ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಬೈಲ್‌ ಕಳ್ಳತನ ತಡೆಯಲು ಆ್ಯಪ್

Last Updated 20 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮೊಬೈಲ್‌ ಕಳ್ಳತನವಾಗದಂತೆ ಹಾಗೂ ಅದರಲ್ಲಿಯ ಮಾಹಿತಿ ಯನ್ನು ಯಾರೂ ಕದಿಯದಂತೆ ತಡೆಯುವ ಹೊಸ ಆ್ಯಪ್‌ ‘ಈಜಿ –ಸೆಕ್ಯೂರ್‌’ ಅನ್ನು  ಬೆಂಗಳೂರು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ.

‘ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ  ಆ್ಯಪ್‌ಗಳಿಂತ ಅಗ್ಗ ಮತ್ತು ಹೆಚ್ಚು ವೈಶಿಷ್ಟ್ಯಗಳನ್ನು ಈ ಆ್ಯಪ್‌ ಹೊಂದಿದೆ’  ಎಂದು ಸಂಸ್ಥೆಯ ದೇಶೀಯ ಮುಖ್ಯಸ್ಥ ಭಗವಾನ್‌ ವಸಂತ್‌ ತಿಳಿಸಿದರು.

‘ಕಳ್ಳತನ  ಮತ್ತು ಮಾಹಿತಿ ಕನ್ನ ನಿರೋಧಕ, ಅನಿಯಮಿತ ಆಟೋ ಬ್ಯಾಕ್‌ ಅಪ್‌ ಸೇರಿ ಎಂಟು ಸೌಲಭ್ಯಗಳನ್ನು ಈ ಒಂದೇ ಆ್ಯಪ್‌ ಒದಗಿಸಲಿದೆ.

‘ಮೊಬೈಲ್‌ ಕಳ್ಳತನವಾದರೆ ಕಳ್ಳನ ಭಾವಚಿತ್ರ, ಆತನಿರುವ ಸ್ಥಳದ ಮಾಹಿತಿಸಂದೇಶವನ್ನು ಇ–ಮೇಲ್‌ ಮತ್ತು ಗ್ರಾಹಕರು ನೀಡಿದ ಮತ್ತೊಂದು ಮೊಬೈಲ್‌ ಸಂಖ್ಯೆಗೆ ರವಾನಿಸುತ್ತದೆ.

‘ಆ್ಯಂಟಿ ಹ್ಯಾಕ್‌ ತಂತ್ರಜ್ಞಾನವು ಬೇರೆಯವರು ನಿಮ್ಮ ಮೊಬೈಲ್‌ ಕದ್ದು ನೋಡದಂತೆ ಸದ್ದು ಮಾಡಿ ತಡೆಯುತ್ತದೆ. ಒಂದು ವೇಳೆ ಮೊಬೈಲ್ ಕಳುವಾದರೂ ಅದರಲ್ಲಿಯ ಫೋನ್‌ ಸಂಖ್ಯೆ  ಹಾಗೂ ಇತರ ಮಾಹಿತಿ ಆಟೋ ಬ್ಯಾಕ್‌ ಮೂಲಕ  ಇ–ಮೇಲ್‌ಗೆ ರವಾನೆಯಾಗುತ್ತವೆ.

‘ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಈಜಿ ಸೆಕ್ಯೂರ್‌ (easy secure) ಆ್ಯಪ್‌ ಅನ್ನು ಉಚಿತವಾಗಿ ಡೌನ್‌ಲೋಡ್‌ ಮಾಡಬಹುದು. ಮಾರುಕಟ್ಟೆಯಲ್ಲಿ ಲಭ್ಯವಿರುವ ಕಿಟ್‌ನಲ್ಲಿ (ಒಂದು ವರ್ಷದ ಶುಲ್ಕ ₹365) ನೀಡಲಾದ ಅಂಕಿಗಳಿಂದ ಚಾರ್ಜ್ ಮಾಡಿದರೆ ಸಾಕು. 

ಸದ್ಯ ಬೆಂಗಳೂರಲ್ಲಿ ಮಾತ್ರ ಈ ಆ್ಯಪ್‌ ಲಭ್ಯವಿದ್ದು, ರಾಜ್ಯದ ಇನ್ನುಳಿದ ನಗರಗಳಿಗೂ ಶೀಘ್ರ ವಿಸ್ತರಿಸುವುದಾಗಿ  ಬೆಂಗಳೂರು ನಗರದ ಅಧಿಕೃತ ಡೀಲರ್ ರಾಜೀವ್‌ ಅಹುಜಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT