ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲ ಮನ್ನಾಕ್ಕೆ ರೈತ ಸಂಘ ಆಗ್ರಹ

ಕಕ್ಕೇರಾ: ಪದಾಧಿಕಾರಿಗಳ ನೇಮಕ ಸಭೆ
Last Updated 22 ಏಪ್ರಿಲ್ 2017, 5:07 IST
ಅಕ್ಷರ ಗಾತ್ರ
ಕಕ್ಕೇರಾ: ‘ರೈತರ ಸಾಲ ಮನ್ನಾ ಮಾಡುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಂಪೂರ್ಣ ವಿಫಲ ವಾಗಿವೆ’ ಎಂದು ಕರ್ನಾಟಕ ರಾಜ್ಯ ರೈತ ಸಂಘ(ಹಸಿರುಸೇನೆ)ಯ ರಾಜ್ಯ ಸಮಿತಿ ಕಾರ್ಯರ್ಶಿ ಮಲ್ಲಿಕಾರ್ಜುನ ಸತ್ಯಂಪೇಟ ದೂರಿದರು.
 
ಪಟ್ಟಣದ ಸಂಗಮೇಶ್ವರ ಮಠದಲ್ಲಿ ನಡೆದ  ಸಂಘದ ವಲಯ ಪದಾಧಿಕಾರಿ ಗಳ ನೇಮಕ ಸಭೆಯಲ್ಲಿ ಮಾತನಾಡಿದ ಅವರು, ‘ಭತ್ತ ಬೆಳೆ ಹಾಳಾಗಿದ್ದು, ರೈತರಿಗೆ ಬೆಳೆ ಪರಿಹಾರ ನೀಡಬೇಕು. ಬೆಳೆ ವಿಮೆ ಪರಿಹಾರವನ್ನು ಸಾಲಕ್ಕೆ ಜಮೆ ಮಾಡದೇ ರೈತರ ಖಾತೆಗೆ ಜಮೆ ಮಾಡಬೇಕು. ಪ್ರತಿ ಹಳ್ಳಿಯನ್ನು ಸಾರಾಯಿ ಮುಕ್ತ ಎಂದು ಘೋಷಿಸ ಬೇಕು’ ಎಂದರು.
 
ರೈತ ಮುಖಂಡರಾದ ಅಯ್ಯಣ್ಣ ಹಾಲಭಾವಿ, ಬಸವರಾಜ ಕೊಡಗಾ ನೂರ, ಬಸವರಾಜ ಕಮತಗಿ, ಹಣ ಮಂತ ಚೆನ್ನೂರ್, ದೇವೆಂದ್ರಪ್ಪ ಚೆನ್ನೂರ, ದೇವಿಂದ್ರಪ್ಪ ಪತ್ತಾರ, ಮಲ್ಲಯ್ಯ ವಗ್ಗಾ, ಹಣಮಂತ್ರಾಯ ಮಡಿವಾಳ, ಬಸವರಾಜ ನಾಯಕ, ಚಂದಪ್ಪ ಜಂಪಾ, ನಂದಪ್ಪ ಇಂದ್ರಗಿ, ಬುಚ್ಚಪ್ಪ ನಾಯಕ,ಮಾನಪ್ಪ ನಿಂಗಾ ಪುರ,  ಜೆಡೆಪ್ಪ ಕುರಿ, ಯಂಕಣ್ಣ ಕಾರ್ಲ ಕುಂಟಿ, ಪ್ರಕಾಶ ಆಲ್ದಾಳ್, ಸೋಮು ನಡಿಗೇರಿ, ಬಸವರಾಜ ಹಿರೇಮನಿ, ಬಸವರಾಜಪ್ಪ ದೇವತ್ಕಲ್, ಬಸಣ್ಣ ಸತ್ಯ, ಬಸಪ್ಪ ಬೇವೂರ್,ಪರಮಣ್ಣ ನಾಗರ  ಬಾಲದಂಡಪ್ಪ ಪುಟ್ಟಿ ಇದ್ದರು.
 
ಕಕ್ಕೇರಾ ಪಟ್ಟಣದ ರೈತ ಸಂಘದ ಪದಾಧಿಕಾರಿಗಳು: ತಿಪ್ಪಣ್ಣ ಜಂಪಾ (ಗೌರವಾಧ್ಯಕ್ಷ), ಚಂದ್ರಶೇಖರ ವಜ್ಜಲ್ (ಅಧ್ಯಕ್ಷ), ಬಸಪ್ಪ ಬೋಯಿ, ಮರೆಪ್ಪ, ನಂದಪ್ಪ ಕುರಿ, ಗೋವಿಂದ ಪತ್ತಾರ್ (ಪ್ರಧಾನ ಕಾರ್ಯದರ್ಶಿಗಳು), ಸೋಮು ಬನದೊಡ್ಡಿ (ಸಹ ಕಾರ್ಯ ದರ್ಶಿ), ಇಬ್ರಾಹಿಂ ದಖನಿ, ಗುರಪ್ಪ ಬೈರ ವಾಡಗಿ, (ಸಂಘಟನಾ ಕಾರ್ಯದರ್ಶಿ ಗಳು), ತಿರುಪತಿ ನಾಯ್ಕ (ಕೋಶಾಧ್ಯಕ್ಷ).
 
ಕಕ್ಕೇರಾ ವಲಯ ಘಟಕದ ಪದಾಧಿಕಾರಿಗಳು: ಚಂದ್ರಕಾಂತ ಸಕ್ರಿ (ಗೌರವಾಧ್ಯಕ್ಷ), ಮುದ್ದಣ್ಣ ಅಮ್ಮಾಪುರ (ಅಧ್ಯಕ್ಷ), ನಂದಪ್ಪ ಗುಮೇದಾರ ( ಕಾರ್ಯಾಧ್ಯಕ್ಷ), ನಾಗಪ್ಪ ಮಲಮತ್ತಿ, ಈರಣ್ಣ ಬೋಯಿ, ಸೋಮಣ್ಣ ತೇರಿನ್ (ಉಪಾಧ್ಯಕ್ಷರು), ಶಂಕರ ಜಾಧವ್ (ಪ್ರಧಾನ ಕಾರ್ಯದರ್ಶಿ), ಸಕ್ರೆಪ್ಪ, ಖಾದರಸಾಬ, ಜೆಟೆಪ್ಪ ಬೆಂಚಿಗಡ್ಡಿ (ಸಂಘಟನಾ ಕಾರ್ಯದರ್ಶಿ) ಅಮರಪ್ಪ ಮಂಗಿಹಾಳ( ಕೋಶಾಧ್ಯಕ್ಷ) ಕೊಡೇಕಲ್ ವಲಯದ ಸಂಚಾಲಕರಾಗಿ ಭೀಮಪ್ಪ ಮೂಲಿಮನಿ ಆಯ್ಕೆ ಮಾಡಲಾಗಿದೆ ಎಂದು ಮಲ್ಲಿಕಾರ್ಜುನ ಸತ್ಯಂಪೇಟ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT