ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಪಿಎಫ್‌ ಠೇವಣಿಗೆ ಶೇ 8.65ರಷ್ಟು ಬಡ್ಡಿ

Last Updated 20 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: 2016–17ನೇ ಸಾಲಿನ ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್‌) ಠೇವಣಿಗಳಿಗೆ ಶೇ 8.65 ಬಡ್ಡಿ ಯನ್ನು ನೀಡಲು ಹಣಕಾಸು ಸಚಿವಾಲಯ ತಾತ್ವಿಕ ಒಪ್ಪಿಗೆ ನೀಡಿದೆ.

ಉದ್ಯೋಗಿಗಳ ಭವಿಷ್ಯನಿಧಿ ಸಂಘಟನೆಯ(ಇಪಿಎಫ್‌ಒ) ನಾಲ್ಕು ಕೋಟಿ ಸದಸ್ಯರು ಈ ಲಾಭ ಪಡೆಯಲಿದ್ದಾರೆ. ಇದರಿಂದಾಗಿ ಸರ್ಕಾರದ ಬೊಕ್ಕಸದ ಮೇಲೆ ₹158 ಕೋಟಿ ಹೆಚ್ಚುವರಿಯಾಗಿ ಹೊರೆ ಬೀಳಲಿದೆ ಎಂದು ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ಗುರುವಾರ ತಿಳಿಸಿದ್ದಾರೆ.   

ಈ ಕುರಿತು ಹಣಕಾಸು ಸಚಿವಾಲಯದ ಜತೆ ಔಪಚಾರಿಕ ಮಾತುಕತೆ ಮುಗಿದಿದ್ದು ಅಧಿಕೃತ ಆದೇಶ ಬರುವು ದೊಂದೇ ಬಾಕಿ ಎಂದು ತಿಳಿಸಿದರು.

ಈ ಕೂಡಲೇ ಕಾರ್ಮಿಕ ಸಚಿವಾಲಯ ಅಧಿಸೂಚನೆ ಹೊರಡಿಸಲಿದ್ದು, ಸದಸ್ಯರ ಖಾತೆಗಳಿಗೆ ಬಡ್ಡಿ ಪಾವತಿಸಸಲಾಗುವುದು  ಎಂದು ಬಂಡಾರು ತಿಳಿಸಿದರು. ಪಿಎಫ್‌ ಠೇವಣಿಗೆ ಶೇ 8.65 ಬಡ್ಡಿ ನೀಡುವ ಪ್ರಸ್ತಾಪಕ್ಕೆ ಡಿಸೆಂಬರ್‌ನಲ್ಲಿ ಇಪಿಎಫ್‌ಒ ಟ್ರಸ್ಟಿಗಳ ಸಭೆ ಒಪ್ಪಿಗೆ ನೀಡಿತ್ತು. 

ಶೇ 8.8ರಷ್ಟಿದ್ದ ಬಡ್ಡಿದರವನ್ನು ಹಣಕಾಸು ಸಚಿವಾಲಯ 2015–16ರಲ್ಲಿ ಶೇ 8.7ಕ್ಕೆ ಇಳಿಸಿತ್ತು.  2016–17ರಲ್ಲಿ ಬಡ್ಡಿದರವನ್ನು ಮತ್ತೆ ಶೇ 8.8ಕ್ಕೆ ಏರಿಸುವಂತೆ ಕಾರ್ಮಿಕ ಸಂಘಟನೆಗಳು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT