಇಲ್ಲವಾದರೆ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಬಸವೇಶ್ವರ ಮೂರ್ತಿ ಪ್ರತಿಷ್ಠಾ ಪನಾ ಸಮಿತಿ ಅಧ್ಯಕ್ಷ ಅಡಿವೆಪ್ಪ ಕಡಿ, ರಾಜು ದಡ್ಡಿ, ರಾಜು ಜೋಳದ, ಮಲ್ಲಣ್ಣ ಬಿರಾದಾರ ಮತ್ತಿತರರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT