ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಲಿನ ಪುಡಿ ಮಾರುಕಟ್ಟೆಯಲ್ಲಿ?

Last Updated 20 ಏಪ್ರಿಲ್ 2017, 10:17 IST
ಅಕ್ಷರ ಗಾತ್ರ

ಕುಮಟಾ: ಶಾಲೆಯ ಮಕ್ಕಳಿಗೆ ಹಾಲು ತಯಾರಿಸಿ ಕೊಡಲು ಬಳಸಲಾಗುತ್ತಿದೆ ಎನ್ನಲಾದ ಸುಮಾರು 15 ಕೆ.ಜಿ. ಹಾಲಿನ ಪುಡಿ ಪಟ್ಟಣದ ಕಿರಾಣಿ ಅಂಗಡಿಯೊಂದರ ಕಟ್ಟೆಯ ಮೇಲೆ ದೊರೆತಿದ್ದು, ಆಹಾರ ಹಾಗೂ ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಅದನ್ನು ವಶಕ್ಕೆ ಪಡೆದು ಪಂಚನಾಮೆ ನಡೆಸಿದ್ದಾರೆ.

ಸಾರ್ವಜನಿಕರ ಮೌಖಿಕ ದೂರಿನ ಹಿನ್ನೆಲೆಯಲ್ಲಿ ಆಹಾರ ಹಾಗೂ ನಾಗರಿಕ ಸರಬರಾಜು ಇಲಾಖೆ ಶಿರಸ್ತೇದಾರ ಆರ್.ಡಿ. ನಾಯ್ಕ ಅವರು ಸ್ಥಳಕ್ಕೆ ತೆರಳಿ ಹಾಲಿನ ಪುಡಿಯನ್ನು ವಶಕ್ಕೆ  ತೆಗೆದುಕೊಂಡಿದ್ದು ತನಿಖೆಗಾಗಿ ಪೊಲೀಸರಿಗೆ ದೂರು ನೀಡಿದ್ದಾರೆ.

‘ಅಂಗಡಿ ಮೆಟ್ಟಿಲ ಮೇಲೆ ಸಿಕ್ಕ ಹಾಲಿನ ಪುಡಿ ಶಾಲೆ ಮಕ್ಕಳಿಗೆ ಹಾಲು ತಯಾರಿ ಕೊಡಲು ಬಳಸುವಂಥದ್ದಾಗಿದ್ದು, ಅದನ್ನು ಅಕ್ರಮವಾಗಿ ವ್ಯಾಪಾರ ಮಾಡಲು ತಂದಿಡುವಾಗ ಗಮನಕ್ಕೆ ಬಂದಿದೆ ಎಂದು  ತಾಲ್ಲೂಕಿನ  ಕೋನಳ್ಳಿಯ ರಾಮ ಶಂಭು ನಾಯ್ಕ ಸೇರಿದಂತೆ ಸಾರ್ವಜನಿಕರು ದೂರಿದ್ದಾರೆ. ಹಾಲಿನ ಪುಡಿ ಪರಿಶೀಲಿಸುವಂತೆ ಶಿಶು ಅಭಿವೃದ್ಧಿ ಅಧಿಕಾರಿಗಳಿಗೂ ಪತ್ರ ಬರೆಯಲಾಗಿದೆ’ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿ ಶಾಂತೇಶ ನಾಯಕ ಅವರನ್ನು ಪ್ರಶ್ನಿಸಿದಾಗ, ‘ಶಾಲೆಯ ಮಕ್ಕಳಿಗೆ ಪೂರೈಕೆ ಮಾಡುವ ಹಾಲಿನ ಪೌಡರ್ ಕೆಎಂಎಫ್ ಪ್ಯಾಕೇಟ್ ನಲ್ಲಿರುತ್ತದೆ. ಆದರೆ ಮಾರುಕಟ್ಟೆಯಲ್ಲಿ  ಸಿಕ್ಕಿರುವುದು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿಟ್ಟುರುವ ಹಾಲಿನ ಪುಡಿ. ಪ್ಯಾಕೇಟ್ ತೆರೆದು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿರುವ ಸಾಧ್ಯತೆಯೂ ಇದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT