ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಮವಾರ 1ನೇ ಕಂತಿನ ಚಿನ್ನದ ಬಾಂಡ್‌

Last Updated 21 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: 2017–18ನೇ ಆರ್ಥಿಕ ವರ್ಷದಲ್ಲಿ ಮೊದಲ ಕಂತಿನ ಚಿನ್ನದ ಬಾಂಡ್‌ ಯೋಜನೆಗೆ ಸೋಮವಾರ ಚಾಲನೆ ಸಿಗಲಿದೆ
ಅರ್ಜಿ ಪಡೆಯಲು ಏಪ್ರಿಲ್‌ 24 ರಿಂದ ಏಪ್ರಿಲ್‌ 28ರವರೆಗೆ   ಐದು ದಿನಗಳ ಅವಕಾಶ ನೀಡಲಾಗಿದೆ. ಮೇ 12 ರಂದು ಬಾಂಡ್‌ ವಿತರಣೆ ಮಾಡಲಾಗುವುದು ಎಂದು  ಕೇಂದ್ರ ಹಣಕಾಸು ಸಚಿವಾಲಯದ ಪ್ರಕಟಣೆ ತಿಳಿಸಿದೆ.

ಭಾರತೀಯ ಚಿನ್ನ ಮತ್ತು ಆಭರಣ ಒಕ್ಕೂಟವು (ಸೋಮವಾರದಿಂದ ಶುಕ್ರವಾರ) 999 ಶುದ್ಧತೆಯ ಚಿನ್ನಕ್ಕೆ ಒಂದು ವಾರಕ್ಕೆ ನಿಗದಿಪಡಿಸುವ  ಬೆಲೆಯನ್ನು ಆಧರಿಸಿ ಬಾಂಡ್‌ ಬೆಲೆ ನಿಗದಿಪಡಿಸಲಾಗುವುದು ಎಂದು ಹೇಳಿದೆ.

ಬ್ಯಾಂಕ್‌ಗಳು, ಅಂಚೆ ಕಚೇರಿ, ಸ್ಟಾಕ್‌ ಹೋಲ್ಡಿಂಗ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ (ಎಸ್‌ಎಚ್‌ಸಿಐಎಲ್) ಹಾಗೂ ರಾಷ್ಟ್ರೀಯ  ಮತ್ತು ಮುಂಬೈ ಷೇರು ವಿನಿಮಯ ಕೇಂದ್ರಗಳಲ್ಲಿ ಚಿನ್ನದ ಬಾಂಡ್‌ ವಿತರಣೆಯಾಗಲಿದೆ.

2016–17ನೇ ಆರ್ಥಿಕ ವರ್ಷದಲ್ಲಿ ಕೇಂದ್ರ ಸರ್ಕಾರ ಒಟ್ಟು 7 ಕಂತಿನಲ್ಲಿ  6,410 ಕೆ.ಜಿ ಮೌಲ್ಯದ ಚಿನ್ನದ ಬಾಂಡ್‌ ಬಿಡುಗಡೆ ಮಾಡಿದೆ.
ಭೌತಿಕ ರೂಪದಲ್ಲಿ ನಿಷ್ಪ್ರಯೋಜಕವಾಗಿರುವ ಚಿನ್ನವನ್ನು ಬಳಕೆಗೆ ತರುವ ಉದ್ದೇಶದಿಂದ ಕೇಂದ್ರ ಸರ್ಕಾರ 2015ರಲ್ಲಿ ಚಿನ್ನದ ಬಾಂಡ್‌ ಯೋಜನೆ ಜಾರಿಗೆ ತಂದಿದೆ.

ಯೋಜನೆ ವಿವರ
* ನೀಡಿಕೆ ಬೆಲೆ ಪ್ರತಿ ಗ್ರಾಂಗೆ ₹ 2,901
* ಪ್ರತಿ ಗ್ರಾಂ ಬೆಲೆ ₹50 ಸಾಧ್ಯತೆ
* ವಾರ್ಷಿಕ ಬಡ್ಡಿದರ ಶೇ 2.75
*ಖರೀದಿ ಮಿತಿ: ಕನಿಷ್ಠ 1 ಗ್ರಾಂನಿಂದ ಗರಿಷ್ಠ 500 ಗ್ರಾಂ
* ಬಾಂಡ್‌ ಅವಧಿ 8 ವರ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT