ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಸತಿ ಯೋಜನೆ ಮಾರ್ಗದರ್ಶನ ಅಗತ್ಯ

Last Updated 21 ಏಪ್ರಿಲ್ 2017, 6:57 IST
ಅಕ್ಷರ ಗಾತ್ರ

ಕಾಲ್ತೋಡು (ಬೈಂದೂರು): ‘ಸರ್ಕಾರ  ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ, ಪರಿಶಿಷ್ಠ ಪಂಗಡ ಹಾಗೂ ಮೀನುಗಾರ ವಸತಿ ಯೋಜನೆ ಅಡಿ ಮನೆ ನಿರ್ಮಾ ಣಕ್ಕೆ ಆರ್ಥಿಕ ಸಹಾಯಧನ ಒದಗಿಸು ತ್ತಿದೆ, ಮಾರ್ಗದರ್ಶನದ ಕೊರತೆ ಹಾಗೂ ನಿರಾಸಕ್ತಿ ಕಾರಣದಿಂದ ಅದು ಸಮ ರ್ಪಕವಾಗಿ ಅನುಷ್ಠಾನಗೊ ಳ್ಳುತ್ತಿಲ್ಲ. ಈ ಬಗ್ಗೆ ಸರಿಯಾದ ಮಾರ್ಗದರ್ಶನ ದೊರೆ ತರೆ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಮನೆ ನಿರ್ಮಿಸಿಕೊಳ್ಳಬಹುದು’ ಎಂದು ಕಾಲ್ತೋಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ. ಅಣ್ಣಪ್ಪ ಶೆಟ್ಟಿ ಹೇಳಿದರು.

ಕಾಲ್ತೋಡು ಡಾ. ಬಿ. ಆರ್. ಅಂಬೇ ಡ್ಕರ್ ಸಭಾಭವನದಲ್ಲಿ ವಸತಿ ಯೋಜನೆ ಫಲಾನುಭವಿಗಳಿಗಾಗಿ ನಡೆಸಿದ ವಿಶೇಷ ಮಾಹಿತಿ ಕಾರ್ಯಾ ಗಾರ ಉದ್ಘಾಟಿಸಿ  ಮಾತನಾಡಿದರು.‘ಸಮಗ್ರ ಗಿರಿಜನ ಅಭಿವೃದ್ಧಿ ಯೋಜನಾ ಇಲಾಖೆ ವಸತಿ ರಹಿತ ಪರಿಶಿಷ್ಟರಿಗೆ ಪ್ರತಿ ಮನೆ ನಿರ್ಮಾಣಕ್ಕೆ ₹1.75 ಲಕ್ಷ ಹಾಗೂ ಸಿಂಡಿಕೇಟ್ ಬ್ಯಾಂಕ್ ₹1.25 ಲಕ್ಷ ನೆರವು ನೀಡುತ್ತವೆ. ಒಟ್ಟು ₹3 ಲಕ್ಷ ಅನುದಾನದಲ್ಲಿ ಉತ್ತಮ ಮನೆ ನಿರ್ಮಿಸಿಕೊಳ್ಳಬಹುದು’ ಎಂದರು.

ಗೋಳಿಹೊಳೆ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜು ಪೂಜಾರಿ, ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕಿ ನಯನಾ ಕೆ. ತಾಲ್ಲೂಕು ಪಂಚಾಯಿತಿ  ಕಾರ್ಯನಿರ್ವಹಣಾಧಿಕಾರಿ ಚೆನ್ನಪ್ಪ ಮೊಯಿಲಿ, ಐಟಿಡಿಪಿ ಯೋಜನಾ ಸಮನ್ವಯಾಧಿಕಾರಿ ಹರೀಶ್ ಗಾಂವ ಕರ್, ಮೆನೇಜರ್ ವಿಶ್ವನಾಥ ಶೆಟ್ಟಿ ಇದ್ದರು. ಖಂಬದಕೋಣೆ ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ ಸ್ವಾಗತಿಸಿ, ಕಾಲ್ತೋಡು ಅಭಿವೃದ್ಧಿ ಅಧಿಕಾರಿ ಸತೀಶ್ ತೋಳಾರ್ ವಂದಿಸಿದರು.

ಬೆಂಗಳೂರಿನ ಸರ್ಕಾರೇತರ ಸಂಸ್ಥೆ ‘ನಿವಾಸ್’ನ ತಂತ್ರಜ್ಞ ಪ್ರೊ. ರಘುನಾಥ್ ಮತ್ತು ನಿರ್ದೇಶಕಿ ಉಷಾ ಶೆಟ್ಟಿ ವಸತಿ ಫಲಾಭವಿಗಳಿಗೆ ಕನಿಷ್ಠ ವೆಚ್ಚದಲ್ಲಿ ಗುಣಮಟ್ಟದ ಮನೆ ನಿರ್ಮಾಣದ ಕುರಿತು ಅವರು ಕಾರ್ಯಕ್ರಮದಲ್ಲಿ  ಮಾಹಿತಿ ನೀಡಿದರು.ಕಾಲ್ತೋಡು, ಬಿಜೂರು, ಗೋಳಿಹೊಳೆ ಮತ್ತಿತರ ಗ್ರಾಮ ಗಳ ಫಲಾನುಭವಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT