ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿದ್ದರೂ ತಪ್ಪದ ಪರದಾಟ

Last Updated 21 ಏಪ್ರಿಲ್ 2017, 6:40 IST
ಅಕ್ಷರ ಗಾತ್ರ

ಮಂಗಳೂರು: ಜಿಲ್ಲೆಯಲ್ಲಿ ಸಾಕಷ್ಟು ಪ್ರಮಾಣದ ಮಳೆ ಆಗುತ್ತಿದ್ದರೂ, ಬೇಸಿ ಗೆಯ ಸಂದರ್ಭದಲ್ಲಿ ನೀರಿಗಾಗಿ ಪರದಾ ಡುವುದು ತಪ್ಪುತ್ತಿಲ್ಲ. ವರ್ಷಗಳು ಉರು ಳಿದಂತೆ ನೀರಿನ ಸಮಸ್ಯೆ ಹೆಚ್ಚಾಗುತ್ತಿ ದೆಯೇ ಹೊರತು, ಪರಿಹಾರದ ಲಕ್ಷಣ ಗಳು ಕಾಣುತ್ತಿಲ್ಲ. ಹರಿಯುವ ನೀರನ್ನು ಹಿಡಿದಿಟ್ಟುಕೊಳ್ಳುವ ಗೋಜಿಗೆ ಹೋಗದೆ ಇರುವುದೇ ಈ ಸಮಸ್ಯೆಗೆ ಪ್ರಮುಖ ಕಾರಣ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಗ್ರಾಮಗಳ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಉದ್ದೇಶ ದಿಂದ ಸರ್ಕಾರ ಹಲವು ಯೋಜನೆಗಳನ್ನು ಆರಂಭಿಸಿದೆ. ಅದರಲ್ಲಿ ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಅತ್ಯಂತ ಪ್ರಮುಖವಾಗಿದೆ. ಈ ಯೋಜನೆ ಯಡಿ ಸುಮಾರು 10–15 ಗ್ರಾಮಗಳಿಗೆ ನದಿಯ ಶುದ್ಧ ನೀರು ಪೂರೈಸಬಹು ದಾಗಿದೆ. ಆದರೆ, ಜಿಲ್ಲೆಯಲ್ಲಿ ಇಂತಹ ಯೋಜನೆಗಳಿಗೆ ಸಾಕಷ್ಟು ಅವಕಾಶಗ ಳಿದ್ದರೂ, ಕಾರ್ಯಗತ ಮಾತ್ರ ಆಗುತ್ತಿಲ್ಲ ಎನ್ನುವ ಬೇಸರ ಗ್ರಾಮಸ್ಥರದ್ದು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುರುತಿ ಸಿದ್ದ 20 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಪೈಕಿ, ₹89.87 ಕೋಟಿ ವೆಚ್ಚದ ನಾಲ್ಕು ಯೋಜನೆಗೆ ಸರ್ಕಾರ ಅನುಮೋದನೆ ನೀಡಿದೆ. ಇದೀಗ ಇನ್ನೂ ಎರಡು ಯೋಜನೆಗಳು ತಾಂತ್ರಿಕ ಅನುಮೋದನೆಯ ನಿರೀಕ್ಷೆಯಲ್ಲಿವೆ.

ಮಂಗಳೂರು ತಾಲ್ಲೂಕಿನ ಮಳ ವೂರು ಮತ್ತು ಇತರ 14 ಗ್ರಾಮಗಳಿಗೆ ನೀರು ಸರಬರಾಜು ಮಾಡುವ ಯೋಜನೆ ಪೂರ್ಣಗೊಂಡಿದ್ದು, ಇತ್ತೀಚೆ ಗಷ್ಟೇ ನೀರು ಪೂರೈಕೆ ಆರಂಭವಾಗಿದೆ.ಬಂಟ್ವಾಳ ತಾಲ್ಲೂಕಿನ ಮಾಣಿ, ಕಡೇ ಶಿವಾಲಯ, ಅನಂತಾಡಿ ಸೇರಿದಂತೆ ಇತರ ಏಳು ಗ್ರಾಮಗಳಿಗೆ ನೇತ್ರಾವತಿ ನದಿಯಿಂದ ಶಾಶ್ವತ ನೀರು ಸರಬರಾಜು ಮಾಡುವ ₹16 ಕೋಟಿ ವೆಚ್ಚದ ಮಾಣಿ ಬಹುಗ್ರಾಮ ಯೋಜನೆಗೂ ಅನು ಮೋದನೆ ದೊರೆತಿದ್ದು, ಇದರಿಂದ ಐದು ಗ್ರಾಮ ಪಂಚಾಯಿತಿಗಳ 68 ಜನ ವಸತಿ ಪ್ರದೇಶದ 35,927 ಮಂದಿಗೆ ನೀರು ದೊರೆಯಲಿದೆ.

ಸಂಗಬೆಟ್ಟು, ಪಂಜಿಕಲ್ಲು, ಕರ್ಪೆ, ಮೂಡನಡುಗೋಡು, ಬುಡೋಲಿ, ರಾಯಿ, ಆರ್ಲ, ಕೊರ್ಲ, ಅಮ್ಟಾಡಿ, ಕುಕ್ಕಿಪಾಡಿ, ಎಲಿಯ ನಡುಗೋಡು, ಚೆನ್ನೈತ್ತೋಡಿ, ಕೊಡಂಬೆಟ್ಟು, ಪಿಲಿಮೊ ಗರು, ಅಜ್ಜಿಬೆಟ್ಟು, ಕಳ್ಳಿಗೆ ಸೇರಿದಂತೆ 16 ಗ್ರಾಮಗಳಿಗೆ ಫಲ್ಗುಣಿ ಹಾಗೂ ನೇತ್ರಾವತಿ ನದಿಯಿಂದ ಶಾಶ್ವತ ಕುಡಿಯುವ ನೀರು ಸರಬರಾಜು ಮಾಡುವ ₹36 ಕೋಟಿ ವೆಚ್ಚದ ಸಂಗಬೆಟ್ಟು ಯೋಜನೆಯ ಕಾಮ ಗಾರಿಯೂ ಆರಂಭವಾಗಿದ್ದು, ಇದರಿಂದ 16 ಗ್ರಾಮಗಳ 66 ಜನವಸತಿ ಪ್ರದೇಶ ಗಳ 49,788 ಜನರಿಗೆ ಅನುಕೂಲ ಆಗಲಿದೆ.

ಕರೋಪಾಡಿ, ಕೊಳ್ನಾಡು, ಕನ್ಯಾನ ಮತ್ತು ವಿಟ್ಲ ಪಡ್ನೂರು ಸೇರಿದಂತೆ ನಾಲ್ಕು ಗ್ರಾಮಗಳಿಗೆ ನೇತ್ರಾವತಿ ನದಿ ಯಿಂದ ಶಾಶ್ವತ ಕುಡಿಯುವ ನೀರು ಸರ ಬರಾಜು ಮಾಡುವ ₹26 ಕೋಟಿ ವೆಚ್ಚದ ಕರೋಪಾಡಿ ಬಹುಗ್ರಾಮ ಯೋಜನೆ ಬಹುತೇಕ ಪೂರ್ಣಗೊಂ ಡಿದೆ. ಇದರಿಂದ ಮೂರು ಗ್ರಾಮ ಪಂಚಾಯಿತಿಗಳ 80 ಜನವಸತಿ ಪ್ರದೇಶದ 44582 ಮಂದಿಗೆ ಅನುಕೂಲವಾಗಲಿದೆ. ಕಿನ್ನಿಗೋಳಿ ಸಮೀಪದ ಬಳ್ಕುಂಜೆ ಬಳಿ ಶಾಂಭವಿ ನದಿಯಿಂದ ಕಿನ್ನಿಗೋಳಿ ಪರಿಸರದ 17 ಗ್ರಾಮಗಳಿಗೆ ನೀರು ಒದ ಗಿಸುವ ಉದ್ದೇಶದಿಂದ ₹18 ಕೋಟಿ ವೆಚ್ಚದಲ್ಲಿ ಯೋಜನೆ ಕೈಗೆತ್ತಿಕೊಳ್ಳಲಾಗಿದೆ.

ಅಡ್ಡಿಗಳೇ ಅಧಿಕ: ಜಿಲ್ಲೆಯಲ್ಲಿ ಕೈಗೆತ್ತಿ ಕೊಂಡಿರುವ ಬಹುಗ್ರಾಮ ಯೋಜನೆ ಗಳಿಗೆ ಅಡ್ಡಿಗಳೇ ಅಧಿಕವಾಗಿವೆ. ಗುತ್ತಿಗೆ ದಾರರ ಅಸಮರ್ಪಕ ಕಾಮಗಾರಿಯಿಂದ ಕಿನ್ನಿಗೋಳಿ ನೀರಿನ ಯೋಜನೆ ನೆನೆ ಗುದಿಗೆ ಬಿದ್ದಿದ್ದು, ಸಂಗಬೆಟ್ಟು ಯೋಜ ನೆಗೆ ನೀರಿನ ಕೊರತೆ ಎದುರಾಗಿದೆ.ಮಳವೂರು ಬಹುಗ್ರಾಮ ಯೋಜನೆ ಗಿಂತ ಮೊದಲೇ ಕಿನ್ನಿಗೋಳಿ ಯೋಜನೆ ಯನ್ನು ಆರಂಭಿಸಲಾಗಿತ್ತು. ಆದರೆ, ಕಾಮಗಾರಿಯ ಗುತ್ತಿಗೆ ಪಡೆದಿದ್ದ ಹೈದ ರಾಬಾದ್ ಮೂಲದ ಕಂಪೆನಿಯು, ಅಸ ಮರ್ಪಕ ಕಾಮಗಾರಿ ಕೈಗೊಂಡಿದ್ದು, ಇದೀಗ ಯೋಜನೆ ಸಂಪೂರ್ಣ ಹಾಳಾ ಗಿದೆ. ಗುತ್ತಿಗೆದಾರರ ವಿಳಂಬ ಹಾಗೂ ತಾಂತ್ರಿಕ ತೊಂದರೆಯಿಂದ ಸಂಪೂರ್ಣ ವಾಗಿ ಹಿನ್ನಡೆ ಅನುಭವಿಸುವಂತಾಗಿದೆ.

‘ಸಂಗಬೆಟ್ಟು ಯೋಜನೆ ಮೂಲಕ ಮೂಡುಬಿದರೆ ಪುರಸಭೆ ಹಾಗೂ ಪುಚ್ಚೆ ಮೊಗರು ಭಾಗಕ್ಕೆ ನೀರು ಪೂರೈಸುವ ಉದ್ದೇಶವಿದೆ. ಆದರೆ, ಈ ಯೋಜನೆಯ ಮೇಲ್ಭಾಗದಲ್ಲಿ ಖಾಸಗಿ ವಿದ್ಯುತ್‌ ಉತ್ಪಾದನಾ ಕಂಪೆನಿಯ ಜಲಾಶಯ ವಿದ್ದು, ಈ ಯೋಜನೆಗೆ ನೀರಿನ ಕೊರತೆ ಎದುರಾಗಿದೆ. ಹೀಗಾಗಿ ವಿದ್ಯುತ್‌ ಕಂಪೆ ನಿಯವರು ಡಿಸೆಂಬರ್‌ ವೇಳೆಗೆ ಜಲಾಶ ಯದ ನೀರನ್ನು ಹೊರಕ್ಕೆ ಕಳುಹಿಸದೆ, ನೀರು ಸಂಗ್ರಹಿಸಿಡಬೇಕು. ಅಗತ್ಯವಿರು ವಾಗ ಈ ನೀರನ್ನು ಸಂಗಬೆಟ್ಟು ಯೋಜ ನೆಗೆ ಪೂರೈಸಬೇಕು. ಇದಕ್ಕೆ ಖಾಸಗಿ ವಿದ್ಯುತ್‌ ಕಂಪೆನಿಯ ಜತೆ ಜಿಲ್ಲಾಡಳಿ ಒಪ್ಪಂದವನ್ನೂ ಮಾಡಿಕೊಂಡಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT