ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಾಯ್ಲೆಟ್ ಪೇಪರ್‌ ಕದೀತಾರೆ!

Last Updated 21 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ವರ್ಷದ ಹಿಂದೆ ಚೀನಾ ಪೊಲೀಸರ ನಿದ್ದೆಗೆಡಿಸಿದ್ದ ಟಾಯ್ಲೆಟ್ ಪೇಪರ್ ಕಳ್ಳರ ಹಾವಳಿ ಈಗ ಮತ್ತೆ ಪ್ರಾರಂಭವಾಗಿದೆ.

ಚೀನಾದ ಚೆಂಗ್ಡು ನಗರದಲ್ಲಿನ ಉದ್ಯಾನ ಒಂದರ ಶೌಚಗೃಹದಿಂದ 1500 ರೋಲ್ ಟಾಯ್ಲೆಟ್ ಪೇಪರ್‌ಗಳು ಒಂದೇ ವಾರದಲ್ಲಿ ಕಳ್ಳತನವಾಗಿವೆ. ಟಾಯ್ಲೆಟ್ ಪೇಪರ್ ಕಳ್ಳರನ್ನು ಹಿಡಿಯಲು ಹಲವು ಕ್ರಮಗಳನ್ನು ಕೈಗೊಂಡಿರುವ ಚೀನಾ ಪೊಲೀಸರು ಇದಕ್ಕಾಗಿಯೇ ವಿಶೇಷ ತಂಡವನ್ನೇ ರಚಿಸಿದ್ದಾರೆ.

ಕಳ್ಳರನ್ನು ಹಿಡಿಯಲು ಪೊಲೀಸರು ಮಾಡುತ್ತಿರುವ ಪ್ರಯತ್ನಗಳನ್ನು ಚೀನಾ ಮಂದಿ ‘ಟಾಯ್ಲೆಟ್ ಕ್ರಾಂತಿ’ ಎಂದು ವ್ಯಂಗ್ಯ ಮಾಡುತ್ತಿದ್ದಾರೆ.

ಕಳೆದ ವರ್ಷ ಈ ಕಳ್ಳರ ಹಾವಳಿ ತಗ್ಗಿಸಲೆಂದು ಬೀಜಿಂಗ್‌ನ ಸಾರ್ವಜನಿಕ ಶೌಚಗೃಹಗಳಲ್ಲಿ ಮುಖ ಸ್ಕ್ಯಾನರ್ ಅಳವಡಿಸಲಾಗಿತ್ತು. ಇದಲ್ಲದೆ ಒಂದು ಬಾರಿಯ ಬಳಕೆಗೆ 60 ಸೆ.ಮೀನಷ್ಟು ಮಾತ್ರವೇ ಟಾಯ್ಲೆಟ್ ಪೇಪರ್ ಹೊರಬರುವಂತೆ ಯಂತ್ರವೊಂದನ್ನೂ ಅಳವಡಿಸಲಾಗಿತ್ತು. ಆದರೂ ಕಳ್ಳರ ಹಾವಳಿ ನಿಲ್ಲದಿರುವುದು ಪೊಲೀಸರ ತಲೆ ಕೆಡಿಸಿದೆ.

ಪೊಲೀಸರೂ ಸೇರಿದಂತೆ, ಉದ್ಯಾನಗಳು, ಚಿತ್ರಮಂದಿರಗಳ ಭದ್ರತಾ ಸಿಬ್ಬಂದಿಗಳು ಗೇಟ್‌ ಕಾಯುವುದಕ್ಕಿಂತ ಹೆಚ್ಚಾಗಿ ಟಾಯ್ಲೆಟ್‌ಗಳನ್ನು ಕಾಯುವ ಪರಿಸ್ಥಿತಿ ಚೀನಾದಲ್ಲಿ ಉಂಟಾಗಿದೆಯಂತೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT