‘ಈ ಎರಡೂ ದುಬಾರಿ ಫೋನ್‌ಗಳು ಆ್ಯಪಲ್‌ನ ಐಫೋನ್, ಸೋನಿ, ಎಲ್‌ಜಿ ಸ್ಮಾರ್ಟ್‌ಫೋನ್‌ಗಳಿಗೆ ಸ್ಪರ್ಧೆ ಒಡ್ಡಲಿದೆ. ಈ ಸ್ಮಾರ್ಟ್‌ಫೋನ್‌ಗಳನ್ನು ಬಹಳ ದಿನಗಳಿಂದ ಎದುರು ನೋಡಲಾಗುತ್ತಿತ್ತು. ವಿಶ್ವದಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ’ ಎಂದು ಸ್ಯಾಮ್ಸಂಗ್ ಇಂಡಿಯಾದ ಹಿರಿಯ ಉಪಾಧ್ಯಕ್ಷ ಅಸಿಂ ವಾರ್ಸಿ ಹೇಳಿದ್ದಾರೆ.
‘ಸ್ಯಾಮ್ಸಂಗ್ ಡೆಕ್ಸ್ (DeX) ನೆರವಿನಿಂದ ಸ್ಮಾರ್ಟ್‌ಫೋನ್‌ನಲ್ಲಿ ಬಳಕೆದಾರರು ಪೂರ್ಣ ಪ್ರಮಾಣದ ಡೆಸ್ಕ್‌ಟಾಪ್ ಸ್ವರೂಪದ ಅನುಭವ ಪಡೆಯಬಹುದು’ ಎಂದು ಅವರು ಹೇಳಿದ್ದಾರೆ.