ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಮಾರೇಶ್ವರ ಸ್ವಾಮೀಜಿ 150ನೇ ಜಯಂತ್ಯುತ್ಸವ

Last Updated 20 ಏಪ್ರಿಲ್ 2017, 9:03 IST
ಅಕ್ಷರ ಗಾತ್ರ

ಅಣ್ಣಿಗೇರಿ:  ಪಟ್ಟಣದಲ್ಲಿ ಇತ್ತೀಚೆಗೆ ಹಾನಗಲ್ಲ ಕುಮಾರೇಶ್ವರ ಸ್ವಾಮೀಜಿ ಅವರ 150ನೇ ಜಯಂತ್ಯುತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದ ಸಮಾರೋಪ ನಡೆಯಿತು.ಹುಬ್ಬಳ್ಳಿಯ ಮೂರುಸಾವಿರ ಮಠಾಧೀಶ ಗುರುಸಿದ್ಧ ರಾಜ ಯೋಗೀಂದ್ರ ಸ್ವಾಮೀಜಿ ಮಾತನಾಡಿ, ‘ಶಿವಯೋಗ ಮಂದಿರ ಸ್ಥಾಪಿಸುವ ಮೂಲಕ ಕುಮಾರೇಶ್ವರ ಸ್ವಾಮೀಜಿ ಸಮಾಜಕ್ಕೆ ಮಹೋನ್ನತ ಕೊಡುಗೆ ನೀಡಿದ್ದಾರೆ’ ಎಂದರು.

ನೀಲಗುಂದದ ಪ್ರಭುಲಿಂಗ ಸ್ವಾಮೀಜಿ, ಹೊಸಳ್ಳಿಯ ಅಭಿನವ ಬೂದೀಶ್ವರ ಸ್ವಾಮೀಜಿ ಸಹ ಮಾತನಾಡಿದರು. ದಾಸೋಹ ಮಠದ ಶಿವಕುಮಾರ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಶಾಸಕ ಎನ್ .ಎಚ್ .ಕೋನರಡ್ಡಿ, ಮಾಜಿ ಶಾಸಕ ಶಂಕರಪಾಟೀಲ ಮುನೇನಕೊಪ್ಪ ಸಹ ಮಾತನಾಡಿ ಕುಮಾರೇಶ್ವರ ಸ್ವಾಮೀಜಿ ಅವರ ಸಾಧನೆಯನ್ನು ಬಣ್ಣಿಸಿದರು.

ಇದಕ್ಕೂ ಮೊದಲು ಸ್ಥಳೀಯ ಯಳಂದೂರು ಬಸವಲಿಂಗ ಶಿವಯೋಗಿಗಳ ಕರ್ತೃ ಗದ್ದುಗೆಯಿಂದ ಆರಂಭಗೊಂಡ ಕುಮಾರೇಶ್ವರ ಸ್ವಾಮೀಜಿ ಅವರ ಭಾವಚಿತ್ರದ ಮೆರವಣಿಗೆಗೆ ಗದುಗಿನ ತೋಂಟದ ಸಿದ್ಧಲಿಂಗ ಸ್ವಾಮೀಜಿ ಚಾಲನೆ ನೀಡಿದರು. ಅಧ್ಯಕ್ಷತೆಯನ್ನು ಧಾರವಾಡ ಮುರಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ವಹಿಸಿದ್ದರು. ಹುಬ್ಬಳ್ಳಿ ರುದ್ರಾಕ್ಷಿಮಠದ ಬಸವಲಿಂಗ ಸ್ವಾಮೀಜಿ, ಮಂಟೂರ ವಿರಕ್ತಮಠದ ಶಿವಲಿಂಗ ಸ್ವಾಮೀಜಿ, ಘಟಪ್ರಭಾದ ಮಲ್ಲಿಕಾರ್ಜುನ ಸ್ವಾಮೀಜಿ, ನವಲಗುಂದ ಪಂಚಗೃಹ ಹಿರೇಮಠದ ಸಿದ್ದೇಶ್ವರ ಸ್ವಾಮೀಜಿ, ಮರುಳಸಿದ್ಧ ಶಿವಾಚಾರ್ಯ, ಗವಿಮಠದ ಬಸವಲಿಂಗ ಸ್ವಾಮೀಜಿ, ರಾಯನಾಳದ ಮಹಾಂತ ಸ್ವಾಮೀಜಿ, ಕುಂದಗೋಳದ ಬಸವಣ್ಣಜ್ಜ, ಸೊರಟೂರ ಫಕ್ಕಿರೇಶ್ವರ ಸ್ವಾಮೀಜಿ, ನರಗುಂದ ಪತ್ರಿವನಮಠದ ಸಿದ್ದವೀರ ಶಿವಯೋಗಿ ಶಿವಾಚಾರ್ಯ ಇದ್ದರು.

ಪುರಸಭೆ ಅಧ್ಯಕ್ಷ ಮುತ್ತು ದ್ಯಾವನೂರ, ಸಮಾಜ ಸೇವಕ ಬಿ.ಕೆ ಮಹೇಶ, ಬಿ.ಬಿ.ಗಂಗಾಧರಮಠ, ಎಪಿಎಂಸಿ ಮಾಜಿ ಅಧ್ಯಕ್ಷ ಪ್ರಕಾಶ ಅಂಗಡಿ, ಸದಸ್ಯ ಯಲ್ಲಪ್ಪ ಅಕ್ಕಿ, ಡಿ.ಬಿ.ಶಿರೂರ, ಮಂಜುನಾಥ ಅಕ್ಕಿ, ಈಶ್ವರಪ್ಪ ಉಳ್ಳಾಗಡ್ಡಿ ಮೊದಲಾದವರು ಉಪಸ್ಥಿತರಿದ್ದರು.ದಾಸೋಹ ಮಠದ ಸೇವಾ ಟ್ರಸ್ಟ್‌ನ ಪದಾಧಿಕಾರಿಗಳಾದ ಷಣ್ಮುಖ ಗುರಿಕಾರ ಹಾಗೂ ಮಹೇಶಗೌಡ್ರ ದೇಸಾಯಿ  ಕಾರ್ಯಕ್ರಮ ನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT