ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪ್ಪುಹಣ ಘೋಷಣೆಗೆ ಮತ್ತೆ ಗಡುವು ವಿಸ್ತರಣೆ

Last Updated 21 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ ಯೋಜನೆಯಡಿ (ಪಿಎಂಜಿಕೆವೈ) ಕಪ್ಪುಹಣ ಘೋಷಿಸಿಕೊಳ್ಳಲು ನೀಡಿರುವ ಅವಧಿಯನ್ನು ಮೇ 10ರವರೆಗೆ ವಿಸ್ತರಿಸಲಾಗಿದೆ.

ಈ ಮೊದಲು ಕೇಂದ್ರ ನೇರ ತೆರಿಗೆ ಮಂಡಳಿಯು ಕಪ್ಪುಹಣ ಘೋಷಣೆಗೆ ಏಪ್ರಿಲ್‌ 30ರ ಗಡುವು ನೀಡಿತ್ತು.

ಯೋಜನೆಯಡಿ ಶೇ 50 ರಷ್ಟು ತೆರಿಗೆ   ಪಾವತಿಸಿ ಕಪ್ಪುಹಣ ಘೋಷಿಸಿಕೊಳ್ಳಬಹುದು. ಇನ್ನುಳಿದ ಶೇ 25 ರಷ್ಟು ಅಘೋಷಿತ ಆದಾಯವನ್ನು  ನಾಲ್ಕು ವರ್ಷಗಳ ವರೆಗೆ ಬಡ್ಡಿದರಹಿತವಾಗಿ ಠೇವಣಿ ಇಡಬಹುದು.

ಗರಿಷ್ಠ ಮುಖಬೆಲೆಯ ನೋಟುಗಳ ರದ್ದತಿ ಬಳಿಕ 2016 ಡಿಸೆಂಬರ್‌ 17ರಂದು ಕಪ್ಪುಹಣ ಘೋಷಣೆ ಯೋಜನೆ ಜಾರಿಗೆ ತಂದ ಸರ್ಕಾರ ಮಾರ್ಚ್ 31ರ ಗಡುವು ನೀಡಿತ್ತು. ಆ ಬಳಿಕ ಇದು ಎರಡನೇ ಬಾರಿಗೆ ಗಡುವು ವಿಸ್ತರಣೆ ಮಾಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT