ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೀಟಬಾಧೆ ನಿಯಂತ್ರಣ; ರೈತರಿಗೆ ಮಾಹಿತಿ

Last Updated 21 ಏಪ್ರಿಲ್ 2017, 7:52 IST
ಅಕ್ಷರ ಗಾತ್ರ

ಅಕ್ಕಿಆಲೂರ: ಹತ್ತಿ ಬೆಳೆಗೆ ತಗಲುವ ಗುಲಾಬಿ ಬಣ್ಣದ ಕಾಯಿಕೊರಕ ಕೀಟ ಬಾಧೆ ನಿಯಂತ್ರಣದ ಕುರಿತು ಇಲ್ಲಿ ಕೃಷಿ ಅಧಿಕಾರಿ ಸಂತೋಷ್ ಬಡ್ಡಿಯವರ ರೈತರಲ್ಲಿ ತಿಳಿವಳಿಕೆ ಮೂಡಿಸಿದರು.ಗುಲಾಬಿ ಬಣ್ಣದ ಕಾಯಿಕೊರಕ ಕೀಟ ಬಾಧೆಯಿಂದ ಇಳುವರಿ ಕುಂಠಿತ ವಾಗುತ್ತಿದ್ದು, ರೈತರು ಆರ್ಥಿಕ ಸಂಕಷ್ಟಕ್ಕೆ ಈಡಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪ ಡಿಸಿದ ಬಡ್ಡಿಯವರ, ಬಾಧೆ ನಿಯಂತ್ರಣ ಕುರಿತು ವಿವರ ಮಾಹಿತಿ ನೀಡಿದರು.

ಆಹಾರ ಕೊರತೆ, ತಾಪಮಾನದಲ್ಲಿ ಆಗುವ ಏರುಪೇರಿನ ಮಧ್ಯೆ ಗುಲಾಬಿ ಬಣ್ಣದ ಕೀಟ ಸಂತತಿ ಮುಂದುವರೆಸಲು ಸುಪ್ತಾವಸ್ಥೆ ತಲುಪುತ್ತದೆ. 4 ನೇ ಹಂತದ ಮರಿಗಳು ಸಾಮಾನ್ಯವಾಗಿ ಕೋಶಾವಸ್ಥೆ ತಲುಪದೇ ಕೀಡೆ ಹಂತದಲ್ಲಿಯೇ ಹತ್ತಿ ಕಾಯಿ, ಹತ್ತಿ ಗಿಡಗಳ ಅವಶೇಷ ಅಥವಾ ಮಣ್ಣಿನಲ್ಲಿ ಸುಪ್ತಾವಸ್ಥೆ ಹೊಂದುತ್ತವೆ. ಮತ್ತೆ ಉತ್ತಮ ವಾತಾವರಣ ಲಭಿಸಿದಾಗ ಕೋಶಾವಸ್ಥೆ ಮುಗಿಸಿ ಪ್ರೌಢ ಕೀಟಗಳಾಗಿ ವಂಶಾಭಿವೃದ್ಧಿ ಮುಂದುವರಿಸುತ್ತವೆ ಎಂದು ತಿಳಿಸಿದರು.

ಫಸಲು ಕೈ ಸೇರಿದ ಬಳಿಕ ಹತ್ತಿ ಗಿಡದ ತ್ಯಾಜ್ಯ ಕಿತ್ತ ಬಳಿಕ ಸ್ಥಳದಲ್ಲಿಯೇ ಬೆಂಕಿ ಹಚ್ಚಿ ಸುಡುವುದರಿಂದ ಕೀಟ ಗಳನ್ನು ನಾಶ ಪಡಿಸಬಹುದಾಗಿದೆ ಎಂದು ವಿವರಿಸಿದರು. ರೈತ ಸಂಪರ್ಕ ಕೇಂದ್ರದ ಸಿಬ್ಬಂದಿ ಹಾಗೂ ಹತ್ತಿ ಬೆಳೆಗಾರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT