ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌತೆಕಾಯಿ ಬಗೆಬಗೆ ಖಾದ್ಯ

Last Updated 21 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಸೌತೆಕಾಯಿ ಸಿಪ್ಪೆ ಚಟ್ನಿ
ಬೇಕಾಗುವ ಸಾಮಗ್ರಿಗಳು
ಸೌತೆಕಾಯಿ ಸಿಪ್ಪೆ – (ಒಂದು ಇಡಿ ಸೌತೆಕಾಯಿಯದ್ದು)
ಹಸಿಮೆಣಸಿನಕಾಯಿ – 2
ಉಪ್ಪು – ರುಚಿಗೆ
ತೆಂಗಿನ ತುರಿ – 1ಕಪ್‌
ಹುಣಸೆಹಣ್ಣು – ಸ್ವಲ್ಪ
ಇಂಗು – ಚಿಟಿಕೆ
ಕಾಳುಮೆಣಸು – 5
ಗಟ್ಟಿ ಮೊಸರು – ಸ್ವಲ್ಪ
ಸಾಸಿವೆ – ಸ್ವಲ್ಪ
ತಯಾರಿಸುವ ವಿಧಾನ: ಸೌತೆಕಾಯಿ ಸಿಪ್ಪೆಯನ್ನು ಸಣ್ಣಗೆ ಹೆಚ್ಚಿ, ಅದಕ್ಕೆ ಕಾಯಿತುರಿ, ಉಪ್ಪು, ಇಂಗು, ಹಸಿಮೆಣಸು, ಕಾಳುಮೆಣಸು ಮತ್ತು ಹುಣಸೆಹಣ್ಣು ಸೇರಿಸಿ ರುಬ್ಬಿದ ನಂತರ ಸಾಸಿವೆ ಒಗ್ಗರಣೆ ಸೇರಿಸಿ ಮೊಸರನ್ನು ಹಾಕಿ ಕಲೆಸಿದರೆ ರುಚಿಯಾದ ಚಟ್ನಿ ಸವಿಯಲು ಸಿದ್ಧ.

ಸೌತೆಕಾಯಿ ಹಸಿ ಗೊಜ್ಜು
ಬೇಕಾಗುವ ಸಾಮಗ್ರಿಗಳು
ಸಿಪ್ಪೆ ತೆಗೆದ ಸೌತೆಕಾಯಿ ಚೂರುಗಳು – 1ಕಪ್‌
ಕಡ್ಲೇಬೇಳೆ – 2,1/2 ಚಮಚ
ಇಂಗು –ಚಿಟಿಕೆ
ಕಾಯಿತುರಿ – 1/2 ಕಪ್‌
ಉಪ್ಪು –ರುಚಿಗೆ
ಕೆಂಪುಮೆಣಸು – 5ರಿಂದ 6
ಹುಣಸೆ ಹಣ್ಣು – 1 1/2 ಇಂಚು
ಸಿಡಿಸಿದ ಸಾಸಿವೆಕಾಳು – 1/4 ಚಮಚ
ತಯಾರಿಸುವ ವಿಧಾನ: ಕಡ್ಲೆಬೇಳೆ ಮತ್ತು ಕೆಂಪು ಮೆಣಸನ್ನು ಮೊದಲು ಹುರಿದಿಟ್ಟುಕೊಳ್ಳಿ. ನಂತರ ಮಿಕ್ಸಿಗೆ ಹುರಿದಿಟ್ಟುಕೊಂಡ ಸಾಮಗ್ರಿಗಳು, ಇಂಗು, ಕಾಯಿತುರಿ, ಉಪ್ಪು, ಹುಣಸೆಹಣ್ಣು ಸೇರಿಸಿ ರುಬ್ಬಿಕೊಳ್ಳಿ. ಆ ಮಿಶ್ರಣಕ್ಕೆ ಸೌತೆಕಾಯಿ ಮತ್ತು ಸಿಡಿಸಿದ ಸಾಸಿವೆ ಸೇರಿಸಿ ಕಲೆಸಿ. ಇದು ಅನ್ನಕ್ಕೆ ಹೊಂದುತ್ತದೆ.

ಸೌತೆಕಾಯಿ ಪಕೋಡ
ಬೇಕಾಗುವ ಸಾಮಗ್ರಿಗಳು
ಸಿಪ್ಪೆ ತೆಗೆದ ಸೌತೆಕಾಯಿ ಚೂರು – 1/2 ಕಪ್‌
ಅಕ್ಕಿ – 1/2 ಕಪ್‌
ಕೆಂಪು ಮೆಣಸು – 5ರಿಂದ 6
ಉಪ್ಪು– ರುಚಿಗೆ
ಜೀರಿಗೆ – 1/2 ಚಮಚ
ಕೊತ್ತುಂಬರಿ, ಸಾಸಿವೆ, ಶುಂಠಿ, ಕೊತ್ತುಂಬರಿ ಸೊಪ್ಪು – ಸ್ವಲ್ಪ
ಹುಣಸೆ ಹಣ್ಣು – ಸ್ವಲ್ಪ
ತಯಾರಿಸುವ ವಿಧಾನ: ಅಕ್ಕಿಯನ್ನು 3 ಗಂಟೆ ನೆನೆಸಿ, ಮೇಲೆ ತಿಳಿಸಿದ ಎಲ್ಲಾ ಸಾಮಗ್ರಿಗಳನ್ನು ಸೇರಿಸಿ ರುಬ್ಬಿ. ಅದು ಹಿಟ್ಟಿನ ರೂಪಕ್ಕೆ ಬಂದಿರುತ್ತದೆ. ನಂತರ ಆ ಹಿಟ್ಟನ್ನು ಒಲೆಯ ಮೇಲಿಟ್ಟು ಸ್ವಲ್ಪ ಗಟ್ಟಿ ಮಾಡಿಕೊಳ್ಳಿ. ನಂತರ ಬಾಣಲಿಯಲ್ಲಿ ಸಾಕಷ್ಟು ಎಣ್ಣೆಯನ್ನು ಹಾಕಿ ಕಾದ ಎಣ್ಣೆಗೆ ಸ್ವಲ್ಪ ಸ್ವಲ್ಪವೇ ಹಿಟ್ಟನ್ನು ಉಂಡೆಯಾಕಾರದಲ್ಲಿ ಹಾಕಿ. ಆಮೇಲೆ ಎರಡು ಕಡೆ ಕಾಯಿಸಿದರೆ ಪಕೋಡ ರೆಡಿ.

ಸೌತೆಕಾಯಿ ಪಾಯಸ
ಬೇಕಾಗುವ ಸಾಮಗ್ರಿಗಳು
ಸೌತೆಕಾಯಿ – 1
ಬೆಲ್ಲ – 1ಕಪ್‌
ಉಪ್ಪು – ಚಿಟಿಕೆ
ಏಲಕ್ಕಿ ಪುಡಿ – ಸ್ವಲ್ಪ
ತೆಂಗಿನತುರಿ– 1 ಕಪ್‌
ನೆನೆಸಿದ ಕಪ್‌ – ಸ್ವಲ್ಪ
ತಯಾರಿಸುವ ವಿಧಾನ: ಸೌತೆಕಾಯಿ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಕೊಂಡು ಬೇಯಿಸಬೇಕು. ನೆನೆದ ಅಕ್ಕಿ, ಕಾಯಿತುರಿ ರುಬ್ಬಿ ಬೆಂದ ಸೌತೆಯ ಹೋಳುಗಳಿಗೆ ಸೇರಿಸಿ ಸ್ವಲ್ಪ ಹೊತ್ತು ಬೇಯಿಸಿ, ಬೆಲ್ಲ ಮತ್ತು ಏಲಕ್ಕಿ ಪುಡಿ ಹಾಗೂ ಉಪ್ಪು ಸೇರಿಸಿ ಕುದಿಸಿದರೆ ರುಚಿಯಾದ ಪಾಯಸ ಸವಿಯಲು ರೆಡಿ.

ಸೌತೆಕಾಯಿ ಸಾಂಬಾರ್
ಬೇಕಾಗುವ ಸಾಮಗ್ರಿಗಳು
ಸಾಂಬಾರ್ ಸೌತೆಕಾಯಿ (ಸಿಪ್ಪೆ ಸಹಿತ ಹೋಳು)– 1 ಕಪ್‌
ತೊಗರಿಬೇಳೆ– 1/4 ಕಪ್‌
ಉಪ್ಪು –ರುಚಿಗೆ
ಹುಣಸೆರಸ– 1/2 ಚಮಚ
ಬೆಲ್ಲ –  1 ಚೂರು
ಕರಿಬೇವು – 6 ಎಲೆ
ಸಾಸಿವೆ ಹಾಗೂ ಎಣ್ಣೆ– ಒಗ್ಗರಣೆಗೆ
ಸಾಂಬಾರ್ ಪುಡಿ – 1/2 ಚಮಚ
ತಯಾರಿಸುವ ವಿಧಾನ: ತೊಗರಿಬೇಳೆ ಮತ್ತು ಸೌತೆಯ ಹೋಳುಗಳನ್ನು ಸಾಕಷ್ಟು ನೀರಿನಲ್ಲಿ ಬೇಯಿಸಿ. ಮೇಲೆ ತಿಳಿಸಿದ ಎಲ್ಲಾ ಸಾಮಗ್ರಿಗಳನ್ನು ಸೇರಿಸಿ ಕುದಿಸಿ. ಕೊನೆಗೆ ಸಾಸಿವೆಯನ್ನು ಎಣ್ಣೆಯಲ್ಲಿ ಸಿಡಿಸಿ ಹಾಕಿದರೆ ಸಾಂಬಾರ್ ರೆಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT