ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳಾಂಗಣ ಗಿಡಗಳ ಆರೋಗ್ಯದ ಗುಟ್ಟು

Last Updated 21 ಏಪ್ರಿಲ್ 2017, 11:27 IST
ಅಕ್ಷರ ಗಾತ್ರ

ಮನೆಯಂಗಳದಲ್ಲೋ ಅಥವಾ ಮನೆಯ ಒಳಾಂಗಣದಲ್ಲೋ ಸುಂದರವಾದ ಕುಂಡಗಳಲ್ಲಿ ಗಿಡಗಳನ್ನು ಬೆಳೆಸುವುದು ಬಹುತೇಕರಿಗೆ ಇಷ್ಟದ ಕೆಲಸ. ಕೆಲವರು ಕಷ್ಟಪಟ್ಟು ಗಿಡಗಳನ್ನು ಬೆಳೆಸುತ್ತಾರೆ. ಆದರೂ ಕೆಲ ಗಿಡಗಳು ಚಿಗುರುವುದೇ ಇಲ್ಲ. ಮತ್ತೆ ಕೆಲ ಗಿಡಗಳು ಜೀವ ಕಳೆದುಕೊಂಡು ಬಿಡುತ್ತವೆ.

ಗಿಡಗಳನ್ನು ಮಕ್ಕಳಂತೆಯೇ ಬೆಳೆಸಬೇಕು. ಏಕೆಂದರೆ ಗಿಡಗಳನ್ನು ಬೆಳೆಸುವುದು ಕೂಡಾ ಒಂದು ಕಲೆ ಎನ್ನುತ್ತಾರೆ ಕೈತೋಟ ಪ್ರೇಮಿಗಳು.
ಮನೆಯಲ್ಲಿನ ಗಿಡಗಳು ಹಸಿರಾಗಿ ನಳನಳಿಸಲು ಇಲ್ಲಿವೆ ಕೆಲ ಟಿಪ್ಸ್‌ಗಳು.

*ಸರಿಯಾದ ಪರಿಸರ: ಗಿಡಗಳಿಗೆ ಯಾವ ಪರಿಸರ ಹೊಂದುತ್ತದೆ ಎಂಬುದನ್ನು ಮೊದಲು ಅರಿಯಬೇಕು. ಕೆಲ ಗಿಡಗಳಿಗೆ ಬಿಸಿಲು ಒಗ್ಗಿದರೆ ಇನ್ನು ಕೆಲ ಗಿಡಗಳಿಗೆ ತಂಪಾದ ಪರಿಸರ ಬೇಕು. ಹಾಗಾಗಿ, ಗಿಡಗಳಿಗೆ ತಕ್ಕ  ಪರಿಸರದಲ್ಲೇ ಬೆಳೆಯುವುದು ಜಾಣತನ.

*ಐಸ್‌ಕ್ಯೂಬ್ ಹಾಕಿ!
ಇದೇನಿದು ಗಿಡಗಳಿಗ ಐಸ್‌ಕ್ಯೂಬ್ ಹಾಕುವುದಾ ಎಂದು ಕಣ್ಣರಳಿಸಬೇಡಿ. ಗಿಡಗಳಿಗೆ  ನೇರವಾಗಿ ನೀರು ಸುರಿಯುವುದಕ್ಕಿಂತ ಗಿಡದ ಸುತ್ತಲಿನ ಮಣ್ಣಿನಲ್ಲಿ ಐಸ್‌ಕ್ಯೂಬ್ ಜೋಡಿಸಿಡಿ.  ಗಿಡದ ಬುಡಕ್ಕೆ ತಾಗದಂತೆ ಎಚ್ಚರವಹಿಸಿ.  ಐಸ್ ಕ್ಯೂಬ್ ನಿಧಾನವಾಗಿ ಕರಗಿ, ಮಣ್ಣಿನ ಮೂಲಕ  ಗಿಡದ ಬೇರುಗಳನ್ನು ತಲುಪುತ್ತದೆ. ಬೇರಿಗೆ ತಲುಪುವ ಐಸ್‌ಕ್ಯೂಬ್‌ನ ನೀರು ಗಿಡದ ಬೆಳವಣಿಗೆಗೆ ಸಹಕಾರಿ.

*ಗಿಡಕ್ಕೂ ಕಾಫಿ, ಚಹಾ: ಹೌದು. ಕಾಫಿ ಅಥವಾ ಟೀ ಸೋಸಿದಾಗ ಉಳಿವ ಚರಟವನ್ನು ಗಿಡದ ಬುಡಕ್ಕೆ ಹಾಕಿ. ಇದು ಗಿಡಗಳಿಗೆ  ಉತ್ತಮ ಗೊಬ್ಬರದಂತೆ ಕೆಲಸ ಮಾಡುತ್ತದೆ.

*ಅಡುಗೆಗೆ ಬಳಸಿದ ನೀರು
ಅಡುಗೆ ಮಾಡುವಾಗ ತರಕಾರಿ ತೊಳೆದ, ಅಕ್ಕಿ ತೊಳೆದ ನೀರನ್ನೂ ಗಿಡಗಳಿಗೆ ಹಾಕಬಹುದು.

*ಬೆಳ್ಳುಳ್ಳಿ ಥೆರಪಿ: ನಿಮ್ಮ ಗಿಡಗಳಿಗೆ ಕೀಟಬಾಧೆಯೇ? ಹಾಗಿದ್ದರೆ ಗಿಡದ ಬುಡದಲ್ಲಿ ಒಂದು ಬೆಳ್ಳುಳ್ಳಿ ಎಸಳು ಇಡಿ.
*ರೀ ಪಾಟಿಂಗ್: ಮನೆಯೊಳಗೆ ಬೆಳೆಸಿರುವ ಗಿಡಗಳಿಗೆ ಆಗಾಗ ರೀ ಪಾಟಿಂಗ್ ಮಾಡುವುದು ತುಂಬಾ ಮುಖ್ಯ. ಕುಂಡದಲ್ಲಿ ವರ್ಷಗಟ್ಟಲೆ ಒಂದೇ ರೀತಿಯ ಮಣ್ಣಿನಲ್ಲಿರುವುದರಿಂದ ಗಿಡಗಳಿಗೆ ಬೇಕಾದ ಸೂಕ್ತ ಪೋಷಣೆ ದೊರೆಯುವುದಿಲ್ಲ. ವರ್ಷಕ್ಕೊಂದು ಬಾರಿ ಕುಂಡದಲ್ಲಿನ ಮಣ್ಣು ಬದಲಿಸುವುದು ಉತ್ತಮ.

*ತೆಂಗಿನ ನಾರಿನ ಪುಡಿ: ಕುಂಡದ ಮಣ್ಣಿನ ಜತೆಗೆ ತೆಂಗಿನ ನಾರಿನ ಪುಡಿಯನ್ನು ಬಳಸುವುದರಿಂದ ನಾರು ತೇವಾಂಶವನ್ನು ಹೆಚ್ಚು ಕಾಲ ಹಿಡಿದಿಡುತ್ತದೆ. ಇದರಿಂದ ಗಿಡದ ಬುಡ ತಂಪಾಗಿದ್ದು, ಗಿಡ ಒಣಗುವುದಿಲ್ಲ ‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT