ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಲೀನದ ಬಳಿಕ ಬಿರ್ಲಾಗೆ ಷೇರು

Last Updated 21 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ :ಐಡಿಯಾ–ವೊಡಾಫೋನ್‌ ವಿಲೀನದ ಬಳಿಕ, ತನ್ನಲ್ಲಿರುವ ಶೇ 9.5 ರಷ್ಟು ಹೆಚ್ಚುವರಿ ಷೇರುಗಳನ್ನು ಆದಿತ್ಯ ಬಿರ್ಲಾ ಸಮೂಹಕ್ಕೆ ಮಾರಾಟ ಮಾಡಲು ವೊಡಾಫೋನ್‌ ಕಂಪೆನಿ ಒಪ್ಪಿಗೆ ನೀಡಿದೆ.

ಒಪ್ಪಂದದಂತೆ, ವಿಲೀನಗೊಂಡ ಸಂಸ್ಥೆಯು ಎರಡೂ ಕಂಪೆನಿಗಳ ಜಂಟಿ ನಿಯಂತ್ರಣಕ್ಕೆ ಒಳಪಡಲಿದ್ದು, ಷೇರುದಾರರು ಆಡಳಿತದಲ್ಲಿರಲಿದೆ. ವಿಲೀನವಾದ ಘಟಕದಲ್ಲಿ ವೊಡಾಫೋನ್‌ ಶೇ 50 ರಷ್ಟು ಮತ್ತು ಆದಿತ್ಯ ಬಿರ್ಲಾ ಸಮೂಹ ಶೇ 21 ರಷ್ಟು ಷೇರುಗಳನ್ನು ಹೊಂದಲಿವೆ.
ವೊಡಾಫೋನ್‌ ವಿಲೀನವಾಗಿರು ಸಂಸ್ಥೆಯಲ್ಲಿರುವ ಶೇ 4.9ರಷ್ಟು ಷೇರುಗಳನ್ನು ಆದಿತ್ಯ ಬಿರ್ಲಾ ಸಮೂಹಕ್ಕೆ ₹3,874 ಕೋಟಿಗಳಿಗೆ ಮಾರಾಟ ವರ್ಗಾಯಿಸಲಿದೆ. ಇದರಿಂದ ಸಮೂಹದ ಷೇರು ಶೇ 26ಕ್ಕೆ ಏರಿಕೆಯಾಗಲಿದೆ. ಅದೇ ವೇಳೆ ವೊಡಾಫೋನ್‌ ಷೇರು ಪ್ರಮಾಣ ಶೇ 45.1ಕ್ಕೆ ಇಳಿಕೆಯಾಗಲಿದೆ. ಉಳಿದ ಶೇ 28.9 ರಷ್ಟು ಷೇರುಗಳನ್ನು ಇತರೆ ಷೇರುದಾರರು ಹೊಂದಿದ್ದಾರೆ.

ಮುಂದಿನ ನಾಲ್ಕು ವರ್ಷದೊಳಗೆ ವೊಡಾಫೋನ್‌ ಹೊಂದಿರುವ ಷೇರು ಪ್ರಮಾಣಕ್ಕೆ ಸರಿಯಾಗಿ ಷೇರುಗಳನ್ನು ಹೊಂದಲು ಆದಿತ್ಯ ಬಿರ್ಲಾ ಸಮೂಹಕ್ಕೆ ಅವಕಾಶವಿದೆ. ಹೀಗಾಗಿ ಸಮೂಹ ವೊಡಾಫೋನ್‌ನಿಂದ ಪ್ರತಿ ಷೇರಿಗೆ₹130ರಂತೆ ಷೇರುಗಳನ್ನು ಖರೀದಿ ಮಾಡಲಿದೆ. ಒಂದೊಮ್ಮೆ ಸಮೂಹ ವಿಫಲವಾದರೆ, ವೊಡಾಫೋನ್‌ ಕಂಪೆನಿಯೇ ತನ್ನಲ್ಲಿರುವ ಷೇರುಗಳನ್ನು ಆದಿತ್ಯ ಬಿರ್ಲಾ ಸಮೂಹಕ್ಕೆ ಮಾರಾಟ ಮಾಡಲಿದೆ.

ಏರ್‌ಸೆಲ್‌ ಕೊಡುಗೆ
ಬೆಂಗಳೂರು:  ಮೊಬೈಲ್‌ ಸೇವಾ ಸಂಸ್ಥೆ ಏರ್‌ಸೆಲ್‌, ತನ್ನ ಎಲ್ಲ ಪ್ರೀಪೇಯ್ಡ್‌ ಬಳಕೆದಾರರಿಗೆ ಉಚಿತ ಇಂಟರ್‌ನೆಟ್‌  ಸೌಲಭ್ಯ ಪ್ರಕಟಿಸಿದೆ. ನಸುಕಿನ 3 ಗಂಟೆಯಿಂದ 5 ಗಂಟೆವರೆಗಿನ ಅವಧಿಯಲ್ಲಿ ಇಂಟರ್‌ನೆಟ್‌ ಬಳಕೆಯನ್ನು ಉಚಿತವಾಗಿ ಬಳಸಬಹುದಾಗಿದೆ. ಈ ಕೊಡುಗೆ 2 ತಿಂಗಳವರೆಗೆ ಇರಲಿದೆ.

ಮಹೀಂದ್ರ ಕೆಯುವಿ100: 50 ಸಾವಿರ ಮಾರಾಟ
ನವದೆಹಲಿ (ಪಿಟಿಐ): ಮಹೀಂದ್ರ ಕೆಯುವಿ100 ವಾಹನ ಮಾರಾಟವು 50 ಸಾವಿರ ಗಡಿ ದಾಟಿದೆ ಎಂದು ಕಂಪೆನಿ ತಿಳಿಸಿದೆ.
ಇದರ ಬೆಲೆ ₹45. ಲಕ್ಷದಿಂದ ₹7 ಲಕ್ಷದವರೆಗಿದೆ.2016ರ ಜನವರಿಯಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿತ್ತು.  ಗ್ರಾಹಕರು ನೀಡುತ್ತಿರುವ ಬೆಂಬಲಕ್ಕೆ ಈ ಪ್ರಮಾಣದ ಮಾರಾಟ ಪ್ರಗತಿ ಸಾಧಿಸಲು ಸಾಧ್ಯವಾಗಿರುವ ಗ್ರಾಹಕರಿಗೆ ಧನ್ಯವಾದ ಸೂಚಿಸಲು ಬಯಸುತ್ತೇವೆ ಎಂದು ಮಹೀಂದ್ರ ಆ್ಯಂಡ್‌ ಮಹೀಂದ ಅಧ್ಯಕ್ಷ ರಾಜನ್‌ ವಾದ್ರಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT