ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೀಗಿರಲಿ ಮಲಗುವ ಕೋಣೆ

Last Updated 20 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಬೆಡ್‌ರೂಂ ದೈಹಿಕ ಮತ್ತು ಮಾನಸಿಕವಾಗಿ ವಿರಮಿಸುವ ಸ್ಥಳ. ಸುಖನಿದ್ರೆ ಮಾಡಿದರೆ ಮಾತ್ರವೇ ಮರುದಿನ ಉತ್ಸಾಹದಿಂದ ಕೆಲಸದಲ್ಲಿ ತೊಡಗಿಸಿಕೊಳ್ಳಲು ಸಾಧ್ಯ. ಸಂಬಂಧಗಳ ನಡುವೆ ಶಾಂತಿ ಮತ್ತು ಸಾಮರಸ್ಯ ಇರಬೇಕಾದರೆ ಬೆಡ್‌ರೂಂ ವಾಸ್ತು ಹೇಗಿರಬೇಕು ಎಂಬುದರ ಮಾಹಿತಿ ಇಲ್ಲಿದೆ.

*ಬೆಡ್‌ರೂಂ ಆಯತ ಅಥವಾ ಚೌಕ ಆಕಾರದಲ್ಲಿರಬೇಕು. ಆಯತಾಕಾರವಿದ್ದಾಗ 20 ಅಡಿ ಉದ್ದ, 10 ರಿಂದ 40 ಅಡಿ ಅಗಲವಿರಬೇಕು.
*ಮಲಗುವ ಕೋಣೆ ಮನೆಯ ನೈರುತ್ಯ ಭಾಗದಲ್ಲಿ ಇರಬೇಕು.
*ಮಾಸ್ಟರ್‌ ಬೆಡ್‌ರೂಂ ಮನೆಯ ಉಳಿದ ಕೋಣೆಗಳಿಗಿಂತ ದೊಡ್ಡದಾಗಿರಬೇಕು.
*ಮನೆಯ ಮಧ್ಯಭಾಗದಲ್ಲಿ ಮಲಗುವ ಕೋಣೆ ಇರಬಾರದು.
*ಪ್ರಾಣಿಗಳ ಚಿತ್ರ, ಬೆಂಕಿಯ ದೃಶ್ಯ, ಹೂವು ಮತ್ತು ಹಣ್ಣುಗಳಿಲ್ಲದ ಮರ, ಪಾರಿವಾಳ, ಕಾಗೆ, ಹಾವು, ಹದ್ದು, ಗೂಬೆಗಳ ಚಿತ್ರಗಳನ್ನು ಮಲಗುವ ಕೋಣೆಯಲ್ಲಿ ನೇತು ಹಾಕಬಾರದು.
*ಉತ್ತರದ ದಿಕ್ಕಿಗೆ ತಲೆ ಹಾಕುವುದು ಬೇಡ ಎಂದು ಗಣಪನ ಕಥೆಯೇ ಹೇಳುತ್ತದೆ. ಹಾಗಾಗಿ ನೆಮ್ಮದಿಯ ನಿದ್ದೆಗೆ ದಕ್ಷಿಣ ದಿಕ್ಕು ಸೂಕ್ತ. ಪೂರ್ವ ದಿಕ್ಕು ಕೂಡ ಒಳ್ಳೆಯದು.
*ಮಲಗುವ ಕೋಣೆಯಲ್ಲಿ ಅಕ್ವೇರಿಯಂ ಇಲ್ಲದಿರುವುದೇ ಒಳ್ಳೆಯದು. ಈಜುವ ಮೀನುಗಳನ್ನು ನೋಡುವುದರಿಂದ ಮಾನಸಿಕ ಒತ್ತಡ ಕಡಿಮೆ ಆಗುತ್ತದೆ ಎಂಬುದು ನಿಜ ಆದರೂ, ಅದನ್ನು ಬೆಡ್‌ರೂಮ್‌ನಲ್ಲಿ ಇರಿಸುವುದರಿಂದ ದಂಪತಿಯ ನಡುವೆ ವಿರಸ ಮೂಡಬಹುದು.
*ಮಲಗುವ ದಿಕ್ಕಿಗೆ ನೇರವಾಗಿ ಕನ್ನಡಿಯನ್ನು ಇರಿಸಬಾರದು. ಒಂದು ವೇಳೆ ಇರಿಸಿದ್ದರೂ, ಅದನ್ನು ಬಟ್ಟೆಯಿಂದ ಮುಚ್ಚಿಡಿ. ಇಲ್ಲದಿದ್ದರೆ ಕೆಟ್ಟ ಕನಸುಗಳು ಬೀಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT