ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು, ಮೇವು ಬ್ಯಾಂಕ್‌ ತೆರೆಯಲು ಸೂಚನೆ

Last Updated 20 ಏಪ್ರಿಲ್ 2017, 10:21 IST
ಅಕ್ಷರ ಗಾತ್ರ

ಮುಧೋಳ: ನಗರದ ರನ್ನ ಶಾಲೆಯಲ್ಲಿ ನಡೆಯುತ್ತಿರುವ ಆದರ್ಶ ವಿದ್ಯಾಲಯವು ಲಕ್ಷಾನಟ್ಟಿ ಗ್ರಾಮದಲ್ಲಿರುವ ಸುಸಜ್ಜಿತ ನೂತನ ಕಟ್ಟಡಕ್ಕೆ ಸ್ಥಳಾಂತರ ಕುರಿತು ನಡೆದ ಸುದೀರ್ಘ ಚರ್ಚೆಯಲ್ಲಿ ಯಾವುದೇ ನಿರ್ಧಾಕ್ಕೆ ಬರಲಾಗದೆ  ಚರ್ಚೆ ಮುಂದೂಡಿದ ಘಟನೆ ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ನಡೆಯಿತು.

ಕಳೆದ ಐದಾರು ತಿಂಗಳುಗಳಿಂದ ಬೈ-ಪಾಸ್ ರಸ್ತೆಗಾಗಿ ಭೂ ಸ್ವಾಧೀನ ಕಾರ್ಯ ನಡೆದಿದೆ ಎಂಬ ಸದಾ ಒಂದೇ ಉತ್ತರ ನೀಡುತ್ತಿದ್ದೀರಿ ಎಂದು ಸದಸ್ಯರು ಕೇಳಿದಾಗ, ಒನ್‌ಟೈಮ್‌ ಸೆಟ್ಲಮೆಂಟ್‌ ಮೂಲಕ ಜಮೀನು ಖರಿದಿಸಿ ಶೀಘ್ರ ಕಾರ್ಯ ಆರಂಭಿಸುವ ಪ್ರಯತ್ನ ನಡೆದಿದೆ ಎಂದು ಪಿಡಬ್ಲೂಡಿ ಎಇಇ ಬಿ.ಎಚ್.ಪಾಟೀಲ ವಿವರಿಸಿದರು. ಸಂಕೇಶ್ವರ- ಸಂಗಮ ರಸ್ತೆ ಕಾಮಗಾರಿ ಕಳೆದ ಐದಾರು ತಿಂಗಳುಗಳಿಂದ ಮಂದಗತಿಯಲ್ಲಿ ನಡೆದಿದೆ. ಇದರಿಂದ ಅಪಘಾತ ಹೆಚ್ಚುತ್ತಿವೆ. ಸದಸ್ಯ ಭೈರಕದಾರ ಅಧಿಕಾರಿಗಳ ಗಮನಕ್ಕೆ ತಂದರು.

ನೂರಾರು ಅಂಗನವಾಡಿ ಕೇಂದ್ರಗಳಿಗೆ ಪೀಠೋಪಕರಣ ಖರೀದಿ, ಗ್ಯಾಸ್ ಅಳವಡಿಕೆ, ಗರ್ಭಿಣಿ, ಬಾಣಂತಿಯರಿಗೆ ಅಡುಗೆ  ತಯಾರಿಸಿ ಕೊಡುವ ಹೊಸ ಯೋಜನೆ ಜೂನ್ ತಿಂಗಳಲ್ಲಿ ಆರಂಭಿಸಲು ಸಿಡಿಪಿಒ ಬನ್ನಿದಿನ್ನಿ ಅನುಮೋದನೆ ಪಡೆದರು.ಭೀಕರ ಬರಗಾಲ, ಬಿಸಿಲಿನ ಪ್ರಖರತೆಯಿಂದ ತತ್ತರಿಸುತ್ತಿರುವ ಜಾನುವಾರುಗಳಗಾಗಿ ಲೋಕಾಪುರದಲ್ಲಿ ನೀರು-ಮೇವು ಬ್ಯಾಂಕ್ ತೆರೆಯಲು ಸಿದ್ದತೆ ಮಾಡಿಕೊಳ್ಳಿ ಎಂದು ಕೃಷಿ ಅಧಿಕಾರಿಗಳಿಗೆ ಅಧ್ಯಕ್ಷ ತಿಮ್ಮಣ್ಣ ಬಟಕುರ್ಕಿ ಸೂಚಿಸಿದರು. 

ಲೋಕಾಪುರ ಪದವಿ ಕಾಲೇಜು ಕಟ್ಟಡ ಕಾಮಗಾರಿ ಬಹಳ ವಿಳಂಬ ಆಗುತ್ತಿದೆ. ಹಾಗೂ ಸಮುದಾಯ ಭವನ ಕಾಮಗಾರಿ ಏಕೆ ಆರಂಭಿಸಿಲ್ಲ ಈ ಕೂಡಲೇ ಆರಂಭಿಸಬೇಕು ಎಂದು ಭೂ ಸೇನಾ ನಿಗಮದ ಅಧಿಕಾರಿ ಹಿರೇಮಠರಿಗೆ ಇಒ ಬಿ.ವಿ. ಅಡವಿಮಠ ಸೂಚನೆ ನೀಡಿದರು.ಕುಡಿಯುವ ನೀರು ಪೂರೈಕೆಗಾಗಿ ಸರ್ವೆ ಮಾಡಿ, ತುರ್ತು ಕುಡಿಯುವ ನೀರಿಗೆ ಆದ್ಯತೆ ನೀಡಲಾಗುತ್ತಿದೆ. ಎಂದು ಗ್ರಾಮೀಣ ಕುಡಿಯುವ ನೀರು ಹಾಗು ನೈರ್ಮಲ್ಯ ಇಲಾಖಾಧಿಕಾರಿ ಎಚ್.ಎನ್. ಕಕರಡ್ಡಿ ವಿವರಿಸಿದರು. ಬಿಸಿಎಂ. ಇಲಾಖೆಯಿಂದ 106 ಕೋಟಿ ಶಿಷ್ಯವೇತನ ವಿದ್ಯಾರ್ಥಿಗಳ ಖಾತೆಗೆ ಜಮೆ ಮಾಡಲಾಗಿದೆ. ಅಡುಗೆದಾರರ, ಹಾಗು ಸಹಾಯಕರನ್ನು ಗುತ್ತಿಗೆ ಆಧಾರ ಮೇಲೆ ನೇಮಕ ಮಾಡಿಕೊಳ್ಳಲಾಗಿದೆ. ಎಂದು ಮುರನಾಳ ತಿಳಿಸಿದರು.

ಕೃಷಿ ಹೊಂಡದ ಬಿಲ್ ಮಾಡುವಲ್ಲಿ ಪಾರದರ್ಶಕತೆ ಇರಲಿ, ಗ್ರಾಮೀಣ ಭಾಗದ ಅರಣ್ಯ ಇಲಾಖೆಯ ಕೊಡಲ್ಪಡುವ ಸಾಮಗ್ರಿಗಳನ್ನು ಪಂಚಾಯತಿಯ ಸದಸ್ಯರನ್ನು ಗಮನಕ್ಕೆ ತಂದು ಅರ್ಹ ಫಲಾನುಭವಿಗಳಿಗೆ ದೊರಕಿಸಿ ಕೊಡಿ, ಮಂಗಗಳ ಹಾವಳಿಗೆ ಕಡಿವಾಣ ಹಾಕಿ ಎಂದು ಅರಣ್ಯಾಧಿಕಾರಿ ಶ್ರೀನಿವಾಸರಿಗೆ ಅಧ್ಯಕ್ಷರು ಸೂಚಿಸಿದರು. ತಾಪಂ. ಅಧ್ಯಕ್ಷ ಟಿ.ಆರ್ ಬಟಕುರ್ಕಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ವೀಣಾ ದೇಸಾಯಿ, ರುಕ್ಮವ್ವಾ ಬಿ. ಪಾಟೀಲ, ಸದಸ್ಯ ಸಂಗಪ್ಪ ಇಮ್ಮನ್ನವರ, ರಫೀಕ್ ಬೈರಕದಾರ, ಇಒ ಬಿ.ವಿ. ಅಡವಿಮಠ, ಎಚ್.ಎಂ. ಪಾಟೀಲ, ಶ್ರೀನಿವಾಸ ನಾಯಕ, ಎಸ್.ಎಸ್. ಕನದಾಳೆ, ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT