ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಾರಾ ಆಸ್ತಿ ಖರೀದಿಗೆ ಪೈಪೋಟಿ

Last Updated 20 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ:  ಸಹಾರಾ ಸಮೂಹದ ₹7,400 ಕೋಟಿ ಮೌಲ್ಯದ 34 ಆಸ್ತಿಗಳನ್ನು ಖರೀದಿಸಲು ಕಾರ್ಪೊರೇಟ್‌ ಕಂಪೆನಿಗಳ ಮಧ್ಯೆ ಪೈಪೋಟಿ ಆರಂಭವಾಗಿದೆ.

ಟಾಟಾ, ಗೋದ್ರೇಜ್‌, ಅದಾನಿ ಮತ್ತು ಪತಂಜಲಿ ಸೇರಿದಂತೆ ಅನೇಕ ಕಂಪೆನಿಗಳು ಆಸ್ತಿ ಖರೀದಿಗೆ ಆಸಕ್ತಿ ತೋರಿವೆ.

ಇದರ ಹೊರತಾಗಿ ಲಖನೌದಲ್ಲಿರುವ ಸಹಾರಾ ಆಸ್ಪತ್ರೆ ಖರೀದಿಸಲು ಚೆನ್ನೈನ ಅಪೋಲೊ ಆಸ್ಪತ್ರೆ ಆಸಕ್ತಿ ಹೊಂದಿದೆ ಎಂದು ತಿಳಿದು ಬಂದಿದೆ.  ನೈಟ್‌ ಫ್ರಾಂಕ್‌ ಇಂಡಿಯಾ ಸಹಾರಾ ಸಂಸ್ಥೆಯ ಆಸ್ತಿ, ಭೂಮಿ ಹರಾಜು ಹಾಕಲಿದೆ.

ಸಹಾರಾ ಸಮೂಹದ  ಆಸ್ತಿ ಖರಿದಿಗೆ ಆಸಕ್ತಿ ತೋರಿರುವ ಕಂಪೆನಿಗಳ ಹೆಸರನ್ನು ಬಹಿರಂಗಪಡಿಸಲು ಸಹಾರಾ  ಅಧಿಕಾರಿ ನಿರಾಕರಿಸಿದ್ದಾರೆ. ಪೂನಾದಲ್ಲಿರುವ ಸಹಾರಾ ಭುಮಿ ಖರೀದಿ ಯತ್ನ ನಡೆಯುತ್ತಿದೆ ಎಂದು ಗೋದ್ರೇಜ್‌ ಪ್ರಾಪರ್ಟಿಸ್‌ ಕಾರ್ಯಕಾರಿ ಅಧ್ಯಕ್ಷ ಪಿರೋಜ್‌ಶಾ ಗೋದ್ರೇಜ್‌ ದೃಢಪಡಿಸಿದ್ದಾರೆ. 

ಆದರೆ, ಟಾಟಾ ಹೌಸಿಂಗ್‌ ಅಧಿಕಾರಿಗಳು ಈ ಬಗ್ಗೆ ಯಾವುದೇ ಮಾಹಿತಿ ನೀಡಲು ನಿರಾಕರಿಸಿದ್ದಾರೆ. ಪತಂಜಲಿ ಮತ್ತು ಅದಾನಿ ಕಂಪೆನಿಗಳು ಕೂಡ ಈ ಬಗ್ಗೆ ಚಕಾರ ಎತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT