ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಲ್ಲಾರಪಟ್ನ: 23ರಂದು 12 ಮುಸ್ಲಿಂ ಜೋಡಿಗೆ ಸಾಮೂಹಿಕ ವಿವಾಹ

Last Updated 21 ಏಪ್ರಿಲ್ 2017, 6:28 IST
ಅಕ್ಷರ ಗಾತ್ರ

ಬಂಟ್ವಾಳ: ತಾಲ್ಲೂಕಿನ ಅರಳ ಗ್ರಾಮದ ಮುಲ್ಲಾರಪಟ್ನ ಮುಹಿಯುದ್ದೀನ್ ಜುಮ್ಮಾ ಮಸೀದಿ ಮತ್ತು ದಾರುಲ್ ಉಲೂಂ ಮದರಸ ಯುವಕ ಸಮಿತಿ ಹಾಗೂ ನುಸ್ರತುಲ್ ಅನಾಮ್ ಸ್ವಲಾತ್ ಕಮಿಟಿ ವತಿಯಿಂದ ಎರಡನೇ ವರ್ಷದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವು ಇದೇ 23ರಂದು ಬೆಳಿಗ್ಗೆ ಇಲ್ಲಿನ ಮಸೀದಿ ವಠಾರದಲ್ಲಿ ನಡೆಯಲಿದೆ ಎಂದು ಸಮಿತಿ ಸಲಹೆಗಾರ ಮುಹಮ್ಮದ್ ಹನೀಫ್ ಹೇಳಿದ್ದಾರೆ.

ಬಿ.ಸಿ.ರೋಡ್‌ನಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತ ನಾಡಿ, ‘ಉಚಿತ ಸಾಮೂಹಿಕ ವಿವಾಹಕ್ಕೆ ಈಗಾಗಲೇ ಕಡು ಬಡತನದಲ್ಲಿರುವ ಒಟ್ಟು 12 ಜೋಡಿ ಗುರುತಿಸಲಾಗಿದೆ. ಪ್ರತಿ ಜೋಡಿಗೆ ₹ 1.70 ಲಕ್ಷ ಮೌಲ್ಯದ ವಸ್ತ್ರಾಭರಣ ವಿತರಿಸಲಾಗುವುದು. ಮಾತ್ರವಲ್ಲದೆ ಹಿಂದೂ ಸಮುದಾಯ ದಲ್ಲಿ ಕಡು ಬಡತನದಲ್ಲಿರುವ ಹೆಣ್ಮಕ್ಕ ಳನ್ನು ಗುರುತಿಸಿ ಅವರ ವಿವಾಹಕ್ಕೂ ತಲಾ ₹  25 ಸಾವಿರ ಮೊತ್ತವನ್ನು ವಿತರಿ ಸಲಾಗುತ್ತಿದೆ’ ಎಂದರು.

ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸೈಯದ್ ಅಬ್ದುಲ್ ಗಫೂರ್ ತಂಙಳ್ ಪಾಣಕ್ಕಾಡ್ ಆಶೀ ರ್ವಚನ ನೀಡಲಿದ್ದು, ಸಮಸ್ತ ಉಪಾಧ್ಯಕ್ಷ ಕೆ.ಪಿ.ಅಬ್ದುಲ್ಲಾ ಜಬ್ಬಾರ್ ಮುಸ್ಲಿಯಾರ್ ಕಾರ್ಯಕ್ರಮ ಉದ್ಘಾಟಿಸುವರು. ಸಚಿವ ರಾದ ಬಿ.ರಮಾನಾಥ ರೈ, ಯು.ಟಿ. ಖಾದರ್, ಶಾಸಕರಾದ ಮೊಯ್ದಿನ್ ಬಾವ, ಅಭಯಚಂದ್ರ ಜೈನ್, ಐವನ್ ಡಿಸೋಜ, ಎಸ್ಪಿ ಭೂಷಣ್ ಜಿ. ಬೊರಸೆ, ಬಿಜೆಪಿ ಮುಖಂಡ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಮತ್ತಿತರ ಗಣ್ಯರು ಭಾಗವಹಿಸುವರು ಎಂದರು.

ಸುದ್ದಿಗೋಷ್ಠಿಯಲ್ಲಿ ಸಮಿತಿ ಅಧ್ಯಕ್ಷ ಎಂ.ಎ.ಹಮ್ಮಬ್ಬ, ಪದಾಧಿಕಾರಿಗಳಾದ ಎಂ.ಎ.ಮೊಯ್ದಿನಬ್ಬ, ಶಾಲಿ, ಅಬ್ದುಲ್ ರಹ್ಮಾನ್, ಸಜೂಯುದ್ದೀನ್, ಗ್ರಾಮ ಪಂಚಾಯಿತಿ ಸದಸ್ಯ ಅಶ್ರಫ್ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT