ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗ್ಲಿಷ್‌ ಮಾಧ್ಯಮದತ್ತ ಸರ್ಕಾರಿ ಶಾಲೆಗಳು

ದಕ್ಷಿಣ ಕನ್ನಡ ಜಿಲ್ಲೆ: ಪ್ರವೇಶ ಪ್ರಕ್ರಿಯೆಯಲ್ಲಿ ಸುಧಾರಣೆ
Last Updated 22 ಏಪ್ರಿಲ್ 2017, 5:50 IST
ಅಕ್ಷರ ಗಾತ್ರ
ಮಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ಸರ್ಕಾರಿ ಶಾಲೆಗಳಿಗೆ ಸೇರುವ ಮಕ್ಕಳ ಸಂಖ್ಯೆ ತೀರಾ ಕಡಿಮೆಯಾಗುತ್ತಿದೆ ಎಂಬ ಆರೋಪ ಈ ಬಾರಿ ಕಡಿಮೆಯಾಗಿದೆ. ಸರ್ಕಾರಿ ಶಾಲೆಗಳಲ್ಲಿಯೂ ಇಂಗ್ಲಿಷ್‌ ಮಾಧ್ಯಮದಲ್ಲಿ ತರಗತಿಗಳು ಆರಂಭವಾಗಿದ್ದು, ಒಂದನೇ ತರಗತಿಗೆ ಸೇರುವ ಮಕ್ಕಳ ಸಂಖ್ಯೆಯಲ್ಲಿ ಏರಿಕೆ ಕಂಡು ಬಂದಿದೆ. 
 
ಮಂಗಳೂರಿಗೆ ಜಿಲ್ಲೆಯ ಹೊರಭಾಗ ದಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರು ವಲಸೆ ಬರುವುದರಿಂದ ವಲಸೆ ಕಾರ್ಮಿ ಕರ ಮಕ್ಕಳೇ ಇಲ್ಲಿನ ಸರ್ಕಾರಿ ಶಾಲೆ ಸೇರುತ್ತಿದ್ದರು. ಶಾಲೆ ಮುಚ್ಚುವ ಪ್ರಸಂಗ ಗಳು ಎದುರಾದಾಗಲೂ  ವಲಸೆ ಕಾರ್ಮಿ ಕರ ಮಕ್ಕಳು ಶಾಲೆಗೆ ಸೇರಿದ ಪರಿಣಾಮ ಶಾಲೆಗಳು ಮುನ್ನಡೆದ ಉದಾಹರಣೆಗಳಿವೆ. 
 
‘ಸಾಮಾಜಿಕವಾಗಿ ಎಲ್ಲ ಕ್ಷೇತ್ರಗಳಲ್ಲಿ ಇಂಗ್ಲಿಷ್‌ ಭಾಷಾ ತಿಳಿವಳಿಕೆಯೇ ಮುಖ್ಯ ವಾಗುತ್ತಿರುವ ಸಂದರ್ಭದಲ್ಲಿ ಕನ್ನಡ ಶಾಲೆಗಳಿಗೆ ಮಕ್ಕಳನ್ನು ಸೇರಿಸುವವರ ಸಂಖ್ಯೆ ಕಡಿಮೆಯಾಗುತ್ತ ಬಂದಿತ್ತು.  ಕಡಿಮೆ ಸಂಖ್ಯೆಯ ಮಕ್ಕಳಿರುವ ಶಾಲೆಗ ಳನ್ನು ಮುಚ್ಚುವ ಪ್ರಸ್ತಾವನೆಯೂ ಎದುರಾಗಿತ್ತು.

ಹೆಚ್ಚುವರಿ ಶಿಕ್ಷಕರ ಪರಿಕಲ್ಪನೆಯೂ ಇದೇ ಹಿನ್ನೆಲೆಯಲ್ಲಿ ಎದುರಾಗಿತ್ತು.’ ಎಂದು ಕಳೆದೆರಡು ವರ್ಷಗಳಲ್ಲಿ ಜಿಲ್ಲೆಯ ಸರ್ಕಾರಿ ಶಾಲೆಗಳ ಪರಿಸ್ಥಿತಿ ಯನ್ನು ಗಮನಿಸಿ ಶಿಕ್ಷಕಿಯೊಬ್ಬರು ವಿವರಿಸುತ್ತಾರೆ. 
 
‘ಆದರೆ ಇದೀಗ ಕನ್ನಡದ ಸಮರ್ಥ ಕಲಿಕೆಯ ಜೊತೆಗೆ ಒಂದನೇ ತರಗತಿ ಯಿಂದಲೇ ಇಂಗ್ಲಿಷ್‌ ಮಾಧ್ಯಮದಲ್ಲಿ ಕಲಿ ಯುವ ಅವಕಾಶ ಸರ್ಕಾರಿ ಶಾಲೆಯಲ್ಲಿ ದೊರೆತಿರುವುದರಿಂದ ಹೆಚ್ಚಿನ ಪೋಷಕರು ಸರ್ಕಾರಿ ಶಾಲೆಗಳತ್ತ ಮುಖ ಮಾಡುತ್ತಿದ್ದಾರೆ.
 
ಈ ಬಾರಿ ಸರ್ಕಾರಿ ಶಾಲೆಗಳಲ್ಲಿ ಪ್ರವೇಶ ಹೆಚ್ಚಾಗುವ ನಿರೀಕ್ಷೆ ಇದೆ. ಜೂನ್‌ ಮೊದಲ ವಾರದ ವೇಳೆಗೆ ಇದು ಸ್ಪಷ್ಟವಾಗಲಿದೆ’  ಎಂದು ಜಿಲ್ಲಾ ವಿದ್ಯಾಂಗ ಉಪನಿರ್ದೇಶಕ ವಾಲ್ಟರ್‌ ಡಿಮೆಲ್ಲೊ ಹೇಳಿದ್ದಾರೆ. 
 
ಮಣ್ಣಗುಡ್ಡೆಯ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ ‘ಯುಕೆಜಿ ಮತ್ತು ಒಂದನೇ ತರಗ ತಿಗಳಲ್ಲಿ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ನೀಡಲಾಗುವುದು’ ಎಂಬ ಫಲಕ ಹಾಕಲಾಗಿದೆ. 
 
ಶಾಲೆಯ ಮುಖ್ಯೋಪಾಧ್ಯಾಯಿನಿ ಜಾಯ್ಸ್‌ ಹೆನ್ರಿಟಾ ಅವರ ಪ್ರಕಾರ ‘ಕಳೆದ ವರ್ಷ ಯುಕೆಜಿಯಲ್ಲಿ ಕಲಿಯುತ್ತಿದ್ದ 25 ಮಂದಿ ಈ ಬಾರಿ ಒಂದನೇ ತರಗತಿ ಪ್ರವೇಶಿಸುತ್ತಿದ್ದಾರೆ. ಒಂದನೇ ತರಗತಿ ಯಲ್ಲಿ ಕಲಿಯುತ್ತಿದ್ದ 20 ಮಂದಿ ಎರಡನೇ ತರಗತಿ ಪ್ರವೇಶಿಸುತ್ತಿದ್ದಾರೆ’.  
 
ಮಂಗಳೂರು ಉತ್ತರ ವಿಭಾಗದಲ್ಲಿ ಕಾಟಿಪಳ್ಳದ 8ನೇ ಬ್ಲಾಕ್‌ ಶಾಲೆ, ನಡು ಗೋಡು ಶಾಲೆ ಮತ್ತು ಪಂಜಿಮೊಗರು ಶಾಲೆಯಲ್ಲಿ ಒಂದನೇ ತರಗತಿಯಿಂದಲೇ ಇಂಗ್ಲಿಷ್‌ ಮಾಧ್ಯಮದಲ್ಲಿ ತರಗತಿಗಳು ಆರಂಭವಾಗುತ್ತಿವೆ.
 
ಮರಕಡ ಶಾಲೆ ಹಾಗೂ ಸುರತ್ಕಲ್‌ ಮಧ್ಯ ಶಾಲೆ ಮತ್ತು ಕಾವೂರಿನ ಶಾಲೆ, ಬೆಂಗ್ರೆ ಕಸಬಾ ಶಾಲೆ ಯಲ್ಲಿಯೂ ಈಗಾಗಲೇ  ಇಂಗ್ಲಿಷ್‌ ಮಾಧ್ಯಮದಲ್ಲಿ ತರಗತಿಗಳು ಆರಂಭ ವಾಗಿವೆ’ ಎನ್ನುತ್ತಾರೆ ಮಂಗಳೂರು ಉತ್ತರ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಅಧಿಕಾರಿಗಳು. 
 
‘ಮಣ್ಣಗುಡ್ಡೆ ಶಾಲೆಯಲ್ಲಿ ಆಂಗ್ಲ ಮಾಧ್ಯಮದಲ್ಲಿ ಪಾಠ ಮಾಡಲು ಒಂದಿ ಬ್ಬರು ಅಧ್ಯಾಪಕರನ್ನು ಶಾಲೆಯ ಆಡಳಿತ ಮಂಡಳಿ ವತಿಯಿಂದ ನೇಮಿಸಲಾಗಿದೆ. ಕನ್ನಡ, ಹಿಂದಿ ಸೇರಿದಂತೆ ಕೆಲವು ಪಠ್ಯಗ ಳನ್ನು ಇರುವ ಶಿಕ್ಷಕರೇ ಬೋಧಿಸುತ್ತಾರೆ.
 
ಒಟ್ಟಿನಲ್ಲಿ ಮಕ್ಕಳಿಗೆ ಭಾಷಾ ಜ್ಞಾನ ಮತ್ತು ವಿಷಯ ಜ್ಞಾನಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ.’ ಎಂದು ಮುಖ್ಯೋಪಾಧ್ಯಾಯಿನಿ ಜಾಯ್ಸ್‌ ಹೆನ್ರಿಟಾ ಹೇಳುತ್ತಾರೆ.  
 
‘ಸರ್ಕಾರಿ ಶಾಲೆಗಳು ಇಂಗ್ಲಿಷ್‌ ಮಾಧ್ಯಮಕ್ಕೆ ತೆರೆದುಕೊಂಡಿದ್ದು, ಮುಂ ದಿನ ದಿನಗಳಲ್ಲಿ ಸರ್ಕಾರಿ ಶಾಲೆಗಳಿಗೆ ಸೇರುವ ಮಕ್ಕಳ ಸಂಖ್ಯೆ ಹೆಚ್ಚಾಗಬ ಹುದು. ಆದರೆ ಕನ್ನಡ ಮಾಧ್ಯಮ ಯುಗದ ಕೊನೆಯ ವರ್ಷಗಳನ್ನು ಕಾಣ ಬೇಕಾದ ಪರಿಸ್ಥಿತಿಯೂ ಸೃಷ್ಟಿಯಾಗಬ ಹುದು’ ಎಂಬ ಆತಂಕ ಪೋಷಕಿಯೂ ಆಗಿರುವ ಸುಧಾ ಅವರದು. 
***
ಎಲ್‌ಕೆಜಿ ಯುಕೆಜಿಯಿಂದಲೇ ಆಂಗ್ಲ ಮಾಧ್ಯಮದಲ್ಲಿ ಕಲಿಕೆ ಶುರು ಮಾಡಿದ ಬಳಿಕ ಸರ್ಕಾರಿ ಶಾಲೆಗೆ ಬರುವ ಮಕ್ಕಳ ಸಂಖ್ಯೆ ಹೆಚ್ಚಿದೆ. ಹಾಗೆಂದು ಕನ್ನಡ ಮಾಧ್ಯಮದಲ್ಲಿ ಕಲಿಕೆಯನ್ನು ನಿರ್ಲಕ್ಷಿಸುತ್ತಿಲ್ಲ.
ವಾಲ್ಟರ್‌ ಡಿಮೆಲ್ಲೊ, ಡಿಡಿಪಿಐ
***
ನಮ್ಮ ಶಾಲೆಯಲ್ಲಿ ಹಲವು ಅನುಕೂಲಗಳನ್ನೂ ಕಲ್ಪಿಸಲಾಗಿತ್ತು. ಇದೀಗ ಇಂಗ್ಲಿಷ್‌ ಮಾಧ್ಯಮ ಶಾಲೆ ಆರಂಭವಾಗಿದ್ದು, ಪ್ರವೇಶ ಪ್ರಕ್ರಿಯೆ ಸುಧಾರಿಸಿದೆ.
ಜಾಯ್ಸ್‌ ಹೆನ್ರಿಟಾ, ಮಣ್ಣಗುಡ್ಡೆ ಶಾಲೆ ಮುಖ್ಯೋಪಾಧ್ಯಾಯಿನಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT