ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಲವು ವಿಶೇಷಗಳ ಅದ್ದೂರಿ ಚಿತ್ರ

Last Updated 20 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಖ್ಯಾತ ನಿರ್ದೇಶಕ ಶಂಕರ್ ನಿರ್ದೇಶನದಲ್ಲಿ ಮೂಡಿಬಂದ ‘ರೋಬೊ’ ಭಾರತೀಯ ಚಲನಚಿತ್ರ ಇತಿಹಾಸದಲ್ಲಿ ಒಂದು ಮೈಲಿಗಲ್ಲು, ದಾಖಲೆಗಳ ಮಳೆ ಸುರಿಸಿದ ಈ ಚಿತ್ರದ ಮತ್ತೊಂದು ಭಾಗವೂ ಬರಲಿದೆ ಎಂದಾಗ ಚಿತ್ರದ ಕುರಿತು ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಚಿತ್ರಕ್ಕೆ ‘2.0’ ಎಂದು ಹೆಸರಿಟ್ಟ ನಂತರ ನಿರೀಕ್ಷೆ ಮತ್ತಷ್ಟು ಹೆಚ್ಚಾಯಿತು.

ಅಂದಾಜು ₹350 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಚಲನಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಚಿತ್ರದಲ್ಲಿ ಅಕ್ಷಯ್‌ಕುಮಾರ್ ಖಳನಾಯಕನ ಪಾತ್ರಕ್ಕೆ ಆಯ್ಕೆಯಾಗಿರುವುದು ಮತ್ತೊಂದು ಹೈಲೈಟ್‌. ಈ ದೀಪಾವಳಿಗೆ ತೆರೆಕಾಣಲಿರುವ ಈ ಚಿತ್ರದ ಕೆಲವು ವಿಶೇಷತೆಗಳು...

* ‘ಮೇಕ್‌ ಇನ್‌ ಇಂಡಿಯಾ’ ಪ್ರೇರಣೆಯೊಂದಿಗೆ ಸಂಪೂರ್ಣ ಚಿತ್ರವನ್ನು ಭಾರತದಲ್ಲೇ ಚಿತ್ರೀಕರಿಸಲಾಗಿದೆ.

* ಚಿತ್ರದ ಪ್ರಮುಖ ಫೈಟಿಂಗ್‌ ಸನ್ನಿವೇಶಗಳನ್ನು ದೆಹಲಿಯ ಜವಾಹರ್‌ ಲಾಲ್ ನೆಹರೂ ಕ್ರೀಡಾಂಗಣದಲ್ಲಿ ಮತ್ತು ಉಳಿದ ಭಾಗಗಳನ್ನು ಚೆನ್ನೈನ ಇವಿಪಿ ಫಿಲ್ಮ್ ಸಿಟಿಯಲ್ಲಿ ಚಿತ್ರೀಕರಿಸಲಾಗಿದೆ.

* ಚಿತ್ರಕ್ಕೆ ಕೆಲಸ ಮಾಡಿರುವ ವಿಷುವಲ್ ಎಫೆಕ್ಟ್ಸ್‌ ತಂಡದ ತಂತ್ರಜ್ಞರೆಲ್ಲರೂ ಭಾರತೀಯರೇ. ಬಾಹುಬಲಿ ಚಿತ್ರಕ್ಕೆ ವಿಷುವಲ್ ಎಫೆಕ್ಟ್ಸ್ ನೀಡಿರುವ  ಶ್ರೀನಿವಾಸ ಮೋಹನ್  ಈ ಚಿತ್ರದಲ್ಲೂ ತಮ್ಮ ಕೈಚಳಕ ತೋರಿಸಿದ್ದಾರೆ.

* ಚಿತ್ರವನ್ನು 2ಡಿ, 3ಡಿಯಷ್ಟೇ ಅಲ್ಲದೆ, ಐಮ್ಯಾಕ್ಸ್ 3ಡಿ, ಐಮ್ಯಾಕ್ಸ್  ರಿಯಲ್ 3ಡಿ ತಂತ್ರಜ್ಞಾನದಲ್ಲಿ ನಿರ್ಮಿಸಲಾಗಿದೆ. ಇದಕ್ಕಾಗಿ ಚೆನ್ನೈ ಸೇರಿದಂತೆ ಭಾರತದ ಕೆಲವು ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನಕ್ಕಾಗಿ ಐಮ್ಯಾಕ್ಸ್, ರಿಯಲ್ ಮ್ಯಾಕ್ಸ್ 3ಡಿ ತಂತ್ರಜ್ಞಾನವನ್ನು ಅಳವಡಿಸಲಾಗುತ್ತಿದೆ.

* ಆಸ್ಕರ್ ಪ್ರಶಸ್ತಿ ವಿಜೇತ ರಸೆಲ್‌  ಪೂಕುಟ್ಟಿ ಈ ಚಿತ್ರಕ್ಕೆ ಸೌಂಡ್ ಎಂಜಿನಿಯರ್ ಆಗಿ ಕೆಲಸ ಮಾಡಿದ್ದಾರೆ. ಶಬ್ದ ಗುಣಮಟ್ಟಕ್ಕಾಗಿ ವಿಶೇಷ ತಂತ್ರಜ್ಞಾನವನ್ನು  ಚಿತ್ರಕ್ಕಾಗಿ ಬಳಸಿಕೊಳ್ಳ ಲಾಗಿದೆ. ಶಬ್ದದ ಗುಣಮಟ್ಟವೂ ಉತ್ತಮವಾಗಿರಬೇಕೆಂದು ಶಂಕರ್ ಹೊಸ ಪ್ರಯೋಗಗಳನ್ನು ಮಾಡಿದ್ದಾರೆ.

* ‘2.0’ಗಾಗಿ ಆ್ಯನಿಮಾಟ್ರಿಕ್ ತಂತ್ರಜ್ಞಾನದ ಜೊತೆ ಗಾಳಿಯಲ್ಲಿ ಹಾರಾಡುತ್ತಾ ದೃಶ್ಯಗಳನ್ನು ಚಿತ್ರೀಕರಿಸುವ ‘ಹೆಲಿಕ್ಯಾಮ್‌’ಗಳನ್ನು ಬಳಸಲಾಗಿದೆ. ರಜನಿಕಾಂತ್ ಮತ್ತು ಅಕ್ಷಯ್‌ಕುಮಾರ್ ನಡುವಿನ ಹೋರಾಟ ಸನ್ನಿವೇಶಗಳ ಚಿತ್ರೀಕರಣಕ್ಕಾಗಿ ಈ ತಂತ್ರಜ್ಞಾನವನ್ನು ಬಳಸಲಾಗಿದ್ದು, ಇದರಿಂದ ದೃಶ್ಯದ ಗುಣಮಟ್ಟ ಉತ್ತಮವಾಗಿ ಮೂಡಿಬಂದಿದೆ ಎಂದು ಚಿತ್ರತಂಡ ತಿಳಿಸಿದೆ.

* ಆಸ್ಕರ್‌ ಮತ್ತು ಗ್ರ್ಯಾಮಿ ಪ್ರಶಸ್ತಿ ವಿಜೇತ ಎ.ಆರ್ ರೆಹಮಾನ್ ಅವರು ಚಿತ್ರಕ್ಕೆ ಸಂಗೀತ ನೀಡಿದ್ದಾರೆ.  ನಿರವ್ ಷಾ ಅವರ ಸಿನಿಮಾಟೊಗ್ರಫಿ ಚಿತ್ರಕ್ಕಿದೆ.

* ಜಪಾನಿ, ಕೊರಿಯನ್ ಸೇರಿದಂತೆ ಒಟ್ಟು ಏಳು ಭಾಷೆಗಳಲ್ಲಿ 2.0 ಚಿತ್ರ  ಬಿಡುಗಡೆಯಾಗಲಿದೆ. 

***

ಪ್ರತಿಕ್ರಿಯೆ, ಸಲಹೆ, ಬರಹಗಳಿಗೆ ಸ್ವಾಗತ

ನಮ್ಮ ವಿಳಾಸ: ಪ್ರಜಾವಾಣಿ, ‘ಗುಲ್‌ಮೊಹರ್‌’ ವಿಭಾಗ. ನಂ. 75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು– 560001.
ಇಮೇಲ್‌: gu* mohar@prajavani.co.in

95133 22931, 080 2588 0636

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT